ಬಹುನಿರೀಕ್ಷಿತ ರಿಯಾದ್ ಮೆಟ್ರೋ ಕುರಿತ ಮಾಹಿತಿ ಪ್ರದರ್ಶನ; ಜನನಿಬಿಡ

ರಿಯಾದ್: ಕಾಮಗಾರಿ ನಡೆಯುತ್ತಿರುವ ರಿಯಾದ್ ಮೆಟ್ರೋವನ್ನು ಸಾರ್ವಜನಿಕರಿಗೆ ಪರಿಚಯಿಸಲು ಅಲ್ಲಿನ ರಿಯಾದ್ ಡೆವಲಪ್ಮೆಂಟ್ ಅಥಾರಿಟಿ ಆಡಳಿತವು ಚಾಲ್ತಿಗೆ ತಂದ ಪ್ರದರ್ಶನವು ಜನರನ್ನು ಬರಸೆಳೆದಿದೆ. ಸಂಜೆ 4 ರಿಂದ ರಾತ್ರಿ 10 ರವರೆಗೆ ಪ್ರದರ್ಶನ ನಡೆಯುತ್ತಿದೆ.

ಸಾರ್ವಜನಿಕರಿಗಾಗಿ ನಿರ್ಮಾಣಗೊಳ್ಳುತ್ತಿರುವ ಪ್ರಥಮ ಮೆಟ್ರೋ ರಿಯಾದ್ ನಲ್ಲಿ ಕ್ಷಿಪ್ರಗತಿಯಲ್ಲಿ ನಿರ್ಮಾಣಗೊಳ್ಳುತ್ತಿದೆ. ಜನರಿಗೆ ಮಾಹಿತಿ ನೀಡುವ ಮತ್ತು ಪರಿಚಯಿಸುವ ಸಲುವಾಗಿ ಈ ಪ್ರದರ್ಶನ ಏರ್ಪಡಿಸಲಾಗಿದೆ. ಕಿಂಗ್ ಅಬ್ದುಲ್ ಅಝೀಝ್ ರಸ್ತೆ ಮತ್ತು ಅಬೂಬಕರ್ ಸಿದ್ದೀಖ್ ರಸ್ತೆಗಳ ನಡುವೆ ಪ್ರತ್ಯೇಕವಾಗಿ ಸಜ್ಜುಗೊಳಿಸಲಾದ ಪೆವಿಲಿಯನ್ ನಲ್ಲಿ ಬೋಗಿಗಳನ್ನು ಕೂಡ ಪ್ರದರ್ಶನಕ್ಕಿಡಲಾಗಿದೆ.

ಕಿಂಗ್ ಅಬ್ದುಲ್ ಅಝೀಝ್ ಪಬ್ಲಿಕ್ ಟ್ರಾನ್ಸ್‌ಪೋರ್ಟ್ ಯೊಜನೆಯ ಭಾಗವಾಗಿ ರಿಯಾದ್ ಮೆಟ್ರೋವನ್ನು ಪರಿಚಯಿಸಲಾಗಿತ್ತದೆ. ಸಾರ್ವಜನಿಕ ರಹದಾರಿ ವಲಯದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಲು ಮೆಟ್ರೊ ಮತ್ತು ಅನುಬಂಧಿತ ಸೌಕರ್ಯಗಳು ಅನುವು ಮಾಡಲಿದೆ ಎನ್ನಲಾಗಿದೆ.

ಮೆಟ್ರೋ ಕಾರ್ಯರೂಪಕ್ಕೆ ಬಂದರೆ ಟ್ರಾಫಿಕ್ ಕಂಟ್ರೋಲ್ ಹತೋಟಿಗೆ ಬರಲಿದೆ ಮತ್ತು ಯಾತ್ರಿಕರ ಸಮಯ ಉಳಿತಾಯಗೊಳ್ಳಲಿದೆ. ಅದೂ ಅಲ್ಲದೆ ಮಿತದರದಲ್ಲಿ ಅತ್ಯುತ್ತಮ ಯಾತ್ರಾ ಅನುಭವ ಲಭಿಸಲಿದೆ. ಮೆಟ್ರೋಗೆ ಸಂಭವಿಸಿದ ಸ್ಟೇಷನ್ಗಳು, ಅದರ ಕಾರ್ಯಕ್ಷಮತೆ, ಲಭ್ಯವಾಗಲಿರುವ ಸೌಕರ್ಯಗಳ ಕುರಿತು ಮಾಹಿತಿ ನೀಡುವ ವೀಡಿಯೋ ವನ್ನು ಪ್ರದರ್ಶನದಲ್ಲಿ ಕಾಣಬಹುದಾಗಿದೆ. ‘ರಿಯಾದ್ ಮೆಟ್ರೋ ಡಾಟ್ ಎಸ್ಎ‘ ಎಂಬ ವೆಬ್‌ಸೈಟ್ ನಲ್ಲಿ ನೋಂದಣಿ ಮಾಡುವವರಿಗೆ ಸಂದರ್ಶನದ ಪಾಸ್ ಉಚಿತವಾಗಿ ಲಭಿಸಲಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!