ಇನ್ನು ಮುಂದೆ ಉಮ್ರಾ ವಿಸಾದಲ್ಲಿ ಐತಿಹಾಸಿಕ ಸ್ಮಾರಕಗಳನ್ನೂ ಸಂದರ್ಶನ ಮಾಡಬಹುದು

ರಿಯಾದ್: ಉಮ್ರಾ ವಿಸಾದಲ್ಲಿ ಸೌದಿ ತಳುಪಿದವರಿಗೆ ಐತಿಹಾಸಿಕ ಸ್ಮಾರಕಗಳು ಮತ್ತು ಸ್ಥಳಗಳನ್ನು ಸಂದರ್ಶನ ಮಾಡಲು ಅವಕಾಶ ಲಭಿಸಲಿದೆ. ಇದಕ್ಕಾಗಿ ಎಕ್ಸ್ಟಂಟೆಡ್ ಉಮ್ರಾ ವಿಸಾ ಸಜ್ಜುಗೊಳಿಸುವುದಾಗಿ ಟೂರಿಸ್ಟ್ ಆ್ಯಂಡ್ ಹೆರಿಟೇಜ್ ಅಥಾರಿಟಿ ವ್ಯಕ್ತಪಡಿಸಿದೆ.

ಸದ್ಯ ಚಾಲ್ತಿಯಲ್ಲಿರುವ ಉಮ್ರಾ ವಿಸಾದಲ್ಲಿ ತೆರಳಿದವರಿಗೆ ಮಕ್ಕಾ, ಮದೀನಾ, ಜಿದ್ದಾ ಮುಂತಾದೆಡೆ ಸಂಚರಿಸುವ ಅವಕಾಶವನ್ನು ಮಾತ್ರ ನೀಡುತ್ತಿದ್ದವು. ಆದರೆ ನವೀಕರಿಸಲಾದ ಹೊಸ ಉಮ್ರಾ ವಿಸಾದಲ್ಲಿ ದೇಶದ ವಿವಿಧ ಐತಿಹಾಸಿಕ ಪುಣ್ಯ ಸ್ಥಳಗಳಿಗೆ ಬೇಟಿ ನೀಡುವ ಅವಕಾಶವನ್ನು ನೀಡಲಿದೆ ಎಂದು ಟೂರೀಸಂ ಆ್ಯಂಡ್ ಹೆರಿಟೇಜ್ ಅಥಾರಿಟಿಯ ಅಧಿಕಾರಿ ಮುಹಮ್ಮದ್ ಅಲ್ ಉಮರಿ ತಿಳಿಸಿದ್ದಾರೆ.

ಒಂದು ತಿಂಗಳ ಕಾಲಾವಧಿ ಇರುವ ಪ್ರಸ್ತುತ ವಿಸಾ ಪಡೆಯಲು ಕೆಲವು ಷರತ್ತುಗಳಿವೆ ಎಂದು ವ್ಯಕ್ತಪಡಿಸಿದ ಅವರು, ಎಲ್ಲಾ ದೇಶಗಳಿಗೂ ಪ್ರಸ್ತುತ ವಿಸಾ ಲಭಿಸಲಿದೆ ಎಂದರು. ಪ್ರಥಮ ಹಂತವಾಗಿ 65 ದೇಶಗಳಿಗೆ ಹೊಸ ವಿಸಾ ಜಾರಿಗೊಳಿಸಲಾಗುತ್ತದೆ. ಎರಡನೇ ಹಂತವಾಗಿ ಇನ್ನಷ್ಟು ದೇಶಗಳಿಗೆ ವಿಸ್ತರಿಸಲಾಗುವುದು ಎಂದು ಟೂರೀಸಂ ಆ್ಯಂಡ್ ಹೆರಿಟೇಜ್ ಅಥಾರಿಟಿಯ ಅಧ್ಯಕ್ಷ ಪ್ರಿನ್ಸ್ ಸುಲ್ತಾನ್ ಬಿನ್ ಸಲ್ಮಾನ್ ಈ ಹಿಂದೆ ತಿಳಿಸಿದ್ದರು.

ಸೌದಿಯ ಎಲ್ಲಾ ವಲಯಗಳನ್ನು ವಿದೇಶೀಯರ ಆಕರ್ಷಣೆಗಾಗಿ ಸಜ್ಜು ಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ವಿಷನ್ 2030 ರ ಭಾಗವಾಗಿ ವಿನೋದ ಯಾತ್ರೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಹಲವಾರು ಹೊಸ ಯೊಜನೆಗಳನ್ನು ರೂಪೀಕರಿಸಲಾಗಿದ್ದು,ಅದರ ಭಾಗವಾಗಿ ಹೊಸ ಎಕ್ಷ್ಟಂಟೆಡ್ ಉಮ್ರಾ ವಿಸಾವನ್ನು ಪರಿಚಯಿಲಾಗುತ್ತಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!