ಜಾರಿಗೆಬೈಲ್ ನಲ್ಲಿ “ಮದ್ರಸ ಸಮ್ಮೇಳನ” ಕ್ಕೆ ಚಾಲನೆ

ಬೆಳ್ತಂಗಡಿ : ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಆಫ್ ಇಂಡಿಯ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸುನ್ನೀ  ಜಂಇಯ್ಯತುಲ್ ಮುಅಲ್ಲಿಮೀನ್ ಕೇಂದ್ರ ಸಮಿತಿಯ ನಿರ್ದೇಶನದಂತೆ 8864  ಮದ್ರಸ ಕೇಂದ್ರಗಳಲ್ಲಿ ಜನವರಿ 10  ರಿಂದ ಫೆಬ್ರವರಿ 15  ರ ತನಕ ನಡೆಯಲಿರುವ  ಮದ್ರಸ ಸಮ್ಮೇಳನ ಕಾರ್ಯಕ್ರಮದ ಭಾಗವಾಗಿ  ‘ಧ್ವಜ ದಿನ’  ಆಚರಣೆಯನ್ನು ಬದ್ರಿಯಾ ಜುಮ್ಮಾ ಮಸ್ಜಿದ್ ಅಧೀನದಲ್ಲಿರುವ ಹಿದಾಯತುಲ್ ಇಸ್ಲಾಂ ಸೆಕೆಂಡರಿ ಮದ್ರಸ ವಠಾರದಲ್ಲಿ ಧ್ವಜಾರೋಹಣ ಹಾಗೂ ಸಭಾ ಕಾರ್ಯಕ್ರಮ ನಡೆಯಿತು.
ಸ್ಥಳೀಯ ಖತೀಬರಾದ ಅಬ್ದುರಹ್ಮಾನ್ ಬಾಖವಿ ಉಸ್ತಾದ್  ದುಆ ಆಶೀರ್ವಚನ ಮಾಡಿದರು. ಸ್ವಾಗತ ಸಮಿತಿಯ ಚೇರ್ಮ್ಯಾನ್ ಧ್ವಜಾರೋಹಣ ನೆರವೇರಿಸಿದರು. ಸ್ಥಳೀಯ ಮುಖ್ಯೋಪಾಧ್ಯಾಯರಾದ ಎನ್.ಎಂ  ಶರೀಫ್ ಸಖಾಫಿ ನೆಕ್ಕಿಲ್ ಪ್ರಾಸ್ತಾವಿಕ ಮಾತುಗಳ ಮೂಲಕ ನೆರೆದ ಗಣ್ಯರಿಗೆ ಸ್ವಾಗತ ಕೋರಿದರು.
 ವೇದಿಕೆಯಲ್ಲಿ ಜಮಾ ಅತ್ ಕೋಶಾಧಿಕಾರಿ ಹಮೀದ್ ಮೆಸ್ಕಾಂ, ಸ್ವಾಗತ ಸಮಿತಿ ಕೋಶಾಧಿಕಾರಿ ಪುತ್ತು ಮೋನು ಕುಕ್ಕುಡಿ, ರಝಾಕ್  ಸ ಅದಿ ಹಾಗೂ ಊರಿನ ಗಣ್ಯ ನೇತಾರು , ಜಮಾತ್ ಸಮಿತಿ ಪ್ರತಿನಿಧಿಗಳು , ಮುತ ಅಲ್ಲಿಮರು, ವಿದ್ಯಾರ್ಥಿಗಳು ಹಾಗೂ ರಕ್ಷಕರು ಉಪಸ್ಥಿತರಿದ್ದರು. ಕೊನೆಗೆ ರಝಾಕ್ ಸ ಅದಿ ಧನ್ಯವಾದವಿತ್ತರು

Leave a Reply

Your email address will not be published. Required fields are marked *

error: Content is protected !!