janadhvani

Kannada Online News Paper

ವಿದೇಶೀಯರಿಗೆ ವಿಧಿಸಲಾಗುವ ಲೆವಿಯನ್ನು ಹಿಂಪಡೆಯಲಾಗುವುದಿಲ್ಲ

ರಿಯಾದ್: ಸೌದಿ ಅರೇಬಿಯಾದಲ್ಲಿ ವಿದೇಶಿ ನೌಕರರಿಗೆ ವಿಧಿಸಲಾಗುವ ಲೆವಿಯನ್ನು ಹಿಂಪಡೆಯಲಾಗುವುದಿಲ್ಲ ಎಂದು ಕಾರ್ಮಿಕ ಸಚಿವಾಲಯ ವ್ಯಕ್ತಪಡಿಸಿದೆ.
ಹಿಂದಿನ ನಿರ್ಧಾರದ ಪ್ರಕಾರ, ಲೆವಿಯು ಮುಂದಿನ ವರ್ಷದಿಂದ ತಿಂಗಳಿಗೆ 600 ರಿಯಾಲ್ ಪಾವತಿಸಬೇಕಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಕಾರ್ಮಿಕ ಮತ್ತು ಸಾಮಾಜಿಕ ವ್ಯವಹಾರಗಳ ಸಚಿವಾಲಯವು ಆಡಳಿತಗಾರ ಸಲ್ಮಾನ್ ರಿಗೆ ಲೆವಿ ಹೆಚ್ಚಿಸದಿರುವಂತೆ ಶಿಫಾರಸ್ಸು ಸಲ್ಲಿಸಿದೆ ಎಂದು ವರದಿಯಾಗಿದ್ದವು. ಆದರೆ, ಕಾರ್ಮಿಕ ಸಚಿವಾಲಯ ಇದು ಆಧಾರ ರಹಿದ ವರದಿ ಎಂದು ಹೇಳಿದೆ.
ಕಳೆದ ವರ್ಷ ವಿಧಿಸಲಾಗುತ್ತಿದ್ದ 2,400 ರಿಯಾಲ್‌ (44,216 ರೂಪಾಯಿ) ಲೆವಿಯನ್ನು ಈ ವರ್ಷ 4,800 ರಿಯಾಲ್‌ಗಳಿಗೆ (ರೂ 88,433) ಏರಿಸಲಾಗಿದೆ.
ಮುಂದಿನ ವರ್ಷ ಅದು 7,200 ಕ್ಕೆ ಏರಿಕೆಯಾಗುತ್ತದೆ (ರೂ 1,32,650). ಈ ವಿಷಯದಲ್ಲಿ ಕಾರ್ಮಿಕ ಸಚಿವಾಲಯವು ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. 2020 ರ ಹೊತ್ತಿಗೆ, ಕಾರ್ಮಿಕ ಸಚಿವಾಲಯವು ಲೆವಿಯನ್ನು 9,600 (1,76,866) ಗೆ ಏರಿಸಲಾಗುವುದಾಗಿ ಈ ಹಿಂದೆ ಘೋಷಿಸಿದ್ದವು

ಅದೇ ಸಮಯ, ಹೆಚ್ಚಿನ ಸಂಖ್ಯೆಯಲ್ಲಿ ದೇಶೀಯರು ಕೆಲಸ ಮಾಡುವ ಸಂಸ್ಥೆಗಳಲ್ಲಿ ದುಡಿಯುವ ವಿದೇಶಿ ಕಾರ್ಮಿಕರಿಗೆ ಲೆವಿ ಶುಲ್ಕವು ಮಾಸಿಕ 300 (5,527) ರಿಯಾಲ್ ಆಗಿದೆ.

ಸ್ವದೇಶಿಕರಣವನ್ನು ಉತ್ತೇಜಿಸಲು ಮತ್ತು ಖಾಸಗಿ ವಲಯದಲ್ಲಿ ವಿದೇಶಿಯರು ಅವಲಂಬಿಸುವುದನ್ನು ಕಡಿಮೆ ಮಾಡಲು 2017 ರಿಂದಲೂ ಲೆವಿ ಯನ್ನು ಜಾರಿಗೊಳಿಸಲಾಗಿದೆ. ವಿದೇಶಿಯರ ಲೆವಿ ಹಣವನ್ನು ಅವರ ಮಾಲಿಕರು ಪಾವತಿಸುವಂತೆ ಕಾರ್ಮಿಕ ಸಚಿವಾಲಯವು ತಿಳಿಸಿದ್ದವು.

error: Content is protected !! Not allowed copy content from janadhvani.com