janadhvani

Kannada Online News Paper

ಕೇರಳ ಹಜ್ ಸಮಿತಿಯ ನೂತನ ಅಧ್ಯಕ್ಷರಾಗಿ ಸಿ.ಮುಹಮ್ಮದ್ ಫೈಝಿ ಆಯ್ಕೆ

ತಿರುವನಂತಪುರಂ: ಕೇರಳ ರಾಜ್ಯ ಹಜ್ ಸಮಿತಿಯು ಸಿ.ಮುಹಮ್ಮದ್ ಫೈಝಿ ಅವರನ್ನು ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ.

ಮಂತ್ರಿ ಕೆ.ಟಿ ಜಲೀಲ್ ಅವರ ಅಧ್ಯಕ್ಷತೆಯಲ್ಲಿ ಸೇರಿದ ನೂತನ ಹಜ್ ಸಮಿತಿಯ ಪ್ರಥಮ ಸಭೆಯಲ್ಲಿ ಅಧ್ಯಕ್ಷರನ್ನು ಆಯ್ಕೆ ಮಾಡಲಾಯ್ತು. ತೊಡಿಯೂರ್ ಮುಹಮ್ಮದ್ ಕುಂಞೆ ಅಧ್ಯಕ್ಷರಾಗಿದ್ದ ಹಜ್ ಸಮಿತಿಯ ಕಾಲಾವಧಿ ಪೂರ್ಣ ಗೊಂಡ ಹಿನ್ನಲೆಯಲ್ಲಿ ಹಜ್ ಸಮಿತಿಯನ್ನು ಪುನಃರಚಿಸಿ  ಸರಕಾರ ಆದೇಶ ಹೊರಡಿಸಿತ್ತು.

ಕೇರಳ ಮುಸ್ಲಿಮ್ ಜಮಾಅತ್ ರಾಜ್ಯ ಪ್ರ, ಕಾರ್ಯದರ್ಶಿಯೂ, ಕಾರಂದೂರ್ ಮರ್ಕಝ್ ಕಾರ್ಯದರ್ಶಿಯೂ, ಸಿರಾಜ್ ದಿನಪತ್ರಿಕೆಯ ಪ್ರಕಾಶಕರೂ, ಪ್ರಮುಖ ಬರಹಗಾರರೂ ಭಾಷಣಗಾರರೂ ಆಗಿದ್ದಾರೆ ಸಿ.ಮುಹಮ್ಮದ್ ಫೈಝಿ.

ಇವರು, ಸಮಸ್ತ ಕೇರಳ ಜಮ್ ಇಯ್ಯತುಲ್ ಉಲಮಾ ಕೇಂದ್ರ ಮುಶಾವರ ಸದಸ್ಯರೂ, ದೆಹಲಿ ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿರುವ ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಆಫ್ ಇಂಡಿಯಾ ಮತ್ತು ಅಲ್ಪ ಸಂಖ್ಯಾತ  ಶಿಕ್ಷಣ ಸಮಿತಿ ಆಂಗ್ಲ ಮಾಧ್ಯಮ ಶಾಲೆಗಳ ಒಕ್ಕೂಟ ಇವುಗಳಲ್ಲಿ ಕಾರ್ಯ ನಿರ್ವಾಹಕ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೇರಳ ವಖ್ಫ್ ಬೋರ್ಡ್ ಸದಸ್ಯರಾಗಿಯೂ ಸೇವೆ ಗೈದಿದ್ದರು.  ಕಲ್ಲಿಕೋಟೆ ಜಿಲ್ಲೆಯ ಕೊಡುವಳ್ಳಿ ನಿವಾಸಿಯಾಗಿದ್ದಾರೆ ಸಿ.ಮುಹಮ್ಮದ್ ಫೈಝಿ.

ಪಟ್ಟಿಕ್ಕಾಡ್ ಜಾಮಿಅ ನೂರಿಯ್ಯಾ ದಿಂದ ಫೈಝಿ ಪದವಿ ಪಡೆದು, ಈಜಿಪ್ಟ್ ಅಲ್ ಅಝ್ ಹರ್ ವಿಶ್ವವಿದ್ಯಾಲಯದಲ್ಲಿ ಲೀಡರ್ ಶಿಪ್ ತರಬೇತಿ ಪೂರ್ತಿ ಗೊಳಿಸಿದ್ದಾರೆ. ಕಾಲಿಕಟ್ ವಿಶ್ವವಿದ್ಯಾಲಯದಿಂದ ಅರಬಿ ಭಾಷೆಯಲ್ಲಿ ಪದವಿ ಮತ್ತು ಮೌಲಾನಾ ಆಝಾದ್ ವಿಶ್ವವಿದ್ಯಾಲಯದಿಂದ ಉರ್ದು ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿದ್ದಾರೆ. ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ರಾಜ್ಯಾಧ್ಯಕ್ಷ , ಸುನ್ನಿ ಯುವಜನ ಸಂಘ ರಾಜ್ಯ ಪ್ರ,ಕಾರ್ಯದರ್ಶಿ ಯಾಗಿಯೂ ಕಾರ್ಯಾಚರಿಸಿದ್ದರು. ಮರ್ಕಝ್ ಶರೀ ಅತ್ ಕಾಲೇಜಿನಲ್ಲಿ ದೀರ್ಘಕಾಲದಿಂದ ಹಿರಿಯ ಪ್ರಾಧ್ಯಾಪಕರಾಗಿ ಸೇವೆಗೆಯ್ಯುತ್ತಿದ್ದಾರೆ.

ಜೋರ್ಡಾನ್, ಈಜಿಪ್ಟ್, ಮಲೇಷಿಯಾ, ಯು ಎ ಇ ಮುಂತಾದ ವಿದೇಶ ರಾಜ್ಯಗಳಲ್ಲಿ ಹಲವು ಅಂತಾರಾಷ್ಟ್ರ  ಸಮ್ಮೇಳನಗಳಲ್ಲಿ ಭಾರತೀಯ ಪ್ರತಿನಿಧಿಯಾಗಿ ಪ್ರಬಂಧಗಳನ್ನು ಮಂಡಿಸಿದ್ದರು. ಕಳೆದ ನಾಲ್ಕು ದಶಕಗಳಲ್ಲಿ ದೇಶದ ವಿವಿಧ ಭಾಗಗಳಲ್ಲೂ ಅರಬ್ ದೇಶಗಳಲ್ಲೂ ಸಾವಿರಾರು ಉಪನ್ಯಾಸಗಳನ್ನು ನಡೆಸಿದ್ದಾರೆ.ಇಂಗ್ಲೀಷ್,ಅರಬಿ, ಮಲಯಾಳಂ, ಉರ್ದು ಹಾಗೂ ಹಿಂದಿ ಭಾಷಾ ತಜ್ಞರಾಗಿದ್ದಾರೆ.

ಕೃತಿಗಳು:ಖುರಾನ್ ಅಧ್ಯಯನ ಮತ್ತು ಪಠಣ,ಭಾರತೀಯ ಸಂವಿಧಾನ ಮತ್ತು ಷರಿಯಾ

 

error: Content is protected !! Not allowed copy content from janadhvani.com