janadhvani

Kannada Online News Paper

ಕುವೈಟ್: ಸಂದರ್ಶನ ವಿಸಾ ಕಾಲಾವಧಿ ಒಂದು ತಿಂಗಳು ಮಾತ್ರ

ಕುವೈತ್ ಸಿಟಿ: ಸಂದರ್ಶನ ವಿಸಾವನ್ನು ಪ್ರತ್ಯೇಕ ಸಂದರ್ಭಗಳಲ್ಲಿ ಎರಡು ವಾರಗಳವರೆಗೆ ವಿಸ್ತರಿಸಲಾಗುವುದು ಎಂದು ನಾಗರಿಕ- ಪಾಸ್‌ಪೋರ್ಟ್ ಖಾತೆಯ ಅಂಡರ್-ಸೆಕ್ರೆಟರಿ ಮೇಜರ್ ಜನರಲ್ ಶೈಖ್ ಫೈಝಲ್ ಅಲ್ ನವಾಫ್ ಅಲ್-ಸಬಾಹ್ ತಿಳಿಸಿದ್ದಾರೆ.

ಆರೋಗ್ಯ ಸಂಬಂಧಿತ  ಕಾರಣಗಳಿಗೆ ಮಾನವೀಯ ಪರಿಗಣನೆಗಳ ಮೇಲೆ ಈ ಸೇವೆ ದೊರಕಲಿದ್ದು, ನಿಗದಿತ ಶುಲ್ಕ ವಿಧಿಸಿ ಈ ಸೇವೆ ಒದಗಿಸುವಂತೆ ಗೃಹ ಇಲಾಖೆಯ ವಿವಿಧ ಪ್ರಾದೇಶಿಕ ಕಛೇರಿಗಳಿಗೆ ಕಳುಹಿಸಲಾದ ಸುತ್ತೋಲೆಗಳಲ್ಲಿ ಅವರು ವ್ಯಕ್ತಪಡಿಸಿದ್ದಾರೆ.

ಅವಲಂಬಿತ / ವಾಣಿಜ್ಯ / ಪ್ರವಾಸ ಭೇಟಿಯಲ್ಲಿ ದೇಶಕ್ಕೆ ಬಂದ ಎಲ್ಲರೂ ಅಗತ್ಯವಿದ್ದಾಗ ಈ ಪ್ರಯೋಜನವನ್ನು ಬಳಸಿಕೊಳ್ಳಬಹುದು.ಯಾವುದೇ ಸಂದರ್ಶಕ ವೀಸಾದ ಭೇಟಿಯ ಕಾಲಾವಧಿಯನ್ನು ಒಂದು ತಿಂಗಳಾಗಿ ಇತ್ತೀಚೆಗೆ ನಿಗದಿಪಡಿಸಲಾಗಿತ್ತು.

ಈ ಹಿಂದೆ ಅವಲಂಬಿತ ವೀಸಾಗಳಲ್ಲಿರುವ ಹೆತ್ತವರು, ಮಕ್ಕಳು, ಸಂಗಾತಿ ಅಥವಾ ಗಂಡಂದಿರಿಗೆ ಕುವೈತ್ನಲ್ಲಿ ಉಳಿಯುವ ಅವಧಿಯು ಮೂರು ತಿಂಗಳುಗಳಾಗಿದ್ದವು. ಇತರ ವಿಭಾಗಗಳಿಗೆ ಒಂದು ತಿಂಗಳ ಅವಧಿ ನಿಡಲಾಗುತ್ತಿದ್ದವು. ಸಂದರ್ಶನ ವೀಸಾದ ಕಾಲಾವಧಿಯನ್ನು ಒಂದು ತಿಂಗಳಿಗೆ ಹೆಚ್ಚಾಗಿ ನವೀಕರಿಸಬಾರದು ಎಂದು ನಿರ್ಧರಿಸಲಾಗಿದೆ.

ವಸತಿ ಕಾರ್ಯಾಲಯಕ್ಕೆ ಭೇಟಿ ನೀಡಿದ ಮೇಜರ್ ಜನರಲ್ ಶೈಖ್ ಫೈಝಲ್ ಅಲ್ ನವಾಫ್ ಸ್ಥಳೀಯ ನಿವಾಸಿಗಳಿಂದ ದೂರುಗಳು ಮತ್ತು ಸಲಹೆಗಳನ್ನು ಪಡೆದರು. ವಿವಿಧ ಉದ್ದೇಶಗಳಿಗಾಗಿ ಕಚೇರಿಯನ್ನು ತಲುಪುವವರಿಗೆ ಸೌಲಭ್ಯಗಳನ್ನು ಒದಗಿಸಿ ಕೊಡುವುದು ಈ ದಿಢೀರ್ ಭೇಟಿಯ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ಉಪ ಮುಖ್ಯಮಂತ್ರಿ ಮತ್ತು ಗೃಹ ಸಚಿವ ಲೆಫ್ಟಿನೆಂಟ್ ಜನರಲ್ (ರಿಟ್) ಶೈಖ್ ಖಾಲಿದ್ ಅಲ್ ಜರಾ ಅಲ್-ಸಬಾಹ್, ವಸತಿ ಇಲಾಖೆಯ ಎಲ್ಲಾ ಕಚೇರಿಗಳಲ್ಲಿನ ಚಟುವಟಿಕೆಗಳು ಪಾರದರ್ಶಕವಾಗಿದೆ ಎಂದರು.

error: Content is protected !! Not allowed copy content from janadhvani.com