janadhvani

Kannada Online News Paper

ಚಾಲಕರೇ ಎಚ್ಚರ..! ಅಬುಧಾಬಿ ರಸ್ತೆಗಳ ವೇಗದ ಮಿತಿಯಲ್ಲಿ ಬದಲಾವಣೆ

ಅಬುಧಾಬಿ: ನಾಳೆಯಿಂದ ಅಬುಧಾಬಿ ರಸ್ತೆಗಳಲ್ಲಿ ಪ್ರತಿ ಗಂಟೆಗೆ 20 ಕಿಲೋಮೀಟರ್, ಗರಿಷ್ಠ ವೇಗಮಿತಿಗಿಂದ ಹೆಚ್ಚು ವೇಗದಲ್ಲಿ ಸಂಚರಿಸಬಹುದೆಂಬ ಅನುಮತಿಯನ್ನು ರದ್ದು ಮಾಡಲಾಗುವುದು. ಹೊಸ ವೇಗದ ಮಿತಿಯನ್ನು ಆಗಸ್ಟ್ 12 ರಿಂದ ಜಾರಿಗೆ ತರಲಾಗುವುದು ಎಂದು ಅಬುಧಾಬಿ ಪೊಲೀಸರು ತಿಳಿಸಿದ್ದಾರೆ.

100 ಕಿ.ಮೀ. ಇರುವ ಕಡೆ 120 ಕಿ.ಮೀ. ವೇಗದಲ್ಲಿ ಸಂಚರಿಸುವುದು ಕಾನೂನುಬದ್ಧವಾಗಿದ್ದವು. ಆದರೆ, ಆಗಸ್ಟ್‌ 12ರಿಂದ ಅಬುಧಾಬಿ ರಸ್ತೆಗಳಲ್ಲಿನ ವೇಗದ ಮಿತಿಯನ್ನು ಮೀರಿದವರಿಗೆ ದಂಡ ವಿಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಮುಖ್ಯರಸ್ತೆಗಳು ಮತ್ತು ಒಳರಸ್ತೆಗಳಲ್ಲಿಯೂ ಹೆಚ್ಚುವರಿ ವೇಗವನ್ನು ಅನುಮತಿಸಲಾಗಿದ್ದವು. ನಗರದ ಗರಿಷ್ಠ ವೇಗವು ಗಂಟೆಗೆ 60 ಕಿಮೀ ಮತ್ತು 80 ಕಿ.ಮೀ. ಆಗಿದೆ.
ಅಲ್ಲಿ ಒಂದು ಕಿಲೋ ಮೀಟರ್ ವೇಗ ಹೆಚ್ಚಾಗಿದ್ದರೂ ದಂಡ ಕಟ್ಟಬೇಕಾಗುತ್ತದೆ. ಅಬುಧಾಬಿ ರಸ್ತೆಗಳಲ್ಲಿ ಸಂಭವಿಸುತ್ತಿರುವ ಅಪಘಾತಗಳಿಗೆ ಟ್ರಾಫಿಕ್ ಉಲ್ಲಂಘನೆಗಳೇ ಕಾರಣ ಎನ್ನುವ ಬಗ್ಗೆ ಅಧ್ಯಯನದಿಂದ ತಿಳಿದುಬಂದ ಕಾರಣ ಹೊಸ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಬುಧಾಬಿ ಪೊಲೀಸ್ ಮುಖ್ಯಸ್ಥ ಮೇಜರ್ ಜನರಲ್ ಮುಹಮ್ಮದ್ ಖಲ್ಫಾನ್ ಅಲ್ ರುಮೈತಿ ಹೇಳಿದರು.

ಹೊಸ ವೇಗ ಮಿತಿಯ ಬಗ್ಗೆ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳ ಮೂಲಕ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಅವರು ಹೇಳಿದರು.
ದುಬೈ, ಅಬುಧಾಬಿ ಮತ್ತು ಪಶ್ಚಿಮ ಪ್ರಾಂತಗಳಿಗೆ ಪ್ರಯಾಣಿಸುವವರು ಈ ಪರಿಷ್ಕರಣೆಯನ್ನು ಗಮನಿಸದಿದ್ದಲ್ಲಿ ಇಂದಿನಿಂದ ದಂಡ ಪಾವತಿಸಬೇಕಾದೀತು ಎಂದು ಎಚ್ಚರಿಸಲಾಗಿದೆ.

error: Content is protected !! Not allowed copy content from janadhvani.com