ಕೆಸಿಎಫ್ ಬಹರೇನ್ ನಿಯೋಗದಿಂದ ರಾಹುಲ್ ಗಾಂಧಿ ಹಾಗೂ ಡಾ. ಆರತಿ ಕೃಷ್ಣ ಭೇಟಿ ಹಾಗೂ ಮನವಿ ಸಲ್ಲಿಕೆ

ಬಹರೇನ್ : ಜಾಗತಿಕ ಮಟ್ಟದಲ್ಲಿ ಗಲ್ಫ್ ರಾಷ್ಟ ಗಳ ಪ್ರವಾಸ ಹಾಗೂ ಭಾರತೀಯ ಮೂಲದವರಿಂದ ಸ್ಥಾಪಿತವಾದ ಜಾಗತಿಕ ಸಂಘಟನೆ ( GOPIO – Global Oraganisation Of People Of Indian Origin) ಆಯೋಜಿಸಿದ ಸಮ್ಮೇಳನಕ್ಕೆ  ಭಾಗವಹಿಸಲು  ಬಹರೇನ್ ಗೆ  ಆಗಮಿಸಿದ ಸನ್ಮಾನ್ಯ ಶ್ರೀ ರಾಹುಲ್ ಗಾಂಧಿ ಹಾಗೂ ಶ್ರೀಮತಿ  ಡಾ. ಆರತಿ ಕೃಷ್ಣ  ಹಾಗೂ ಇನ್ನಿತರ ಗಣ್ಯ ವ್ಯಕ್ತಿಗಳನ್ನು ಅನಿವಾಸಿ ಕನ್ನಡಿಗರ  ಸಂಘಟನೆಯಾದ ಬಹರೇನ್  ಕೆ ಸಿ ಎಫ್ ನಿಯೋಗವು ಭೇಟಿ ನೀಡಿ  ಕೆ ಸಿ ಎಫ್ ಬಹರೇನ್  ಪರಿಚಯ ಹಾಗೂ  ಕಾರ್ಯಚಟುವಟಿಕೆಯನ್ನು ವಿವರಿಸಿದರು.
ಈ ಸಂದರ್ಭದಲ್ಲಿ ನಿಯೋಗವು ಅನಿವಾಸಿ ಕನ್ನಡಿಗರ ಸಮಸ್ಯೆಯನ್ನು, ಹಾಗೂ ಬೇಡಿಕೆಯನ್ನು ಮನವಿ ಮೂಲಕ ಸಲ್ಲಿಸಿದರು. ಈ ನಿಯೋಗದಲ್ಲಿ ಕೆ ಸಿ ಎಫ್ ಬಹರೈನ್ ಐ ಎನ್ ಸಿ ನೇತಾರರಾದ  ಅಲಿ ಮುಸ್ಲಿಯಾರ್, ಜಮಾಲುದ್ದೀನ್ ವಿಠ್ಠಲ್  ಕೆ ಸಿ ಎಫ್ ನೇತಾರರಾದ ಬಶೀರ್ ಕಾರ್ಲೇ, ಹನೀಫ್ ಕಿನ್ಯಾ , ಮಜೀದ್ ಮಾದಾಪುರ , ಕರೀಮ್ ಉಚ್ಚಿಲ , ಹನೀಫ್ ಗುರುವಾಯನಕೆರೆ , ಇಕ್ಬಾಲ್ ಮಂಜನಾಡಿ ಹಾಗೂ ಸಮದ್ ಉಜಿರೆಬೆಟ್ಟು  ಉಪಸ್ಥಿತರಿದ್ದರು .

Leave a Reply

Your email address will not be published. Required fields are marked *

error: Content is protected !!