ಅಲ್ ಮದೀನಾ ಮ0ಜನಾಡಿ ಅಲ್ ಕೋಬರ್ ಘಟಕಕ್ಕೆ ನೂತನ ಸಾರಥ್ಯ

ದಮ್ಮಾಮ್ :ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್,ಮಂಜನಾಡಿ ಇದರ ದಮ್ಮಾಮ್ ವಲಯ ಸಮಿತಿಯ ಅಧೀನದ ಅಲ್ ಕೋಬರ್ ಘಟಕದ ಮಹಾಸಭೆಯು ಜ.5ರಂದು ಜುಮಾ ನಂತರ ಕೆಸಿಎಫ್ ಹಾಲ್ ನಲ್ಲಿ ಅಬ್ದುಲ್ ಖಾದರ್ ಜಿಎಂಸಿ ಯವರ ಅಧ್ಯಕ್ಶತೆಯಲ್ಲಿ ಜರಗಿತು.

ಅರಂಭದಲ್ಲಿ ಉಸ್ತಾದ್ ಅಬ್ದುಲ್ ರಝಾಕ್ ಸಖಾಫಿಯವರ ಭಕ್ತಿ ನಿರ್ಬರ ದುವಾದೊಂದಿಗೆ ಚಾಲನೆ ನೀಡಲಾಯಿತು. ಹಿರಿಯ ಉಸ್ತಾದ್ ಅಬ್ದುಲ್ಲಾ ಫ್ಯೆಝಿಯವರು ಸಭೆಯನ್ನು ಉದ್ಘಾಟಿಸಿದರು. ಅಲ್ ಮದೀನಾದ ಹಿರಿಯ ನೇತಾರ ಜನಾಬ್ ಎನ್ ಎಸ್ ಅಬ್ದುಲ್ಲಾ ಆಗಮಿಸಿದ ಗಣ್ಯರನ್ನು ಸ್ವಾಗತಿಸಿದರು. ವಾರ್ಷಿಕ ವರದಿ ಮತ್ತು ಲೆಕ್ಕಪತ್ರವನ್ನು ಪ್ರ. ಕಾರ್ಯದರ್ಶಿ ಇಬ್ರಾಹಿಂ ಕನ್ನಂಗಾರ್ ವಾಚಿಸಿ ಸಭೆಯಲ್ಲಿ ಅಂಗೀಕರಿಸಲಾಯಿತು.

ಮಹಾಸಭೆಯಲ್ಲಿ ಚುಣಾವನಾಧಿಕಾರಿಯಾಗಿ ವಲಯ ಸಮಿತಿ ಪ್ರಕಾರ್ಯದರ್ಶಿ ಇಕ್ಬಾಲ್ ಮಲ್ಲೂರ್ 2018 ರ ಸಾಲಿನ ನೂತನ ಪಧಾದಿಕಾರಿಗಳನ್ನು ಆಯ್ಕೆ ಮಾಡಿದರು.

ಗೌರವಾಧ್ಯಕ್ಷರು : ಸೌದ್ ಸುರಲ್ಪಾಡಿ. ಅಧ್ಯಕ್ಷರು : ಅಶ್ರಫ್ ಸಹರಾ,ಉಪಾದ್ಯಕ್ಷರು : ಎನ್ ಎಸ್. ಅಬ್ದುಲ್ಲಾ, ರಹೀಂ ಉಚ್ಚಿಲ, ಪ್ರ. ಕಾರ್ಯದರ್ಶಿ: ಇಬ್ರಾಹಿಂ ಕನ್ನಂಗಾರ್,  ಜೊತೆಕಾರ್ಯದರ್ಶಿ: ಅಶ್ರಫ್ ತಲಪಾಡಿ, ಜಮಾಲ್ ಬಜ್ಪೆ
ಕೋಶಾಧಿಕಾರಿ : ಅಬ್ದುಲ್ ರಝಾಕ್ ಸಖಾಫಿ, ಸಂಘಟನಾ ಕಾರ್ಯದರ್ಶಿ: ಇಲ್ಯಾಸ್ ಕನ್ನಂಗಾರ್, ಸಲಹೆಗಾರರು: ಅಬ್ದುಲ್ಲಾ ಫ್ಯೆಝಿ, ಝ್ಯೆನುಲ್ ಆಬೀದೀನ್ ಝುಹ್ರಿ ಹಾಗೂ 10 ಮಂದಿಯನ್ನು ಕಾರ್ಯಕಾರಿ ಸಮಿತಿಗೆ ಆಯ್ಕೆಮಾಡಲಾಯಿತು

ವೇದಿಕೆಯಲ್ಲಿ ವಲಯ ಸಮಿತಿಯ ಅಧ್ಯಕ್ಷರಾದ ಜನಾಬ್ ಇಝ್ಝುದ್ದೀನ್ ಮುಸ್ಲಿಯಾರ್ ಮಾತನಾಡಿ ಕಾರ್ಯಕ್ರಮಕ್ಕೆ ಶುಭಕೋರಿದರು.ವಲಯ ಸಮಿತಿ ಕೋಶಾಧಿಕಾರಿ ಇಸ್ಮಾಯಿಲ್ ಪೊಯ್ಯಲ್, ದಮಾಮ್ ಘಟಕಾಧ್ಯಕ್ಷ ಕಾಸಿಂ ಅಡ್ಡೂರ್, ಉಧ್ಯಮಿ ಸೌದ್ ಸೂರಲ್ಪಾಡಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!