ಮೌಲ್ಯ ವರ್ಧಿತ ತೆರಿಗೆ: ವ್ಯಾಪಾರಿಗಳು ಮತ್ತು ಗ್ರಾಹರಕರ ಗಮನಕ್ಕೆ

ಅಬುಧಾಬಿ: ಮೌಲ್ಯ ವರ್ಧಿತ ತೆರಿಗೆ ಚಾಲ್ತಿಗೆ ಬಂದ ನಂತರ ಇಲ್ಲಿನ ವ್ಯಾಪಾರಿಗಳು ಮತ್ತು ಗ್ರಾಹಕರಲ್ಲಿ ತಲ್ಲಣ ಉಂಟಾಗತೊಡಗಿದೆ. ಫೆಡರಲ್ ಟ್ಯಾಕ್ಸ್ ಅಥಾರಿಟಿಯು ಸ್ಪಷ್ಟವಾದ ನಿರ್ದೇಶನಗಳನ್ನು ನೀಡಿದ್ದರೂ, ಸಣ್ಣಪುಟ್ಟ ವ್ಯಾಪಾರ ನಡೆಸುವವರ ಮಧ್ಯೆ ಹಲವು ಅಭಿಪ್ರಾಯಗಳು ಮನೆಮಾಡಿದೆ.

ಎಫ್‌ಟಿ‌ಎ ವ್ಯಾಟ್ ನೋಂದಣಿ ನಡೆಸದೆ ವ್ಯಾಟ್ ವಸೂಲಿ ಮಾಡುವುದು ಅಥವಾ, ನೋಂದಣಿ ನಡೆಸಿರುವ ವ್ಯಾಪಾರಿಗಳಲ್ಲಿಯೇ ಹೇಗೆ ವ್ಯಾಟ್ ನಿಗದಿಪಡಿಸುವುದು ಎನ್ನುವ ಬಗ್ಗೆ ಗೊಂದಲ ಉಂಟಾಗಲು ಸಾಧ್ಯತೆ ಇದೆ.

3,75,000 ದಿರ್‌ಹಂ ವಾರ್ಷಿಕ ವಹಿವಾಟುಗಳನ್ನು ನಡೆಸುವ ಸ್ಥಾಪನೆಗಳು ಕಡ್ಡಾಯವಾಗಿ ವ್ಯಾಟ್ ನೋಂದಣಿ ನಡೆಸಬೇಕು. 1,87,500 ರಿಂದ ,3,75,000 ರ ದಿರ್‌ಹಂ ಮಧ್ಯೆ ವಹಿವಾಟು ನಡೆಸುವ ವ್ಯಾಪಾರ ಕೇಂದ್ರಗಳು ಬೇಕಾದರೆ ನೋಂದಣಿ ನಡೆಸಬಹುದು. 1,87,500 ದಿರ್‌ಹಂ ಗಳಿಗಿತ ಕೆಳಗೆ ವಾರ್ಷಿಕ ವಹಿವಾಟು ನಡೆಸುವ ವ್ಯಾಪಾರಿ ಸಂಸ್ಥೆಗಳು ನೋಂದಣಿ ನಡೆಸುವ ಅಗತ್ಯವಿಲ್ಲ.

3,75,000 ದಿರ್‌ಹಂ ಗಿಂತ ಕೆಲಗೆ ವಹಿವಾಟು ನಡಸುವ ಸಲೂನ್ ಗೆ ನೋಂದಣಿ ಮಾಡಬೇಕಾಗಿಲ್ಲ. ಆದರೆ, ಅಲ್ಲಿ ಉಪಯೋಗಿಸುವ ಸಾಬೂನು, ಜೆಲ್ ಮುಂತಾದ ಸಾಮಾಗ್ರಿಗಳಿಗೆ ಅದನ್ನು ಪಡೆಯುವುವಾಗ ವ್ಯಾಟ್ ನೀಡಬೇಕಾಗುತ್ತದೆ.ತತ್ಫಲವಾಗಿ ಇಂತಹ ಸ್ಥಾಪನೆಗಳ ಸೇವೆ ದುಬಾರಿಯಾಗಬಹುದು.

ಇಲೆಕ್ಟ್ರಾನಿಕ್ ಉಪಕರಣಗಳು ಇಲ್ಲದೆ ಬಿಲ್ ನೀಡುವ ಹಲವಾರು ಸಣ್ಣ ಸ್ಥಾಪನೆಗಳು ಇದ್ದು, ಇಂತವರ ಸಂಶಯಗಳನ್ನು ಪರಿಹರಿಸಲು ಆರ್ಥಿಕ ಸಚಿವಾಲಯವು ಒಂದು ಹೃಸ್ವ ವೀಡಿಯೋವನ್ನು ಹೊರತಂದಿದೆ. ಅದರಲ್ಲಿ ಪ್ರಧಾನವಾಗಿ ಮೂರು ವಿಷಯಗಳನ್ನು ಬೆಟ್ಟು ಮಾಡಿದೆ. ವ್ಯಾಪಾರಿಗಳ ವ್ಯಾಟ್ ನೋಂದಣಿ ಸಂಖ್ಯೆ ಮತ್ತು ಪಡೆದ ವ್ಯಾಟ್ ಬಾಬ್ತುಗಳನ್ನು ಬಿಲ್ ಪ್ರಿಂಟ್ ಮಾಡುವ ಮೊದಲೇ ಖಾತರಿ ಪಡಿಸಬೇಕು. ವ್ಯಾಟ್ ನೋಂದಣಿ ಮಾಡದ ಅಂಗಡಿಗೆ ವ್ಯಾಟ್ ನೀಡಬಾರದು. ವ್ಯಾಟ್ ಅತ್ಯಧಿಕವಾಗಿ ಸೇರಿಸಿ ಬಿಲ್ ನೀಡಿದ ಅಂಗಡಿಗೆ ನೋಂದಣಿ ಸಂಖ್ಯೆ ನಮೂದಿಸದಿದ್ದಲ್ಲಿ ಗ್ರಾಹಕನಿಗೆ ನೇರವಾಗಿ ವ್ಯಾಪಾರಿಯೊಂದಿಗೆ ಆ ಬಗ್ಗೆ ತರಾಟೆ ನಡೆಸಬಹುದು.

ವ್ಯಾಟ್ ಸಂಬಂಧಪಟ್ಟು ನಾಲ್ಕು ವಿಷಯಗಳನ್ನು ಗ್ರಾಹಕರು ಗಮನಿಸಬೇಕು. ಬಿಲ್ ಪಡೆಯುವಾಗ ಟ್ಯಾಕ್ಸ್  ರಶೀದಿ ಎಂದು ಮೇಲೆ ನಮೂದಿಸಿದೆ ಎನ್ನುವುದನ್ನು ಖಾತರಿಪಡಿಸಿ. ಅದರ ಕೆಳಗೆ ನೋಂದಣಿ ಸಂಖ್ಯೆ (ಟಿ.ಆರ್.ಎನ್) ಇರಬೇಕು. ಪಡೆಯುವ ವಸ್ತುವಿಗೆ ಟ್ಯಾಕ್ಸ್ ಸೇರಿಸಿದ ಬೆಲೆ ನಿಗದಿಯಾಗಿರಬೇಕು.
ಟೋಟಲ್ ಬೆಲೆಯೊಂದಿಗೆ ಖರೀದಿಸಿದ ಎಲ್ಲಾ ವಸ್ತುಗಳಿಗೆ ಎಷ್ಟು ಟ್ಯಾಕ್ಸ್ ಸೇರಿಸಲಾಗಿದೆ ಎನ್ನುವುದನ್ನು ನಮೂದಿಸಿರಬೇಕು.

ಇವುಗಳನ್ನೂ ಓದಿ

Leave a Reply

Your email address will not be published. Required fields are marked *

error: Content is protected !!