ನವದೆಹಲಿ: ದೈಹಿಕ ಮತ್ತು ಮಾನಸಿಕ ನ್ಯೂನತೆಯುಳ್ಳವರ ಹಜ್ ಯಾತ್ರೆಗೆ ಅಡ್ಡಿಯಾಗಿದ್ದ ದಶಕಗಳಷ್ಟು ಹಳೆಯ ನಿರ್ಬಂಧವನ್ನು ಕೇಂದ್ರ ಸರ್ಕಾರ ತೆಗದು ಹಾಕಿದೆ.
ಹಜ್ ಸಮಿತಿಯ ನಿಯಮಾವಳಿ ಅನ್ವಯ ಇಲ್ಲಿಯವರೆಗೆ ಇಂತಹ ವ್ಯಕ್ತಿಗಳು ಹಜ್ ಯಾತ್ರೆ ಕೈಗೊಳ್ಳಲು ಅವಕಾಶ ಇರಲಿಲ್ಲ.ಇನ್ನು ಮುಂದೆ ಇಂಥವರು ಹಜ್ ಯಾತ್ರೆಗೆ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸುವಂತೆ ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯವು ಹಜ್ ಸಮಿತಿಗೆ ಸೂಚಿಸಿದೆ.
ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ವೇದಿಕೆ ನಿಯೋಗ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ಅವರನ್ನು ಇತ್ತೀಚೆಗೆ ಭೇಟಿಯಾಗಿ ಮನವಿ ಸಲ್ಲಿಸಿತ್ತು.ದೈಹಿಕ ಅಥವಾ ಮಾನಸಿಕ ನ್ಯೂನತೆಗಾಗಿ ವ್ಯಕ್ತಿಗಳ ಯಾತ್ರೆಯ ಹಕ್ಕನ್ನು ಮೊಟಕುಗೊಳಿಸಬಾರದು ಎಂದು ನಿಯೋಗ ಮನವಿ ಮಾಡಿತ್ತು.