ಸಂಘಪರಿವಾರ ಕೋಮುವಾದ ನಿಲ್ಲಿಸಿದರೆ ರಾಜ್ಯದಲ್ಲಿ ಶಾಂತಿ ನೆಲೆಗೊಳ್ಳುತ್ತದೆ-ಸಿಎಂ

ಬೈಂದೂರು:ರಾಜ್ಯದಲ್ಲಿ ಪ್ರತ್ಯೇಕವಾಗಿ ಕರಾವಳಿಯಲ್ಲಿ ಸದ್ಯದ ಪರಿಸ್ಥಿತಿಗೆ ಸಂಘಪರಿವಾರದ ಕೋಮುವಾದಿಗಳೇ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬಿಜೆಪಿ ಪಕ್ಷ ಕೋಮುವಾದ ಮಾಡುವುದನ್ನು ಬಿಟ್ಟರೆ ಬೇರೆ ಯಾರು, ಕೋಮುವಾದ ಮಾಡುವುದಿಲ್ಲ, ಈ ಬಗ್ಗೆ ಬಿಜೆಪಿ ಗಂಭೀರವಾಗಿ ಚಿಂತನೆ ನಡೆಸಬೇಕು ಎಂದು ಹೇಳಿದರು. ಬೈಂದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಿಂದುತ್ವದಲ್ಲಿ ಸಾಫ್ಟ್ ಮತ್ತು ಹಾರ್ಡ್ ಯಾವುದು ಇಲ್ಲ, ಕಲ್ಲಡ್ಕದ ಶಾಲೆಗೆ ಅನುದಾನ ಯಾಕೆ ನೀಡಬೇಕು, ಬೇರೆ ಶಾಲೆಗಳಿಗೆ ನೀಡಬಹುದಲ್ಲ ಎಂದು ಪ್ರಶ್ನಿಸಿದರು.ಪಿಎಫ್ಐ, ಬಜರಂಗದಳ, ಶ್ರೀರಾಮ ಸೇನೆ, ಸೇರಿದಂತೆ ಯಾವುದೇ ಸಂಘಟನೆಗಳನ್ನು ನಿಷೇಧ ಮಾಡುವುದಾಗಿ ಹೇಳಿಲ್ಲ, ಆದರೆ ಈ ಸಂಘಟನೆಗಳ ಮೇಲೆ ಹದ್ದಿನ ಕಣ್ಣಿಡುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದರು.

ಹಿಂದೂ ವಿರೋಧಿ ಎಂದು ತಮ್ಮನ್ನು ಕರೆಯುವರು ಮನುಷ್ಯತ್ವದ ದ್ವೇಷಿಗಳು ಎಂದು ಹೇಳಿದ ಅವರು ಉತ್ತರ ಪ್ರದೇಶದಲ್ಲಿ ಏನೆಲ್ಲಾ ಅಭಿವೃದ್ಧಿ ಆಗಿದೆ ಎನ್ನುವುದು ಗೊತ್ತಿದೆ,ಗೋಡ್ಸೆ ಅನುಯಾಯಿಗಳಿಂದ ಪಾಠ ಕಲಿಯುವ ಅಗತ್ಯವಿಲ್ಲವೆಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!