“ಶಹೀದ್ ಬಷೀರ್” ಕೂಳೂರು ಮಸೀದಿ ಖಬರ್ ಸ್ಥಾನದಲ್ಲಿ ದಫನ-ಮನೆಗೆ ಖಾಝಿ ಬೇಕಲ್ ಉಸ್ತಾದ್ ಭೇಟಿ

ಮಂಗಳೂರು: ಸಮಾಜಘಾತುಕ ಶಕ್ತಿಗಳ ದಾಳಿಗೆ ಗುರಿಯಾಗಿ ತೀವ್ರವಾಗಿ ಗಾಯಗೊಂಡಿದ್ದ ಆಕಾಶಭವನ ನಿವಾಸಿ ಅಹಮ್ಮದ್ ಬಶೀರ್ (48) ಎ.ಜೆ.ಆಸ್ಪತ್ರೆಯಲ್ಲಿ ಭಾನುವಾರ ಬೆಳಿಗ್ಗೆ ಮೃತಪಟ್ಟರು.ದಾಳಿಯಲ್ಲಿ ಕುತ್ತಿಗೆ, ತಲೆ, ಎಡಕೈ, ಹೊಟ್ಟೆ ಸೇರಿದಂತೆ ಹಲವೆಡೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ನಾಲ್ಕು ದಿನಗಳಿಂದ ಆಸ್ಪತ್ರೆಯಲ್ಲಿದ್ದ ಅವರಿಗೆ ಹಲವು ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಬಶೀರ್‌ ಭಾನುವಾರ ಬೆಳಿಗ್ಗೆ 8.05ಕ್ಕೆ ಕೊನೆಯುಸಿರೆಳೆದರು.

ಮೃತರಿಗೆ ತಾಯಿ ಹಾಜಿರಾ, ಪತ್ನಿ ಕುಲ್ಸೂಮ್‌, ನಾಲ್ವರು ಮಕ್ಕಳು ಇದ್ದಾರೆ. ಹಿರಿಯ ಮಗ ಇಮ್ರಾನ್‌ ನಾಲ್ಕು ವರ್ಷಗಳಿಂದ ವಿದೇಶದಲ್ಲಿದ್ದು, ಖಾಸಗಿ ಕಂಪೆನಿಯಲ್ಲಿ ವ್ಯವಸ್ಥಾಪಕರ ಹುದ್ದೆಯಲ್ಲಿದ್ದಾರೆ. ಎರಡನೇ ಮಗ ಇರ್ಫಾನ್‌ ಮೂರು ತಿಂಗಳ ಹಿಂದಷ್ಟೇ ಅಬುದಾಭಿಗೆ ತೆರಳಿದ್ದು, ಖಾಸಗಿ ಕಂಪೆನಿಯಲ್ಲಿ ಉದ್ಯೋಗ ಪಡೆದಿದ್ದಾರೆ. ಪುತ್ರಿ ಇಮ್ರಾಜ್‌ ದ್ವಿತೀಯ ಪಿಯುಸಿ ಓದುತ್ತಿದ್ದು, ಕೊನೆಯ ಪುತ್ರ ಇಜ್ವಾನ್‌ 8ನೇ ತರಗತಿಯಲ್ಲಿದ್ದಾನೆ.

ನಿಧನದ ಸುದ್ದಿ ಹಬ್ಬುತ್ತಿದ್ದಂತೆ ನೂರಾರು ಮಂದಿ ಆಸ್ಪತ್ರೆ ಬಳಿ ಬಂದರು. ಸಚಿವ ಯು.ಟಿ.ಖಾದರ್‌, ಶಾಸಕ ಬಿ.ಎ.ಮೊಯಿದ್ದೀನ್ ಬಾವ ಸೇರಿದಂತೆ ಚುನಾಯಿತ ಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಮುಖಂಡರೂ ದೌಡಾಯಿಸಿದರು. ಬೆಳಿಗ್ಗೆ 11 ಗಂಟೆವರೆಗೆ ಸಂಬಂಧಿಕರಿಗೆ, ಆಪ್ತರಿಗೆ ಶವಾಗಾರದಲ್ಲಿಯೇ ಮೃತರ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಬಶೀರ್‌ ಅವರ ಹೆಂಡತಿ ಮತ್ತು ಮಗಳು ಕಣ್ಣೀರು ಹಾಕುತ್ತಾ ಶವಾಗಾರದಿಂದ ಹೊರಬಂದ ದೃಶ್ಯ ಮನಕಲಕುವಂತಿತ್ತು.ಮಯ್ಯಿತನ್ನು ಮನೆಗೆ ಕೊಂಡೊಯ್ಯುವಾಗ ಮೆರವಣಿಗೆ ನಡೆಸುವುದು ಬೇಡ ಎಂಬ ತೀರ್ಮಾನವನ್ನು ಬಶೀರ್‌ ಕುಟುಂಬ ಮೊದಲೇ ಕೈಗೊಂಡಿತ್ತು. ಅದರಂತೆ, ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಪಾರ್ಥಿವ ಶರೀರವನ್ನು ಆಕಾಶಭವನದ ಮನೆಗೆ ಕೊಂಡೊಯ್ಯಲಾಯಿತು.

ಅಲ್ಲಿ ವಿವಿಧ ಧರ್ಮಗಳ ಸಾವಿರಾರು ಮಂದಿ ಅಂತಿಮ ದರ್ಶನ ಪಡೆದರು. ಸಂಜೆ 4.30ಕ್ಕೆ ಮನೆಯಿಂದ ಜನಾಝ ವನ್ನು  ಕೂಳೂರಿನ ಮುಹಿಯುದ್ದೀನ್‌ ಜುಮಾ ಮಸೀದಿಯತ್ತ ಕೊಂಡೊಯ್ಯುವಾಗ ಸಾವಿರಾರು ಮಂದಿ ಪಾಲ್ಗೊಂಡರು.ಸಂಜೆ 6.30ಕ್ಕೆ ಧಾರ್ಮಿಕ ವಿಧಿವಿಧಾನಗಳನ್ನು ಆರಂಭಿಸಲಾಯಿತು. ವಿದೇಶದಲ್ಲಿದ್ದ ಎರಡನೆಯ ಮಗ ಇರ್ಫಾನ್‌ ಬಂದ ಬಳಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಮಸೀದಿ ಆವರಣದ ಖಬರ್ ಸ್ಥಾನದಲ್ಲಿ ದಫನ ಮಾಡಲಾಯ್ತು.

ಇರ್ಫಾನ್ ತಕ್ಷಣ ಊರಿಗೆ ಮರಳಲು ರಾಜತಾಂತ್ರಿಕ ಸಮಸ್ಯೆ ಎದುರಾಗಿತ್ತು. ಯು.ಟಿ. ಖಾದರ್, ಮೊಯಿದ್ದೀನ್‌ ಬಾವ, ಜಿಲ್ಲಾಧಿಕಾರಿ ಮತ್ತು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ವಿದೇಶಾಂಗ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ನೆರವು ಕೋರಿದರು. ಅಧಿಕಾರಿಗಳ ಮಧ್ಯಪ್ರವೇಶದ ಬಳಿಕ ಇರ್ಫಾನ್‌ ಅಲ್ಲಿಂದ ಹೊರಟು ಸಂಜೆ ಮಂಗಳೂರು ತಲುಪಿದರು.ಖಾಝಿ ಬೇಕಲ್ ಉಸ್ತಾದ್ ಭೇಟಿ.

ನಿನ್ನೆ ನಿಧನರಾದ ಆಕಾಶಭವನ್ ಬಶೀರ್ ರವರ ಮನೆಗೆ ಉಡುಪಿ ಚಿಕ್ಕಮಂಗಳೂರು ಹಾಸನ ಜಿಲ್ಲಾ ಸಂಯುಕ್ತ ಖಾಝಿಗಳಾದ ಶೈಖುನಾ ಬೇಕಲ್ ಪಿ.ಎಂ ಇಬ್ರಾಹಿಮ್ ಮುಸ್ಲಿಯಾರ್ ಉಸ್ತಾದ್ ರವರು ಭೇಟಿ ನೀಡಿ ಪ್ರಾರ್ಥನೆ ನಡೆಸಿ ಕುಟುಂಬಕ್ಕೆ ಸಾಂತ್ವನ ನೀಡಿದರು.

ಅತ್ತ ಮರ್ಕಝ್ ನಗರದಲ್ಲಿ ವಿಶೇಷ ಪ್ರಾರ್ಥನೆ :

ಕಲ್ಲಿಕೋಟೆ:ದುಷ್ಕರ್ಮಿಗಳ ಮಚ್ಚಿನ ಏಟಿಗೆ ವೀರ ಮರಣ ಹೊಂದಿದ ಶಹೀದ್ ಬಶೀರ್ ರವರ ಮಗ್ಪಿರತ್,ಮರ್ಹಮತ್’ಗಾಗಿ ಸುನ್ನಿ ಜನ ಕೋಟಿಗಳ ಆಧ್ಯಾತ್ಮಿಕ ನಾಯಕ ಸುಲ್ತಾನುಲ್ ಉಲಮಾ ಎ ಪಿ ಉಸ್ತಾದ್ ಭಕ್ತಿ ನಿರ್ಬರವಾಗಿ ಪ್ರಾರ್ಥನ ಮಾಡಿದರು.

ಮರ್ಕಝ್ ರೂಬಿ ಜ್ಯುಬಿಲಿಯಲ್ಲಿ ಸಾವಿರಾರು ಅಂತರಾಷ್ಟ್ರೀಯ ಉಲಮಾಗಳ ಸಮ್ಮುಖದಲ್ಲಿ,ಲಕ್ಷಾಂತರ ಸುನ್ನಿ ಜನಸಂದಣಿಯ ಆಮೀನ್ ನೊಂದಿಗೆ ಷಹೀದ್ ಬಶೀರ್ ರವರಿಗೆ ಪ್ರಾರ್ಥನೆ ನಡೆಸಿದಾಗ ಸಾದಾತುಗಳಾದ ಕಡಲುಂಡಿ ತಂಙಳ್. ಕೂರತ್ ತಂಙಳ್. ಭಾಫಕಿ ತಂಙಳ್. ಬೇಕಲ್ ಉಸ್ತಾದ್. ಝೈ ನಿ ಕಾಮಿಲ್. ಶಾಫಿ ಸಅದಿ. ಇಸ್ಮಾಯಿಲ್ ಸಖಾಫಿ. ಯಾಕೂಬ್ ಬೆಂಗಳೂರು . ಹಮೀದ್ ಬಜ್ಪೆ. ಹಮೀದ್ ಮಡಿಕೇರಿ.ಕೆ ಎಂ.ಸಾಧಿಕ್ ಮಾಸ್ಟರ್. ಅಶ್ರಪ್ ಕಿನಾರ ಮಂಗಳೂರು ಉಪಸ್ಥಿದ್ದರು

Leave a Reply

Your email address will not be published. Required fields are marked *

error: Content is protected !!