ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಹ್ರೈನ್ ಪ್ರವಾಸದಲ್ಲಿ

ಮನಾಮ:  ಕಾಂಗ್ರೆಸ್ ಅಧ್ಯಕ್ಷರಾದ ರಾಹುಲ್ ಗಾಂಧಿ ಬಹ್ರೈನ್ ಪ್ರವಾಸದಲ್ಲಿದ್ದಾರೆ. ಅವರಿಂದು ಬಹ್ರೈನ್ ನಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಲಿದ್ದಾರೆ.

ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾದ ನಂತರ ಕೈಗೊಳ್ಳುತ್ತಿರುವ ಮೊದಲ ವಿದೇಶಿ ಪ್ರವಾಸ ಇದಾಗಿದೆ. ಅವರು ತಮ್ಮ ಚೊಚ್ಚಲ ವಿದೇಶಿ ಪ್ರವಾಸವನ್ನು ಕೊಲ್ಲಿ ರಾಷ್ಟ್ರ ಬಹ್ರೈನ್ ನಿಂದ ಆರಂಭಿಸಿದ್ದಾರೆ.
ಬಹ್ರೈನ್ ತಲುಪಿದ ರಾಹುಲ್ ಗಾಂಧಿಯವರಿಗೆ ವಿಮಾನ ನಿಲ್ದಾಣದಲ್ಲಿ ಭರ್ಜರಿ ಸ್ವಾಗತ ಕೋರಲಾಯಿತು. ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ನಾಯಕರಾದ ಶಶಿ ತರೂರ್, ಮಿಲಿಂದ ದೇವೋರಾ, ಮಧುಗೌಡ್ ಭಕ್ಷಿ ಮತ್ತು ಉದ್ಯಮಿ ಸ್ಯಾಮ್ ಪಿತ್ರೋಡಾ ರಾಹುಲ್ ಗಾಂಧಿಯವರಿಗೆ ಆದರದ ಸ್ವಾಗತ ಕೋರಿದರು.ಪ್ರವಾಸದ ವೇಳೆ ರಾಹುಲ್ ಗಾಂಧಿ ಬಹ್ರೈನ್ ರಾಜ ಸಲ್ಮಾನ್ ಬಿನ್ ಹಮಾಸ್ ಅಲ್ ಖಲೀಫಾರನ್ನು ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ.

ಜತೆಗೆ ಇಂದು ‘ದಿ ಗಲ್ಫ್ ಹೊಟೇಲ್’ನಲ್ಲಿ ರಾತ್ರಿ 8.30 ಕ್ಕೆ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಮೊದಲ ವಿದೇಶಿ ಭೇಟಿಯಾಗಿರುವುದರಿಂದ ರಾಹುಲ್ ಭಾಷಣವನ್ನು ಕುತೂಹಲದ ಕಣ್ಣುಗಳು ಎದುರು ನೋಡುತ್ತಿವೆ.

Leave a Reply

Your email address will not be published. Required fields are marked *

error: Content is protected !!