ಹೊಸ ಇತಿಹಾಸ ನಿರ್ಮಿಸಿ ಮರ್ಕಝ್ ರೂಬಿ ಜುಬಿಲಿ ಗೆ ಪ್ರೌಡ ಸಮಾಪ್ತಿ

ಕಲ್ಲಿಕೋಟೆ: ವಿಶ್ವವಿಖ್ಯಾತ ವಿದ್ಯಾಭ್ಯಾಸ ಕೇಂದ್ರ ಕಾರಂದೂರು ಮರ್ಕಝು ಸ್ಸಖಾಫತಿ ಸ್ಸುನ್ನಿಯ್ಯ ಇದರ ನಲವತ್ತನೇ ವಾರ್ಷಿಕ ರೂಬಿ ಜುಬಿಲಿ ಸಮ್ಮೇಳನವು ಹೊಸ ಇತಿಹಾಸ ನಿರ್ಮಿಸಿ ಪ್ರೌಡೋಜ್ವಲ ವಾಗಿ ಸಮಾಪ್ತಿ ಗೊಂಡಿತು.ಸಮ್ಮೇಳನ ನಗರಿಗೆ ಹರಿದು ಬಂದ ಜನ ಸಾಗರವು ಸುನ್ನೀ ಸಂಘಶಕ್ತಿಯನ್ನು ಜಗತ್ತಿಗೆ ಸಾರುವಂತಿತ್ತು, ಮರ್ಕಝ್ ವಿರುದ್ದ ಷಡ್ಯಂತ್ರ ರೂಪಿಸುವವರಿಗೆ ಎಚ್ಚರಿಕೆಯ ಕರೆಘಂಟೆಯಾಗಿತ್ತು.

ಮರ್ಕಝ್ ನೊಂದಿಗೆ ಸುನ್ನೀ ಸಮೂಹಕ್ಕಿರುವ ಪ್ರೀತಿ, ವಿಶ್ವಾಸದ ನಿದರ್ಶನವಾಗಿತ್ತು. ಮರ್ಕಝ್ ಎಂಬ ಮಹಾ ವಿದ್ಯಾಕೇಂದ್ರಕ್ಕೆ ಎಲ್ಲಾ ಕ್ಷುದ್ರ ಶಕ್ತಿಗಳನ್ನು ಬೆನ್ನೆಟ್ಟಿ  ಉತ್ತುಂಗಕ್ಕೇರಲು ರಕ್ಷಣಾತ್ಮಕ ಗುರಾಣಿಯಾಗಿತ್ತು ಈ ಮಹಾ ಸಾಗರ. ಇದು ಮರ್ಕಝ್ ನ ಜಯವಾಗಿದೆ, ಬಹಿಷ್ಕಾರದ ಬೆದರಿಕೆಗೆ ತಾಕೀತಾಗಿದೆ.ಇದು ಮುಸ್ಲಿಂ ಆಂದೋಲನದ ಪುನರುಜ್ಜೀವನವಾಗಿತ್ತು. ನೆರೆಯ ರಾಷ್ಟ್ರಗಳ ಜನರು ಈ ಸಾಂಸ್ಕೃತಿಕ ಕೇಂದ್ರವನ್ನು ಹೃದಯಕ್ಕೆ ಅಪ್ಪಿಕೊಂಡಿದ್ದಾರೆ ಎಂಬುದರ ನಿದರ್ಷನವಾಗಿತ್ತು 40ನೇ ವಾರ್ಷಿಕ ದಲ್ಲಿ ಪಾಲ್ಗೊಂಡ ವಿದೇಶೀ ಪಂಡಿತರ ಸಾನಿಧ್ಯ.ವರ್ಣರಂಜಿತವಾಗಿ ಅಲಂಕರಿಸಲ್ಪಟ್ಟ ವೇದಿಕೆಯು, ಉಲಮಾ, ಸಾದಾತ್ ಗಳು ಹಾಗೂ ಸುಮಾರು 22 ರಾಷ್ಟ್ರಗಳ ಗೌರವಾನ್ವಿತ ಮುಸ್ಲಿಮ್ ಮೆಧಾವಿಗಳಿಂದ ಪುನೀತಗೊಂಡಿತ್ತು.

ಸಮಾರೋಪ ಸಮಾವೇಶವನ್ನು ಸಂಜೆ 4 ಕ್ಕೆ ಆಯೋಜಿಸಲಾಗಿತ್ತಾದರೂ ಮಧ್ಯಾಹ್ನ ವೇಳೆಯಲ್ಲೇ  ಸಮ್ಮೇಳನ ನಗರವು ತುಂಬಿ ಹರಿಯ್ತು.ಸಮ್ಮೇಳನ ಆರಂಭಿಸುವ ವೇಳೆಯಲ್ಲಿ ಸಾವಿರಾರು ಜನರು ಕಿಲೋಮೀಟರ್ಗಳಷ್ಟು ದೂರದಲ್ಲಿ ನಿಂತುಕೊಂಡೇ ಸಮ್ಮೇಳನದ ದೃಶ್ಯಗಳನ್ನು ಸ್ಕ್ರೀನ್ ಮೂಲಕ ವೀಕ್ಷಿಸಿ ತೃಪ್ತಿಪಡಬೇಕಾಯ್ತು.

ಸಂಜೆ 5 ಗಂಟೆಗೆ ಸಮ್ಮೇಳನವು ಆರಂಭಗೊಂಡಿತು. ಸಮಸ್ತ ಅಧ್ಯಕ್ಷರಾದ ಬಹು: ರಈಸುಲ್ ಉಲಮಾ ಇ.ಸುಲೈಮಾನ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದರು.ದುಬೈ ರೆಡ್ ಕ್ರಸಂಟ್ ಚಯರ್ಮಾನ್ ಡಾ.ಹಂದಾನ್ ಮುಸಲ್ಲಂ ಅಲ್ ಮಸ್ರೂಇ ಸಮ್ಮೇಳನವನ್ನು ಉದ್ಘಾಟಿಸಿ, ಮರ್ಕಝ್ ನ ಕಾರ್ಯಕ್ಷಮತೆಯನ್ನು ಕೊಂಡಾಡಿದರು. ಎಲ್ಲಾ ವಿಧ ಸಹಾಯ ಸಹಕಾರವನ್ನು  ಇನ್ನು ಮುಂದಕ್ಕೂ ನೀಡುವುದಾಗಿ ಬರವಸೆ ನೀಡಿದರು.ಸುಲ್ತಾನುಲ್ ಉಲಮಾ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಬಿರುದು ಪ್ರಧಾನ ಭಾಷಣ ಮಾಡಿದರು.

ಬೋಧನಾ ರಂಗಕ್ಕೆ ಕಾಲಿಡುವ 1261 ಸಖಾಫಿ ಪದವೀಧರರಿಗೂ, ಸ್ನಾತಕೋತ್ತರ ಪದವೀಧರರಾದ 103 ಕಾಮಿಲ್ ಸಖಾಫಿ ಗಳಿಗೂ ಟುನೀಶಿಯ ವಿಶ್ವವಿದ್ಯಾಲಯದ ಉಪಕುಲಪತಿ ಹಿಶಾಮ್ ಅಬ್ದುಲ್ ಕರೀಮ್ ಖರೀಜಾ ಬಿರುದು ಪ್ರಧಾನ ಮಾಡಿದರು.198 ಹಾಫಿಳ್ ಗಳಿಗೂ,692 ವಿದ್ಯಾರ್ಥಿನಿಗಳಿಗೆ ಹಾದಿಯ ಬಿರುದನ್ನು ಈ ಹಿಂದೆ ನೀಡಲಾಗಿತ್ತು.

ಸಮ್ಮೇಳನದ ಆರಂಭದಲ್ಲಿ ದುಆ ನಿರ್ವಹಿಸಿದ,ಮರ್ಕಝ್ ಅಧ್ಯಕ್ಷರೂ ಆದ ಸಯ್ಯಿದ್ ಅಲಿ ಬಾಫಖಿ ತಂಙಳ್ ರವರನ್ನು ಸಮ್ಮೇಳನದಲ್ಲಿ ಶಾಲು ಹೊದಿಸಿ ಗೌರವಿಸಲಾಯ್ತು.ಮರ್ಕಝ್ ಮೇನೇಜರ್ ಸಿ.ಮುಹಮ್ಮದ್ ಫೈಝಿ ಅತಿಥಿಗಳನ್ನು ಸ್ವಾಗತಿಸಿದರು. ಮಲೇಷ್ಯಾದ ಇಸ್ಲಾಮಿಕ್ ದಅವಾ ಫೌಂಡೇಶನ್ ಮೇಧಾವಿ ಡಾ.ಯುಸ್ರಿ

ಮುಹಮ್ಮದ್ ಮಲೇಷ್ಯಾ, ಶೈಖ್ ಮು ಸಫರ್ ಸತ್ತಿಯೂಫ್ (ಉಸ್ಬೇಕಿಸ್ಥಾನ್), ಶೈಖ್ ಅಬ್ದುಲ್ ಝೀಝ್ ಸರ್ಬ (ಐವರಿಕೊಸ್ಟ್), ಶೈಖ್ ಶುಹೈಬ್ ಯಾಸೀನ್ ಮನಾವಿರ್ ಅರವಿ(ಇರಾಖ್), ದುಬೈ ಸರಕಾರೀ ಉಪ ನಿರ್ದೇಶಕರಾದ ಡಾ.ಉಮರ್ ಮುಹಮ್ಮದ್ ಅಲ್ ಖತೀಬ್, ಕುವೈಟ್ ಯುನಸ್ಕೋದ ಶೈಖ್ ಇಬ್ರಾಹಿಂ ಹಂಝ ಅಲ್ ಶುಕ್ರಿ, ಶೈಖ್ ಅಬ್ದುಲ್ ಫತ್ತಾಹ್ ಮೋರೋ ಮುಂತಾದ ವಿದೇಶೀ ವಿದ್ವಾಂಸರು ಸಮ್ಮೇಳನದಲ್ಲಿ ಭಾಷಣ ಮಾಡಿದರು. ಮರ್ಕಝ್ ಟೀಮ್ ಹಾಡಿದ ಥೀಮ್ ಸಾಂಗ್ ಆಕರ್ಷಣೀಯವಾಗಿತ್ತು.

ಸಂಘಟನಾ ನೇತಾರರಾದ ಸಯ್ಯಿದ್ ಇಬ್ರಾಹೀಮುಲ್ ಖಲೀಲ್ ಅಲ್ ಬುಖಾರಿ, ಪೊನ್ಮಲ ಅಬ್ದುಲ್ ಖಾದರ್ ಮುಸ್ಲಿಯಾರ್,ಎಪಿ ಮುಹಮ್ಮದ್ ಮುಸ್ಲಿಯಾರ್, ಫಾರೂಖ್ ನ ಈ ಮಿ ಕೊಲ್ಲಂ, ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಮುಂತಾದವರು ಹಾಗೂ ಭಾರತದ ವಿವಿಧ ರಾಜ್ಯಗಳಿಂದ ಆಗಮಿಸಿದ ನಾಯಕರು ಭಾಷಣ ಮಾಡಿದರು.

 

.

 

 

 

ಇವುಗಳನ್ನೂ ಓದಿ

Leave a Reply

Your email address will not be published. Required fields are marked *

error: Content is protected !!