janadhvani

Kannada Online News Paper

ದೇಶೀಕರಣ: ಮೊಬೈಲ್ ಫೋನ್ ಅಂಗಡಿಗಳಲ್ಲಿ ಕಾನೂನು ಉಲ್ಲಂಘನೆ

ರಿಯಾದ್: ಸಂಪೂರ್ಣ ದೇಶೀಕರಣವನ್ನು ಜಾರಿಗೆ ತರಲಾದ ಮೊಬೈಲ್ ಫೋನ್ ಅಂಗಡಿಗಳಲ್ಲಿ 1700 ಕಾನೂನು ಉಲ್ಲಂಘನೆಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಸಮಾಜಿಕ, ಕಾರ್ಮಿಕ ಅಭಿವೃದ್ಧಿ ಸಚಿವಾಲಯ ತಿಳಿಸಿದೆ.

ಇಷ್ಟೂ ಪ್ರಕರಗಳನ್ನು ಕೇವಲ ಆರು ತಿಂಗಳಲ್ಲಿ ನಡೆಸಲಾದ ತಪಾಸಣೆಯಲ್ಲಿ ಪತ್ತೆಹಚ್ಚಲಾಗಿದೆ ಎಂದು ಸಚಿವಾಲಯ ವ್ಯಕ್ತಪಡಿಸಿದೆ.

ಈ ವರ್ಷದ ಜನವರಿಯಿಂದ ಸಚಿವಾಲಯಗಳ ವಿವಿಧ ಖಾತೆಗಳ ಸಹಕಾರದೊಂದಿಗೆ ದೇಶಾದ್ಯಂತ ನಡೆಸಲಾದ ತಪಾಸಣೆಯಲ್ಲಿ 1,777 ಕಾನೂನು ಉಲ್ಲಂಘನೆಗಳು ಕಂಡು ಬಂದಿದ್ದವು. ಈ ಪೈಕಿ 1369 ಪ್ರಕರಣಗಳು ದೇಶೀಕರಣ ಕಾನೂನಿನ ಉಲ್ಲಂಘನೆಗಳಾಗಿದ್ದವು ಎಂದು ಸಂಬಂಧಿಸಿದ ಖಾತೆಯ ವಕ್ತಾರ ಖಾಲಿದ್ ಅಬಲ್ ಖೈರ್ ವ್ಯಕ್ತಪಡಿಸಿದ್ದಾರೆ. 40,315 ಅಂಗಡಿಗಳಲ್ಲಿ ತಪಾಸಣೆ ನಡೆಸಲಾಗಿತ್ತು. ಈ ಪೈಕಿ 38,353 ಅಂಗಡಿಗಳು ದೇಶೀಕರಣ ಕಾನೂನನ್ನು ಪಾಲಿಸಿದೆ. ಉಳಿದ ಅಂಗಡಿಗಳಿಗೆ ಮುನ್ನೆಚ್ಚರಿಕಾ ನೋಟೀಸು ಜಾರಿ ಮಾಡಲಾಗಿದೆ.

ಮೊಬೈಲ್ ಫೋನ್ ಮಾರುಕಟ್ಟೆಯಲ್ಲಿ ದೇಶೀಕರಣ ಜಾರಿಯು ಹೊಸ ಹುರುಪನ್ನು ಮೂಡಿಸಿದೆ. ಹೆಚ್ಚಿನ ಸ್ಥಳೀಯ ಯುವಕರು ಕೆಲಸ ಕಂಡುಕೊಳ್ಳಲು ಇದು ಸಹಾಯಕವಾಗಿದೆ. ಕಾನೂನು ಉಲ್ಲಂಘನೆಯನ್ನು ಯಾವುದೇ ಕಾರಣಕ್ಕೂ ಅಂಗೀಕರಿಸಲು ಸಾಧ್ಯವಿಲ್ಲ. ಈ ಕುರಿತು ಉಲ್ಲಂಘನೆ ಕಂಡು ಬಂದಲ್ಲಿ 19911 ಎಂಬ ಸಂಖ್ಯೆಗೆ ಕರೆಮಾಡಿ ಮಾಹಿತಿ ನೀಡುವಂತೆ ಖಾಲಿದ್ ಅಬಲ್ ಖೈರ್ ತಿಳಿಸಿದ್ದಾರೆ.

error: Content is protected !! Not allowed copy content from janadhvani.com