janadhvani

Kannada Online News Paper

ಯುಎಇ ಸಾರ್ವಜನಿಕ ಕ್ಷಮಾಪಣೆ: ಭಾರತೀಯ ರಾಯಭಾರಿಯಿಂದ ಹಾಟ್ ಲೈನ್ ಆರಂಭ

ಅಬುಧಾಬಿ: ಯುಎಇ ಹೊರಡಿಸಿದ ಸಾರ್ವಜನಿಕ ಕ್ಷಮಾಪಣೆಯನ್ನು ಬಳಸಿಕೊಳ್ಳಲು ಯುಎಇ ಯಲ್ಲಿರುವ ಭಾರತೀಯ ರಾಯಭಾರಿಯು ಸಹಾಯವಾಣಿ ಮತ್ತು ಹಾಟ್ ಲೈನ್ ಅನ್ನು ಆರಂಭಿಸಲಿದೆ ಎಂದು ಭಾರತದ ಯುಎಇ ರಾಯಭಾರಿ ನವದೀಪ್ ಸಿಂಗ್ ಸೂರಿ ತಿಳಿಸಿದ್ದಾರೆ.

ಅಕ್ರಮವಾಗಿ ವಾಸವಿರುವವರು ತಮ್ಮ ವಾಸವನ್ನು ಕಾನೂನುಬದ್ಧಗೊಳಿಸುವುದಕ್ಕೆ ಅಥವಾ ದೇಶ ಬಿಟ್ಟು ಹೋಗುವುದಕ್ಕೆ ಕಾನೂನು ಕ್ರಮಗಳನ್ನು ಜರುಗಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸುವಲ್ಲಿ ಸಹಾಯ ನೀಡುವುದು ಕೇಂದ್ರದ ಉದ್ದೇಶವಾಗಿದೆ.

ಕಾನೂನಿಗೆ ವಿರುದ್ದವಾಗಿ ಮುಂದುವರಿಯುವ ವಲಸಿಗ ಭಾರತೀಯರು ಸಾರ್ವಜನಿಕ ಕ್ಷಮಾಪಣೆಯ ಲಾಭವನ್ನು ಪಡೆದುಕೊಳ್ಳಬೇಕು. ದಾಖಲೆಗಳನ್ನು ನ್ಯಾಯಸಮ್ಮತ ಗೊಳಿಸಬೇಕು ಅಥವಾ ಔಟ್ ಪಾಸ್ ಪಡೆದು ದೇಶವನ್ನು ಬಿಡಬೇಕು. ಸಾರ್ವಜನಿಕ ಕ್ಷಮಾಪಣೆಯು ಆಗಸ್ಟ್ 1 ರಿಂದ ಅಕ್ಟೋಬರ್ 31 ರವರೆಗೆ ಜಾರಿಯಲ್ಲಿರುತ್ತದೆ.

ವೀಸಾ ಅವಧಿ ಮುಗಿದವರು, ಪ್ರಾಯೋಜಕರಿಂದ ತಪ್ಪಿಸಿಕೊಂಡವರು ಮತ್ತು ದೇಶದೊಳಗೆ ಅಕ್ರಮವಾಗಿ ಪ್ರವೇಶಿಸಿದವರು ದೇಶವನ್ನು ತೊರೆಯಲು ಸಾರ್ವಜನಿಕ ಕ್ಷಮಾಪಣೆ ಜಾರಿ ಮಾಡಲಾಗಿದೆ.

ಆರ್ಥಿಕ ಅಪರಾಧಗಳನ್ನು ಎದುರಿಸುತ್ತಿರುವ ಮತ್ತು ಕ್ರಿಮಿನಲ್ ಅಪರಾಧಗಳಿಗೆ ಶಿಕ್ಷೆಗೊಳಗಾದವರಿಗೆ ಈ ಕ್ಷಮಾಪಣೆಯ ಪ್ರಯೋಜನವಿಲ್ಲ. ಸಾರ್ವಜನಿಕ ಕ್ಷಮಾಪಣೆಯ ಪೂರ್ಣ ವಿವರಗಳಿಗಾಗಿ ಕಾಯುತ್ತಿರುವುದಾಗಿ ರಾಯಭಾರಿ ತಿಳಿಸಿದ್ದಾರೆ.ಕ್ಷಮಾಪಣೆಯ ಅರ್ಜಿಗಾಗಿ ನೇರವಾಗಿ ರಾಯಭಾರವನ್ನು ಸಂಪರ್ಕಿಸಲು ಸೋಮವಾರ ಹಾಟ್ ಲೈನ್ ​​ಅನ್ನು ಜಾರಿ ಮಾಡಲಾಗುತ್ತದೆ.
ವಿಶೇಷ ಇ-ಮೇಲ್ ID ಇರುತ್ತದೆ. ನೇರವಾಗಿ ರಾಯಭಾರ ಕಚೇರಿಯಲ್ಲಿನ ಸಹಾಯವಾಣಿಗೆ ಬಂದು ಸಹಾಯ ಪಡೆಯಲೂ ಬಹುದು.

ದೂತಾವಾಸವು ಯುಎಇಯ ನಾನ್-ರೆಸಿಡೆಂಟ್ ಇಂಡಿಯನ್ ಸಂಘಟನೆಗಳ ಸಹಕಾರವನ್ನು ಕೇಳಿಕೊಂಡಿದೆ. ಸುಮಾರು 30 ಸಂಘಗಳು ಭಾರತೀಯ ಅಂಬಾಸಿಡರ್ ನಡೆಸಿದ ಸಭೆಯಲ್ಲಿ ಭಾಗವಹಿಸಿದ್ದರು. ಹಿಂದೆ, ಸಾರ್ವಜನಿಕ ಕ್ಷಮಾಪಣೆಯಲ್ಲಿ ಸಹಕರಿಸಿದ ಅಂಗೀಕರಿಸಲ್ಪಟ್ಟ ಸಂಘಟನೆಗಳ ಅಭಿಪ್ರಾಯವನ್ನು ಸಹ ಸ್ವೀಕರಿಸಲಾಗುತ್ತದೆ.
ಅಂತಹ ಸಂಸ್ಥೆಗಳು ಬೇಕಾದಲ್ಲಿ ತಮ್ಮದೇ ಆದ ಹೆಲ್ಪ್ ಡೆಸ್ಕ್ ಗಳನ್ನು ಸ್ಥಾಪಿಸಬಹುದು. ಸಾರ್ವಜನಿಕ ಕ್ಷಮಾಪಣೆಗೆ ಅಪೇಕ್ಷೆ ಸಲ್ಲಿಸಿರುವವರ ದಾಖಲೆಗಳನ್ನು ಸಂಗ್ರಹಿಸಿ ಅವುಗಳನ್ನು ರಾಯಭಾರ ಕಚೇರಿಗೆ ತಲುಪಿಸಿದರೆ ಕ್ರಮಗಳನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು ಎಂದು ರಾಯಭಾರಿ ಹೇಳಿದರು.

error: Content is protected !! Not allowed copy content from janadhvani.com