ಶಿರಾಡಿಘಾಟ್ ಕಾಂಕ್ರಿಟೀಕರಣ: ಜ.20 ರಿಂದ ವಾಹನ ಸಂಚಾರ ಬಂದ್

ಸಕಲೇಶಪುರ:ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಶಿರಾಡಿಘಾಟ್ ನಲ್ಲಿ  ಎರಡನೇ ಹಂತದ ಕಾಂಕ್ರಿಟೀಕರಣಕ್ಕಾಗಿ ಜ.20ರಿಂದ ರಸ್ತೆ ಬಂದ್ ಆಗಲಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು.

ಮೇ ಅಂತ್ಯಕ್ಕೆ ಕಾಮಗಾರಿ ಮುಕ್ತಾಯಗೊಳ್ಳಲಿದ್ದು, ವಾಹನ ಸಂಚಾರಕ್ಕೆ ಆರು ಬದಲಿ ಮಾರ್ಗಗಳ ಮೂಲಕ ಅವಕಾಶ ಕಲ್ಪಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಈ ಮಾರ್ಗಕ್ಕೆ ಪರ್ಯಾಯವಾಗಿ ಮಂಗಳೂರು, ಉಡುಪಿ, ಮಡಿಕೇರಿ, ಚಿಕ್ಕಮಗಳೂರು, ಹಾಸನ ಮಾರ್ಗದಲ್ಲಿ ಎ ಮತ್ತು ಬಿ ಎಂದು ವಿಂಗಡಿಸಿ ವಾಹನ‌ಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದರು.

Leave a Reply

Your email address will not be published. Required fields are marked *

error: Content is protected !!