ಕಿಸ್ವತುಲ್ ಕಅ್’ಬಾ ಮರ್ಕಝ್ ಗೆ ಹಸ್ತಾಂತರಿಸಿದ ಸೌದಿ ವಿದ್ವಾಂಸರು

ಕಲ್ಲಿಕೋಟೆ,ಮರ್ಕಝ್ ನಗರ್: ಸೌದಿ ಅರೇಬಿಯಾದ ಪ್ರಮುಖ ವಿದ್ವಾಂಸರು ಕಿಸ್ವತುಲ್ ಕಅ ಬಾ (ಕಅಬಾದ ಖಿಲ್ಲ) ಮರ್ಕಝ್ ಗೆ ಹಸ್ತಾಂತರಿಸಿದರು.

ಮೊನ್ನೆ ನಡೆದ ಆಧ್ಯಾತ್ಮಿಕ ಸಮ್ಮೇಳನದಲ್ಲಿ ಸೌದಿ ಅರೇಬಿಯಾದ ಸರ್ಕಾರೀ ಪ್ರತಿನಿಧಿಗಳಾದ ಉಸ್ಮಾನ್ ಯಾಹ್ಯಾ ಅಲ್ ಬಕರಿ, ಶೈಖ್ ಸ್ವಾಲಿಹ್ ಮುಹಮ್ಮದ್ ಅಲ್ ಹಿಜಾಝಿ ಮುಂತಾದವರು ಮರ್ಕಝ್ ಸೆಕ್ರಟರಿ ಜನರಲ್ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ರಿಗೆ ಕಿಸ್ವವನ್ನು ಹಸ್ತಾಂತರಿಸಿದರು.

ವರ್ಷಂಪ್ರತಿ ಕಿಸ್ವ ಬದಲಾಯಿಸುವಾಗ ಸೌದಿ ಸರ್ಕಾರವು ಅದನ್ನು ಸಂಬಂದಪಟ್ಟವರಿಗೆ  ನೀಡುತ್ತದೆ.ಕಿಸ್ವ ಲಭಿಸಿದ ಕಾರಣ ಸಮ್ಮೇಳನಕ್ಕೆ ಇನ್ನಷ್ಟು ಪುಣ್ಯ ಲಭಿಸಿದೆ ಎಂದು ಕಾಂತಪುರಂ ಉಸ್ತಾದ್ ಹೇಳಿದರು.

 

 

Leave a Reply

Your email address will not be published. Required fields are marked *

error: Content is protected !!