ಕಳವುಗೈದ ಕ್ರೆಡಿಟ್ ಕಾರ್ಡ್ ಮೂಲಕ ದಂಡ ಪಾವತಿಸುವ ಜಾಲದ ವಿರುದ್ಧ ಎಚ್ಚರ!

ಅಬುಧಾಬಿ: ಕಳ್ಳತನ ಗೈದ ಕ್ರೆಡಿಟ್ ಕಾರ್ಡ್ ಉಪಯೋಗಿಸಿ ಟ್ರಾಫಿಕ್ ದಂಡ ಪಾವತಿಸುವ ಜಾಲದ ವಿರುದ್ದ ಜಾಗ್ರತೆ ವಹಿಸುವಂತೆ ಅಬುಧಾಬಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಅರಬ್, ಏಷ್ಯನ್ ವಂಶಜರಾದ ಹಲವರನ್ನು ಇಂತಹ ಆನ್ಲೈನ್ ವಂಚನೆಗಾಗಿ ಬಂಧಿಸಲಾಗಿದೆ.

ಅತ್ಯಂತ ಚಾಣಾಕ್ಷತನದಿಂದ ಸಾರ್ವಜನಿಕರನ್ನು ಕೂಡ ವಂಚಿಸಿ ಅವರಿಗೆ ಅರಿವಿಲ್ಲದಂತೆ ಈ ಜಾಲದಲ್ಲಿ ಸಿಲುಕಿಸಲಾಗುತ್ತದೆ. ದಂಡವನ್ನು ವಿನಾಯಿತಿ ದರದಲ್ಲಿ ಪಾವತಿಸಲಾಗುವುದು ಎಂದು ಸಾರ್ವಜನಿಕರಿಗೆ ಭರವಸೆ ನೀಡಲಾಗುತ್ತದೆ. ದಂಡ ಪಾವತಿಸಬೇಕಾದವರಿಂದ ಕಡಿಮೆ ಹಣ ಪಡೆದು, ಕಳ್ಳತನ ಮಾಡಿದ ಕ್ರೆಡಿಟ್ ಕಾರ್ಡ್ ಮೂಲಕ ಅವರ ದಂಡವನ್ನು ಪಾವತಿಸಲಾಗುತ್ತದೆ. ಇನ್ನಿತರ ಮಾರ್ಗವನ್ನು ಅವರು ಈ ಜಾಲಕ್ಕಾಗಿ ಉಪಯೋಗಿಸಿ ಸಾರ್ವಜನಿಕರಿಗೆ ಮಂಕು ಬೂದಿ ಎರಚಲೂ ಬಹುದು ಎನ್ನಲಾಗಿದೆ.

ಈ ರೀತಿಯ ವಂಚನೆಗಳಲ್ಲಿ ತಪ್ಪು ಮಾಡಿದವನು, ಮಾಡಿಸಿದವನು, ಸಹಾಕಾರ ನೀಡಿದವನು ಕೂಡ ಸಮಾನ ಶಿಕ್ಷೆಗೆ ಗುರಿಯಾಗುವರು ಎಂದು ಅಬುಧಾಬಿ ಪೊಲೀಸ್ ಸಿಐಡಿ ವಿಭಾಗದ ಡೈರೆಕ್ಟರ್ ಬ್ರಿಗೇಡಿಯರ್ ತಾರೀಖ್ ಖಲ್ಫಾನ್ ಅಲ್ ಖೋಲ್ ಎಚ್ಚರಿಕೆ ನೀಡಿದ್ದಾರೆ. ಇಂತಹ ಪ್ರಕರಣಗಳ ಕುರಿತು ಹಲವಾರು ದೂರುಗಳು ಕೇಳಿಬರುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇಂತಹ ಜಾಲಗಳ ಬಗ್ಗೆ ತಿಳಿದು ಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

Leave a Reply

Your email address will not be published. Required fields are marked *

error: Content is protected !!