ಇಹ್ಸಾನ್ ದಾಈಗಳಿಗೆ ಸುಲ್ತಾನುಲ್ ಉಲಮಾರಿಂದ ಸನ್ಮಾನ: ಅರ್ಹತೆಗೆ ಸಂದ ಗೌರವ

ಕಲ್ಲಿಕೋಟೆ:ಉತ್ತರ ಕರ್ನಾಟಕದ ಹಳ್ಳಿ ಗಲ್ಲಿಗಳಲ್ಲಿ ಪವಿತ್ರ ಇಸ್ಲಾಮಿನ ಆಶಯ ಆದರ್ಶಗಳನ್ನು ತಲುಪಿಸುವಲ್ಲಿ ಹಗಲಿರುಳು ಓಡಾಡುತ್ತಿರುವ ಯುವ ವಿದ್ವಾಂಸರನ್ನು ಇಲ್ಲಿನ  ಕಾರಂದೂರ್ ಮರ್ಕಝ್ ನಲ್ಲಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್  ಸನ್ಮಾನಿಸಿದರು.

ಧಾರ್ಮಿಕವಾಗಿ ತೀರ ಹಿಂದುಳಿದಿರುವ ಉತ್ತರ ಕರ್ನಾಟಕದ ಹಲವು ಹಳ್ಳಿಗಳಲ್ಲಿ ಮಸೀದಿ ಮದ್ರಸಾಗಳನ್ನು ಸ್ಥಾಪಿಸಿ, ಮನೆಮನೆ ಗಳಲ್ಲಿ ಧಾರ್ಮಿಕ ಜಾಗೃತಿಯನ್ನು ಮೂಡಿಸಿ, ಹಳ್ಳಿ ಗಲ್ಲಿಗಳಿಗೆ ತೆರಳಿ ಅವರ ಸಮಸ್ಯೆ ಗಳಿಗೆ ಸ್ಪಂದಿಸುತ್ತಾ ಉತ್ತರ ಕರ್ನಾಟಕದಾದ್ಯಂತ ಅಹ್ಲುಸ್ಸುನ್ನಃ ಕಂಪನ್ನು ಹರಡಿಸಲು ಅಹರ್ನಿಶಿ ಓಡಾಡುತ್ತಿರುವ ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ಅಧೀನದ ಇಹ್ಸಾನ್ ತಂಡದಲ್ಲಿರುವ 18ದಾಈಗಳಿಗೆ ಇಂದು ಬೆಳಿಗ್ಗೆ ಮರ್ಕಝ್ ಕನ್ನಡಿಗ ವಿದ್ವಾಂಸರ ಸಂಘಟನೆ KSO ವತಿಯಿಂದ ರೂಬೀ ಜ್ಯುಬಿಲಿಯ ಶುಭ ಮಹೂರ್ತದಲ್ಲಿ ಶತಮಾನ ಕಂಡ ಮಹಾನ್ ವಿದ್ವಾಂಸ ಶೈಖುನಾ ಸುಲ್ತಾನುಲ್ ಉಲಮಾರವರ ಪುಣ್ಯ ಹಸ್ತಗಳಿಂದ ಸನ್ಮಾನಿಸಲಾಯಿತು.

 

Leave a Reply

Your email address will not be published. Required fields are marked *

error: Content is protected !!