ಹಜ್ ಯಾತ್ರೆ ಸಂಬಂಧಿಸಿದ ನೂತನ ಒಡಂಬಡಿಕೆಗೆ ಭಾರತ-ಸೌದಿ ಅರೇಬಿಯಾ ಸಹಿ

ಜಿದ್ದಾ: ಹಿಜರಿ ಶಕೆ 1439 ರ ಹಜ್ ಯಾತ್ರೆಗೆ ಸಂಬಂಧಿಸಿದ ಒಡಂಬಡಿಕೆಗೆ ಭಾರತ ಮತ್ತು ಸೌದಿ ಅರೇಬಿಯಾ ರವಿವಾರ ಸಹಿ ಹಾಕಲಿದೆ. ಸೌದಿ ಹಜ್ ಸಚಿವರ ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾರತವನ್ನು ಪ್ರತಿನಿಧಿಸಿ ಹಜ್ ಖಾತೆಯನ್ನೂ ವಹಿಸುವ ಅಲ್ಪ ಸಂಖ್ಯಾತ ಕ್ಷೇಮ ಖಾತೆಯ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಮತ್ತು ಸೌದಿ ಹಜ್-ಉಮ್ರ ಖಾತೆಯ ಸಚಿವರು ಪರಸ್ಪರ ಸಹಿ ಮಾಡುವರು.

ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಕೇಂದ್ರ ಸರಕಾರ ರೂಪೀಕರಿಸಿದ ಹಜ್ ನೀತಿಯನ್ನು ಜಾರಿಗೆ ತರುವ ಹಿನ್ನೆಲೆಯಲ್ಲಿದೆ ಈ ವರ್ಷದ ಹಜ್. ಇಷ್ಟರ ವರೆಗೆ ಚೀಟಿ ಎತ್ತಿ ಹಲವು ಬಾರಿ ವಿಫಲರಾದ ಹತ ಭಾಗ್ಯರಿಗೆ ಮತ್ತೊಮ್ಮೆ ಅವಸರ ನೀಡುವ ಪರಿಗಣನೆಯನ್ನು ತೆಗೆದು ಹಾಕಿರುವ ಬಗ್ಗೆ ಕೇರಳ ಹಜ್ ಕಮಿಟಿ ಸಮರ್ಪಿಸಿದ ನಿರ್ದೇಶನವನ್ನು ಇನ್ನೂ ಪರಿಗಣಿಸಲಾಗಿಲ್ಲ. ಇದೀಗ ಆ ಬಗೆಗಿನ ಕರಡು ಸರ್ವೋಚ್ಚ ನ್ಯಾಯಾಲಯದಲ್ಲಿದೆ.

ಹಜ್ ಯಾತ್ರಿಕರ ಸಬ್ಸಿಡಿಗಳನ್ನು ಸಂಪೂರ್ಣವಾಗಿ ಹಿಂಪಡೆಯಲಾಗಿದ್ದು ಈ ವರ್ಷದ ಪ್ರತ್ಯೇಕತೆಯಾಗಿದೆ. ಆ ಮೂಲಕ ಉಂಟಾಗಲಿರುವ ಅಧಿಕ ವೆಚ್ಚವನ್ನು ಕಡಿಮೆ ಮಾಡಲು ವಿಮಾನಯಾನಕ್ಕೆ ಅಂತರಾಷ್ಟ್ರೀಯ ಟೆಂಡರ್ ಕರೆಯಬೇಕೆಂಬ ಬೇಡಿಕೆಗೆ ಕೇಂದ್ರ ಸರಕಾರ ಈ ವರೆಗೆ ಪ್ರತಿಕ್ರಿಯೆ ನೀಡಿಲ್ಲ.

ರಕ್ತ ಸಂಬಂಧಿಗಳಾದ ಪುರುಷರು ಇಲ್ಲದೆ ಮಹಿಳಾ ಯಾತ್ರಾರ್ಥಿಗೆ ಹಜ್ ಗೆ ಅನುಮತಿ ನಾವು ನೀಡಿದ್ದೇವೆ ಎಂದು ಇತ್ತೀಚೆಗೆ ಪ್ರಧಾನಿ ಮೋದಿ ಹೇಳಿಕೊಂಡಿದ್ದರು. ಆದರೆ, ಅಂತಹ ಅನುಮತಿ ನೀಡುವ ಅಧಿಕಾರ ಹಜ್‌ಗೆ ಆತಿಥ್ಯವನ್ನು ನೀಡುವ ಸೌದಿ ಅರೇಬಿಯಾ ಸರಕಾರಕ್ಕೆ ಮಾತ್ರ ಇದೆ ಎಂಬುದು ಸಾಮಾನ್ಯವಾಗಿ ಎಲ್ಲರೂ ತಿಳಿದಿರುವ ವಿಚಾರವಾಗಿದೆ.

ಮಕ್ಕಾ ಹರಂನ ನವೀಕರಣಕ್ಕೆ ಸಂಬಂದಪಟ್ಟು ಮೂರು ವರ್ಷಗಳಿಂದ ತಡೆ ಹಿಡಿಯಲಾಗಿದ್ದ ಭಾರತೀಯ ಕ್ವಾಟಾವನ್ನು ಕಳೆದ ವರ್ಷದಿಂದ ಸೌದಿ ಸರಕಾರ ತೆಗೆದು ಹಾಕಿತ್ತು. ಕ್ವಾಟಾ ಪ್ರಕಾರ ಭಾರತಕ್ಕೆ 1.7 ಲಕ್ಷ ಜನರು ಹಜ್‌ಗೆ ತೆರಳಬಹುದು. ಅದನ್ನು ಸರಕಾರೀ/ಖಾಸಗಿಯಾಗಿ ವಿಂಗಡಿಸುವ ವಿಚಾರದಲ್ಲೂ ಸರಕಾರ ನವೀನ ಮಾದರಿಯನ್ನು ಸ್ವೀಕರಿಸಿದೆ.

ವಿಮಾನಯಾನ ಸಚಿವಾಲಯ, ಹಜ್ ಕಮಿಟಿ, ಏರ್ ಇಂಡಿಯಾ ಮುಂತಾದವುಗಳ ಉನ್ನತ ಅಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸುವರು. ಆಗಸ್ಟ್ ಹತ್ತೊಂಬತ್ತಕ್ಕೆ ಈ ವರ್ಷದ ಹಜ್ ಪ್ರಾರಂಭವಾಗಲಿದ್ದು, ಹಜ್ಜಾಜ್‌ಗಳು ಜುಲೈ 14 ರಿಂದ ಜಿದ್ದಾ, ಮದೀನಾ ಮೂಲಕ ಪರಿಶುದ್ದ ಮಕ್ಕಾ ತಳುಪಲಿದ್ದಾರೆ.

ಇವುಗಳನ್ನೂ ಓದಿ

Leave a Reply

Your email address will not be published. Required fields are marked *

error: Content is protected !!