ಬಿಜೆಪಿ, ಪಿಎಫ್‌ಐ ನಾಯಕರ ಪ್ರಚೋದನಾತ್ಮಕ ಹೇಳಿಕೆ ಸಾಮರಸ್ಯ ಕೆಡಿಸುತ್ತಿದೆ

ಹುಬ್ಬಳ್ಳಿ: ಮಂಗಳೂರಿನಲ್ಲಿ ನಡೆದ ಘಟನೆಗೆ ಪೊಲೀಸರ ವೈಫಲ್ಯ ಕಾರಣವಲ್ಲ ಎಂದು ಗೃಹ ಸಚಿವ ರಾಮಲಿಂಗರೆಡ್ಡಿ ಹೇಳಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮದವರ ಜತೆ ಮಾತನಾಡಿದ ಅವರು, ಬಿಜೆಪಿ ನಾಯಕರ ಪ್ರಚೋದನಾತ್ಮಕ ಹೇಳಿಕೆಯಿಂದ ಸಾಮರಸ್ಯ ಹಾಳಾಗುತ್ತಿದೆ ಎಂದು ಆಪಾದಿಸಿದರು.

‘ಮಂಗಳೂರಿನಲ್ಲಿ ನಡೆದ ಘಟನೆಗೆ ಪೊಲೀಸರು ಹಾಗೂ ಗುಪ್ತಚರ ಇಲಾಖೆಯ ವೈಫಲ್ಯ ಕಾರಣ ಅಲ್ಲ. ಅಲ್ಲಿರುವ ಪೊಲೀಸರು ಯಾವ ಪಕ್ಷಗಳಿಗೂ ಸೇರಿದವರಲ್ಲ. ಬಿಜೆಪಿ, ಪಿಎಫ್‌ಐ, ಶ್ರೀರಾಮ ಸೇನೆ, ಆರ್‌ಎಸ್‌ಎಸ್‌ ಸಂಘಟನೆಗಳ ವರ್ತನೆಯಿಂದ ಸಾಮರಸ್ಯ ಹಾಳಾಗುತ್ತಿದೆ’ ಎಂದು ಅವರು ಟೀಕಿಸಿದರು.


ಮೂಡಿಗೆರೆ: ‘ಕೋಮುವಾದಿ ಸಂಘಟನೆಗಳನ್ನು ನಿಷೇಧಿಸುವ ಅಧಿಕಾರ ನಮಗಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು ‘ರಾಜ್ಯದಲ್ಲಿರುವ ಕೋಮುವಾದಿ ಸಂಘಟನೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ.ಬಜರಂಗದಳವಾಗಲಿ, ಪಿಎಫ್ಐ ಆಗಲಿ, ಶ್ರೀರಾಮ ಸೇನೆ ಆಗಲಿ ಯಾವುದೇ ಧರ್ಮದ ಸಂಘಟನೆ ವಿರುದ್ಧ  ಕ್ರಮ ಕೈಗೊಳ್ಳುತ್ತೇವೆ. ಅವುಗಳನ್ನು ಬ್ಯಾನ್‌ ಮಾಡುವ ಅಧಿಕಾರ ನಮ್ಮ ಬಳಿಯಲ್ಲಿ ಇಲ್ಲ’ ಎಂದರು.

‘ಕರಾವಳಿ ಭಾಗದಲ್ಲಿ ಕೋಮು ದಳ್ಳುರಿ ಹಬ್ಬಿಸುವ ಸಂಚು ಹೂಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ’ ಎಂದರು.

ಸುರತ್ಕಲ್‌ನ ಕಾಟಿಪಳ್ಳದಲ್ಲಿ ಹತ್ಯೆಗೀಡಾದ ದೀಪಕ್‌ ರಾವ್‌ ಅವರ ಪ್ರಕರಣದ ಕುರಿತಾಗಿ  ಆರೋಪಿಗಳಿಗೆ ಕಾಂಗ್ರೆಸ್‌ ಬೆಂಬಲಿಸುತ್ತಿದೆ ಎಂಬ ಬಿಜೆಪಿ ಆರೋಪವನ್ನು ಸಿಎಂ ಸಿದ್ದರಾಮಯ್ಯ ಅಲ್ಲಗಳೆದರು.

Leave a Reply

Your email address will not be published. Required fields are marked *

error: Content is protected !!