ಖತಾರ್: ಕಾರ್ಮಿಕ ಸೋಮಾರಿತನ ತೋರಿದಲ್ಲಿ ನಷ್ಟಪರಿಹಾರ ಪಡೆಯಲು ಮಾಲೀಕನಿಗೆ ಅವಕಾಶ

ದೋಹಾ: ದೇಶದ ಸ್ಥಾಪನೆಗೆ ಕಾರ್ಮಿಕನಾಗಿ ಸೇರಿದ ನಂತರ ಕೆಲಸಮಾಡಲು ಅಸಮ್ಮತಿ ಸೂಚಿಸಿದಲ್ಲಿ, ಆತನಿಂದ ನಷ್ಟಪರಿಹಾರ ಪಡೆಯಲು ಮಾಲೀಕನಿಗೆ ಅರ್ಹತೆ ಇದೆ ಎಂದು ಸಚಿವಾಲಯ ತಿಳಿಸಿದೆ. ಪ್ರಥಮ ಮೂರು ತಿಂಗಳ ಅವಧಿಯಲ್ಲಿ ಆಲಸ್ಯ ತೋರುವವರಿಗೆ ಇದು ಬಾಧಕವಾಗುತ್ತದೆ ಎಂದು ಕಾರ್ಮಿಕ, ಸಾಮಾಜಿಕ ಸಚಿವಾಲಯ ವ್ಯಕ್ತಪಡಿಸಿದೆ.

ಕೆಲಸ ಮಾಡಲು ಅಸಮ್ಮತಿ ಸೂಚಿಸಲು ಕಾರ್ಮಿಕ ತಯಾರಾದಲ್ಲಿ ಕೆಲಸದಾತನಿಗೆ ನಷ್ಟಪರಿಹಾರ ಪಡೆಯಬಹುದು. ಮೂರು ತಿಂಗಳಿಗೆ ಮಾತ್ರ ಈ ಕರಡಿಗೆ ವಾಯಿದೆ ಇರಲಿದೆ. ಮನೆಕೆಲಸದವರಿಗೂ ಇದು ಅನ್ವಯಿಸುತ್ತದೆ. ಕೆಲಸಕ್ಕಾಗಿ ಆಗಮಿಸಿ ವಿಮುಖರಾಗುವವರ ಸಂಖ್ಯೆ ದೇಶದಲ್ಲಿ ಹೆಚ್ಚುತ್ತಿರುವ ಕಾರಣ ಸಚಿವಾಲಯ ಇಂತಹ ತೀರ್ಮಾನ ಕ್ಕೆ ಬಂದಿದೆ. ನಿಶ್ಚಿತ ವರ್ಷಕ್ಕೆ ಕೆಲಸಕ್ಕೆಂದು ಒಪ್ಪಂದಕ್ಕೆ ಸಹಿ ಹಾಕಿ ಕೆಲಸಕ್ಕೆ ಸೇರಿದ ನಂತರ, ಕೆಲಸಕ್ಕೆ ಅಸಮ್ಮತಿ ತೋರಿದರೆ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತಿದೆ ಎಂದು ಹಲವು ದೂರು ಕೇಳಿಬಂದಿದ್ದವು.

ಆದರೆ, ಪ್ರಥಮ ಮೂರು ತಿಂಗಳು ಯಾವುದೇ ಕಿರಿಕ್ ಇಲ್ಲದೆ ಏಜನ್ಸಿ ನೀಡಿದ ನಿರ್ದೇಶನದಂತೆ ಕೆಲಸ ಮಾಡುವ ಕಾರ್ಮಿಕರು, ಆ ಬಳಿಕ ತಗಾದೆ ತೆಗೆಯುತ್ತಾರೆ ಎಂದು ಕೆಲವು ಕೆಲಸದಾತರು ಬೆಟ್ಟು ಮಾಡುತ್ತಾರೆ. ಮೂರು ತಿಂಗಳ ನಂತರ ನಷ್ಟ ಪರಿಹಾರ ನೀಡಬೇಕಾಗಿಲ್ಲ ಎನ್ನುವುದೇ ಈ ತಗಾದೆಗೆ ಕಾರಣ ಎನ್ನಲಾಗಿದೆ. ಹೊಸ ಆದೇಶದಂತೆ ಕೆಲಸಕ್ಕೆ ಸೇರುವ ಕಾರ್ಮಿಕರು, ಕೆಲಸದಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂಬುದನ್ನು ಪ್ರಥಮ ಮೂರು ತಿಂಗಳ ಒಳಗಾಗಿ ಬರಹ ಮೂಲಕ ತಿಳಿಸಬೇಕು.ಕಾರ್ಮಿಕ ಕಾನೂನಿನ ಏಳನೇ ಕಲಮಿನಂತೆ, ಕಾರ್ಮಿಕ ತಪ್ಪು ನಾಗರೀಕತೆ, ವಿಳಾಸ, ನಖಲು ದಾಖಲಾತಿಯನ್ನು ನೀಡಿರುವುದು ಗಮನಕ್ಕೆ ಬಂದರೆ, ಯಾವುದೇ ಎಚ್ಚರಿಕೆ ನೀಡದೆ, ಕೆಲಸ ನೀಡದಿರಲು ಕೆಲಸದಾತನಿಗೆ ಅರ್ಹತೆ ಇದೆ ಎಂದು ಸಚಿವಾಲಯ ತಿಳಿಸಿದೆ.ಕಾರ್ಮಿಕನ ತಪ್ಪಿನಿಂದಾಗಿ ಆರ್ಥಿಕ ನಷ್ಟ ಉಂಟಾದರೆ ಎರಡು ದಿನದ ಒಳಗಾಗಿ ಸಚಿವಾಲಯಕ್ಕೆ ತಿಳಿಸಬೇಕು.

ಕಾರ್ಮಿಕರ ಸುರಕ್ಷೆ ಸಂಬಂಧಿಸಿ ಕೆಲಸ ನೀಡಿದವರ ಒಡಂಬಡಿಕೆಯನ್ನು ಒಂದಕ್ಕಿಂತ ಹೆಚ್ಚು ಬಾರಿ ಮೀರಿದರೆ, ಆ ಬಗ್ಗೆ ಬರೆದು ಅಂಟಿಸುವಂತೆ ಆದೇಶಿಸಲಾಗಿದೆ. ಕಾರ್ಮಿಕ ಒಡಂಬಡಿಕೆಯಂತೆ ತನ್ನ ಬಾಧ್ಯತೆಯನ್ನು ನಿಭಾಯಿಸಲು ಒಂದಕ್ಕಿಂತ ಹೆಚ್ಚಿನ ಬಾರಿ ಪರಾಭವಗೊಳ್ಳುವುದು, ಕೆಲಸ ಮಾಡುವ ಸ್ಥಾಪನೆಯ ರಹಸ್ಯವನ್ನು ಬಹಿರಂಗ ಪಡಿಸುವುದು, ಕೆಲಸದ ವೇಳೆ ಮದ್ಯಪಾನ ಲಹರಿ ಪದಾರ್ಥಗಳನ್ನು ಬಳಸುವುದು, ಕೆಲಸದ ವೇಳೆ ಕೆಲಸದಾತ ಅಥವಾ ಮೇಲಾಧಿಕಾರಿ ಮೇಲೆ, ಸಹೋದ್ಯೋಗಿಗಳ ಮೇಲೆ ಕೈ ಮಾಡುವುದು, ಏಳು ದಿವಸ ನಿರಂತರವಾಗಿ ಕೆಲಸಕ್ಕೆ ಗೈರಾಗುವುದು, ವರ್ಷದಲ್ಲಿ ನಿರಂತರವಾಗಿ ವಿನಾ ಕಾರಣ ಗೈರಗಾರುವುದು, ಅಕ್ರಮಣದಲ್ಲಿ ಭಾಗಿಯಾಗುವುದು ಮುಂತಾದ ಕಾರಣಕ್ಕೆ ಕಾರ್ಮಿಕನನ್ನು ಕೆಲಸದಿಂದ ಕಿತ್ತೊಗೆಯಲು ಕೆಲಸದಾತನಿಗೆ ಅಧಿಕಾರವಿದೆ.

ಅನಿವಾಸಿ ಕಾರ್ಮಿಕರ ಹಕ್ಕುಗಳ ಸಂರಕ್ಷಣೆಯನ್ನು ಈ ವ್ಯವಸ್ಥೆಗಳು ಕಾಪಾಡುತ್ತದೆ ಎಂದು ಸಚಿವಾಲಯ ಹೇಳಿಕೊಂಡಿದೆ. ಈ ಪ್ರಕಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಾಗುತ್ತದೆ. ಸ್ಪೋನ್ಸರ್ ವಿರುದ್ದ, ಕಾರ್ಮಿಕನಿಗೆ ಸಚಿವಾಲಯದ ಲೇಬರ್ ರಿಲೇಶನ್ಸ್ ಕಚೇರಿ ಅಥವಾ ತರ್ಕ ಪರಿಹಾರ ಕಮಿಟಿ ಮುಂದೆ ತನ್ನ ದೂರನ್ನು ದಾಖಲಿಸಬಹುದು. ರಿಕ್ರೂಟ್ಮೆಂಟ್ ಅಂಗೀಕಾರವನ್ನು ಗೊತ್ತು ಪಡಿಸಲು ಹಲವು  ದೇಶಗಳೊಂದಿಗೆ ಸಹಕರಿಸಿ ಸಚಿವಾಲಯ ಕಾರ್ಯನಿರ್ವಹಿಸುತ್ತದೆ. ಕಾರ್ಮಿಕ ಮತ್ತು ಕೆಲಸದಾತರ ಹಕ್ಕುಗಳನ್ನು ಸಂರಕ್ಷಿಸಿ ಖತ್ತರ್‌ನಲ್ಲಿ ರಿಕ್ರೂಟ್ಮೆಂಟ್ ಸ್ಥಾಪನೆಗಳು ಕಾನೂನಿನ ಅನುಸಾರವಾಗಿ ಅಂಗೀಕಾರ ಪಡೆದು ಕಾರ್ಯಾಚರಿಸುತ್ತದೆ ಎಂದು ಸಚಿವಾಲಯ ತಿಳಿಸಿದೆ.

ಇವುಗಳನ್ನೂ ಓದಿ

Leave a Reply

Your email address will not be published. Required fields are marked *

error: Content is protected !!