janadhvani

Kannada Online News Paper

ಚಿನ್ನ ವ್ಯಾಪಾರದ ಮರೆಯಲ್ಲಿ ಹವಾಲಾ ಶಂಕೆ: ಜ್ಯುವೆಲ್ಲರಿಗಳಲ್ಲಿ ವ್ಯಾಪಕ ತಪಾಸಣೆ

ಕುವೈಟ್ ಸಿಟಿ: ಚಿನ್ನದ ಚ್ಚಿನ್ನದ ಅಂಗಡಿಗಳ ಮೂಲಕ ಹವಾಲಾ ವ್ಯವಹಾರಗಳನ್ನು ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಫರ್ವಾನಿಯಾ ಗವರ್ನರ್ನರೇಟ್‌ನ ಚಿನ್ನದ ಅಂಗಡಿಗಳಲ್ಲಿ ನಡೆಸಿದ ಪರಿಶೋಧನೆಯಲ್ಲಿ, ಲೆಕ್ಕದಲ್ಲಿ ಗಣಿಸದ ಭಾರೀ ಮೊತ್ತದ ಚಿನ್ನವನ್ನು ಕಂಡುಹಿಡಿದಿದ್ದವು. ಹಣ ಬಿಳುಪು ಗೊಳಿಸುವುದು, ಭಯೋತ್ಪಾದಕ ಸಂಘಟನೆಗಳಿಗೆ ಸಹಾಯ ತಲುಪಿಸುವುದು ಮುಂತಾದವುಗಳಿಗೆ ಚಿನ್ನ ವ್ಯಾಪಾರ ಕೇಂದ್ರಗಳ ಮೂಲಕ ನಡೆಯುತ್ತಿವೆಯೇ ಎನ್ನುವ ಪ್ರಶ್ನೆ ಶಕ್ತವಾಗ ತೊಡಗಿದೆ. ಮುಟ್ಟುಗೋಳು ಗೊಳಿಸಲಾದ ಬಂಗಾರವನ್ನು ಸಂಬಂಧಪಟ್ಟ ಖಾತೆಗೆ ವರ್ಗಾಯಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫರ್ವಾನಿಯ, ಜಲೀಬ್ ಶುಯೂಖ್ ಮುಂತಾದ ಕಡೆಗಳಲ್ಲಿ ನಡೆಸಿದ ಪರಿಶೋಧನೆಯಲ್ಲಿ  ಲೆಕ್ಕವಿಲ್ಲದ ಚಿನ್ನದ ಸಂಗ್ರಹ ಜುವೆಲ್ಲರಿಗಳಲ್ಲಿ ಕಂಡುಬಂದಿವೆ.ತನಿಖಾ ವರದಿಯ ಆಧಾರದಲ್ಲಿ ವಶಪಡಿಸಿಕೊಂಡ ಚಿನ್ನವನ್ನು ಅಂಗಡಿಗಳಿಗೆ ಹಿಂತಿರುಗಿಸಲಾಗುತ್ತದೆ.
ಬ್ಯಾಲೆನ್ಸ್ ಶೀಟ್ ಮತ್ತು ಬೆಲೆ ಮುಂತಾದವುಗಳು ಇಲ್ಲದಿರುವಿಕೆ ಶಾಸನಬದ್ಧವಲ್ಲದ ಮಾರ್ಕೆಟಿಂಗ್ ಮತ್ತು ಸಚಿವಾಲಯದ ಮುದ್ರಣವಿಲ್ಲದ ಚಿನ್ನದ ಆಭರಣಗಳು ಜುವೆಲ್ಲರಿಗಳಲ್ಲಿ ಕಂಡುಬಂದಿದ್ದವು.

error: Content is protected !! Not allowed copy content from janadhvani.com