“ಶೈಕ್ಷಣಿಕ ಉನ್ನತಿಯ ಅನ್ವೇಷಣೆ” ಮರ್ಕಝ್ ರೂಬಿ ಜ್ಯುಬಿಲಿಗೆ ಅದ್ದೂರಿ ಪ್ರಾರಂಭ

ಕಲ್ಲಿಕೋಟೆ: ಸಾಂಸ್ಕೃತಿಕ ವಿಶ್ವದ ವೈಜ್ಞಾನಿಕ ಕೇಂದ್ರವಾದ ಕಾರಂದೂರ್ ಮರ್ಕಝ್‌ನ ರೂಬಿ ಜ್ಯುಬಿಲಿ ಸಮಾವೇಶವು ವರ್ಣ ರಂಜಿತವಾಗಿ ಪ್ರಾರಂಭಗೊಂಡಿತು. ಸಾದಾತ್‌ಗಳು, ಪಂಡಿತರ ಸಾನಿಧ್ಯದಲ್ಲಿ ಯುಎಇ ಸರಕಾರದ ಧಾರ್ಮಿಕ ಉಪದೇಶಕ ಸೈಯದ್ ಅಬ್ದು ರಹ್ಮಾನ್ ಅಲ್ ಹಾಶಿಮಿ ಸಮ್ಮೇಳನವನ್ನು ಉದ್ಘಾಟಿಸಿದರು.ಶೈಕ್ಷಣಿಕ ಉನ್ನತಿಯ ಅನ್ವೇಷಣೆ  ಎಂಬ ಧ್ವೇಯ ವಾಕ್ಯದೊಂದಿಗೆ ನಾಲ್ಕು ದಿನಗಳ ಸಮ್ಮೇಳನದಲ್ಲಿ ವಿಜ್ಞಾನ ವಿನಿಮಯಗಳ ಹೊಸ ಹಾದಿಗಳ ಬಗ್ಗೆ ಚರ್ಚೆ ನಡೆಯಲಿದೆ. ಅನಾಥರಿಗೆ ಅನ್ನ ಮತ್ತು ವಿದ್ಯೆಯನ್ನು ನೀಡುತ್ತಾ ಪ್ರಾರಂಭಿಸಿ, ನಲ್ವತ್ತು ಸಂವತ್ಸರಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಸೇವೆ ನೀಡುತ್ತಾ ಉತ್ತುಂಗವೇರಿದ ಮರ್ಕಝು ಸ್ಸಖಾಫತಿ ಸ್ಸುನ್ನಿಯ್ಯಾ ಇಂದು ರೂಬಿ ಜ್ಯುಬಿಲಿಯ ಸಡಗರದಲ್ಲಿದೆ. ಈ ಮಹತ್ತರವಾದ ಸಂದರ್ಭದಲ್ಲಿ ಜನ ಲಕ್ಷಗಳು ಆ ಶುಭ ಘಳಿಗೆಗೆ ಸಾಕ್ಷಿಯಾಗಿ ಸೇರಲಿದೆ.

ಡಾ.ಎಂ.ಎ ಯೂಸುಫಲಿ ಮುಖ್ಯ ಅತಿಥಿಯಾಗಿ ಬಾಗವಹಿಸಿದ್ದು, ಸೈಯದ್ ಆಟ್ಟಕ್ಕೋಯ ತಂಙಳ್ ಕುಂಬೋಳ್ ಪ್ರಾರ್ಥನೆ ಗೈದರು. ಸಂಜೆ 6 ಕ್ಕೆ ನಡೆದ ಆಧ್ಯಾತ್ಮಿಕ ಸಮ್ಮೇಳನವನ್ನು ಹಬೀಬ್ ಅಲಿ ಝೈನುಲ್ ಆಬಿದೀನ್ ಅಬೂಬಕರ್ ಅಲ್ ಹಾಮಿದ್ ಉದ್ಘಾಟಿಸಿದರು. ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ತ್ ಪ್ರಾರ್ಥನೆ ನಡೆಸಿ, ಉಡುಪಿ ಸಂಯುಕ್ತ ಖಾಝಿ ಬೇಕಲ್ ಇಬ್ರಾಹೀಂ ಮುಸ್ಲಿಯಾರ್ ಮುಖ್ಯ ಭಾಷಣ ಮತ್ತು ಸಿ.ಮುಹಮ್ಮದ್ ಫೈಝಿ ಅನುಸ್ಮರಣಾ ಪ್ರಭಾಷಣ ಮಾಡಿದರು.ಸೌದಿ ಅರೇಬಿಯಾ,ಇರಾಖ್, ಚೈನಾ ಸೇರಿದಂತೆ ಹಲವಾರು ವಿದೇಶ ಪ್ರತಿನಿಧಿಗಳು ಭಾಗವಹಿಸಿದ್ದರು.

ಶುಕ್ರವಾರ 2:30ಕ್ಕೆ ನಡೆಯುವ ಅನಿವಾಸಿ ಮೀಟ್‌ನಲ್ಲಿ ಶಾಸಕ ಪಿ.ವಿ ಅನ್ವರ್, ಶಾಸಕ ವಿ. ಅಬ್ದುಲ್‌ ರಹ್ಮಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. 3ಕ್ಕೆ ನಡೆಯುವ ಸಾಂಸ್ಕೃತಿಕ ಸಮಾವೇಶವನ್ನು ಡಾ.ಎಂ.ಜಿ.ಎಸ್ ನಾರಾಯಣ್ ಉದ್ಘಾಟನೆ ಮಾಡುವರು. ಜಸ್ಟಿಸ್ ಕಮಾಲ್ ಪಾಷ, ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಕೊಡಿಯೇರಿ ಬಾಲಕೃಷ್ಣನ್, ಎಂ.ಪಿ ವೀರೇಂದ್ರ ಕುಮಾರ್, ಹಜ್ ಕಮಿಟಿ ಅಧ್ಯಕ್ಷ ತೊಡಿಯೂರ್ ಮುಹಮ್ಮದ್ ಕುಂಞಿ ಮೌಲವಿ ಮುಖ್ಯ ಅತಿಥಿಗಳಾಗಿರುವರು.ಸಂಜೆ 6:30ಕ್ಕೆ ನಡೆಯುವ ಆದರ್ಶ ಸಮ್ಮೇಳನವನ್ನು ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಉದ್ಘಾಟಿಸುವರು. 7:30 ಕ್ಕೆ ನಡೆಯುವ ನ್ಯಾಷನಲ್ ಮೀಟನ್ನು ಸೈಯದ್ ಮುಹಮ್ಮದ್ ಅಶ್ರಫ್ ಕಚ್ಚೊಚ್ಚವಿ ಉದ್ಘಾಟಿಸುವರು.

ಶನಿವಾರ ಬೆಳಗ್ಗೆ ಒಂಬತ್ತಕ್ಕೆ ಮಾನವಹಕ್ಕು ಸಮ್ಮೇಳನವನ್ನು ಸಚಿವ ಕಡಕಂಪಳ್ಳಿ ಸುರೇಂದ್ರನ್ ಉದ್ಘಾತಿಸುವರು. ಬಂದರು ಸಚಿವ ಕಡನ್ನಪಳ್ಳಿ ರಾಮಚಂದ್ರನ್ ಮುಖ್ಯಾತಿಥಿಯಾಗಿ ಭಾಗವಹಿಸುವರು.ಅಪರಾಹ್ನ 2ಕ್ಕೆ ನಡೆಯುವ ವಿದ್ಯಾಭ್ಯಾಸ ಸಮ್ಮೇಳನವನ್ನು ರೆವಿನ್ಯೂ ಸಚಿವ ಇ. ಚಂದ್ರಶೇಖರನ್ ಉದ್ಘಾಟನೆ ಮಾಡುವರು. ಸೈಯದ್ ಖಲೀಲುಲ್ ಬುಖಾರಿ ಅಧ್ಯಕ್ಷತೆ ವಹಿಸುವರು.ಸಂಜೆ 4ಕ್ಕೆ ನಡೆಯುವ ಸೌಹಾರ್ದ ಸಮ್ಮೇಳನವನ್ನು  ಸಚಿವ ಕೆ.ಟಿ. ಜಲೀಲ್ ಉದ್ಘಾಟಿಸುವರು.ಸಂಜೆ  6:30 ಕ್ಕೆ ಶೈಖ್ ಝಾಯಿದ್ ಪೀಸ್ ಕಾನ್ಫರೆನ್ಸ್ ‌ನ್ನು ಅಲ್ ಇತ್ತಿಹಾದ್‌ನ ಸಂಪಾದಕ ಮುಹಮ್ಮದ್ ಅಲ್ ಹಮ್ಮಾದಿ ಉದ್ಘಾಟಿಸುವರು. ಸಚಿವ ಟಿ.ಪಿ ರಾಮಕೃಷ್ಣನ್, ಸುಪ್ರೀಂ ಕೋರ್ಟ್ ನ್ಯಾಯಾಧೀಶ ಆರ್.ಕೆ ಅಗರ್ವಾಲ್, ರಾಷ್ಟ್ರಪತಿ ಭವನದ ಕಾರ್ಯದರ್ಶಿ ಮುಹಮ್ಮದ್ ಖಾಲಿದ್ ಖಾಝಿ, ಡಾ. ಅತುಲ್ ಶರ್ಮ ಮುಂತಾದವರು ಭಾಗವಿಹಿಸುವರು.

ಆದಿತ್ಯವಾರ ಬೆಳಗ್ಗೆ ಒಂಬತ್ತಕ್ಕೆ ನಡೆಯುವ ಲೈಫ್ ಸ್ಟೈಲ್ ಕಾನ್ಫರೆನ್ಸನ್ನು ಡಾ.ವಿ.ಆರ್ ರಾಜೇಂದ್ರನ್ ಉದ್ಘಾಟನೆ ಮಾಡುವರು. ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ. ಪದ್ಮಶ್ರೀ. ರವಿ ಪಿಳ್ಳ ಮುಂತಾದವರು ಭಾಗವಹಿಸುವರು. 9ಕ್ಕೆ ನಡೆಯುವ ಸೌತ್ ಝೋನ್ ಸ್ಕಾಲೆರ್ಸ್ ಮೀಟನ್ನು ಸೈಯದ್ ಅಬ್ದುಲ್ ಖಾದರ್ ಮಹಬರಿ ತಂಙಳ್ ಉದ್ಘಾಟಿಸುವರು. 11ಕ್ಕೆ ಉಲಮಾ ಸಮಾವೇಶವನ್ನು ಎ.ಪಿ. ಮುಹಮ್ಮದ್ ಮುಸ್ಲಿಯಾರ್ ಕಾಂತಪುರಂ ಮತ್ತು ಮಹಲ್ಲ್ ಕಾನ್ಫರೆನ್ಸನ್ನು ಡಾ.ಎ.ಬಿ ಮೊಯ್ದೀನ್ ಕುಟ್ಟಿ ಉದ್ಘಾಟಿಸುವರು.

ಸಂಜೆ ನಾಲ್ಕಕ್ಕೆ ನಡೆಯುವ ಸಮಾರೋಪ ಮಹಾ ಸಮ್ಮೇಳನವನ್ನು ಯುಎಇ ಧಾರ್ಮಿಕ ದತ್ತಿ ಇಲಾಖೆಯ ಉಪದೇಶಕ ಸೈಯದ್ ಅಲಿಯ್ಯುಲ್ ಹಾಶಿಮಿ ಉದ್ಘಾಟಿಸುವರು. ಮರ್ಕಝ್ ಚಾನ್ಸಲರ್ ಕಾಂತಪುರಂ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಸನದ್ ದಾನ ಪ್ರಭಾಷಣ ಸಡೆಸುವರು. ಸಮಸ್ತ ಅಧ್ಯಕ್ಷ ಇ.ಸುಲೈಮಾನ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸುವರು. ಸೈಯದ್ ಅಲಿ ಬಾಫಕಿ ತಂಙಳ್ ಪ್ರಾರ್ಥನೆ ನೆರೆವೇರಿಸುವರು. ಟುನೀಷ್ಯಾದ ಝೈತೂನ ವಿವಿಯ ವೈಸ್ ಚಾನ್ಸಲರ್ ಡಾ. ಹಿಶಾಂ ಅಬ್ದುಲ್ ಕರೀಂ ಖರೀಸ ಸನದ್ ದಾನ ಮಾಡುವರು. ಸೈಯದ್ ಝೈನುಲ್ ಆಬಿದೀನ್ ಬಾಫಕಿ ಮಲೇಷಿಯಾ, ಸೈಯದ್ ಇಬ್ರಾಹೀಂ ಖಲೀಲುಲ್ ಬುಖಾರಿ, ಚಿತ್ತಾರಿ ಕೆ.ಪಿ ಹಂಝ ಮುಸ್ಲಿಯಾರ್, ಪೊನ್ಮಳ ಅಬ್ದುಲ್ ಖಾದರ್ ಮುಸ್ಲಿಯಾರ್, ಎ.ಪಿ ಮುಹಮ್ಮದ್ ಮುಸ್ಲಿಯಾರ್, ಸಿ.ಮುಹಮ್ಮದ್ ಫೈಝಿ, ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ, ಡಾ.ಎ.ಪಿ ಅಬ್ದಲ್ ಹಕೀಂ ಅಝ್ಹರಿ, ಸಿ.ಎಂ ಇಬ್ರಾಹೀಂ ಮಾತನಾಡಲಿರುವರು.

ಇವುಗಳನ್ನೂ ಓದಿ

Leave a Reply

Your email address will not be published. Required fields are marked *

error: Content is protected !!