ಎಸ್ಸೆಸ್ಸೆಪ್ ಉಡುಪಿ ಡಿವಿಷನ್ ಪ್ರತಿಭೊತ್ಸವ: ಕಟಪಾಡಿ ಸೆಕ್ಟರ್ ಪ್ರಥಮ

ಉಡುಪಿ : ಎಸ್ಸೆಸ್ಸೆಪ್ ಕರ್ನಾಟಕ ರಾಜ್ಯ ಸಮಿತಿಯು ಎರಡು ವರ್ಷಕ್ಕೊಮ್ಮೆ ನಡೆಸುವ ಪ್ರತಿಭೊತ್ಸವದ ಅಂಗವಾಗಿ ಉಡುಪಿ ಡಿವಿಷನ್ ಮಟ್ಟದಲ್ಲಿ 2017 ಡಿಸೆಂಬರ್ 31 ರಂದು ದಾರುಸ್ಸಲಾಂ ಹೂಡೆಯಲ್ಲಿ ನಡೆಸಲಾಯಿತು. ಇಲ್ಲಿನ ಮಸೀದಿ ಖತೀಬರಾದ ಮೌಲಾನ ಅಬೂಬಕ್ಕರ್ ಲತೀಪಿ ಧ್ವಜಾರೋಹಣ ಮಾಡಿ, ದುವಾ ದೊಂದಿಗೆ ಪ್ರಾರಂಭಿಸಲಾಯಿತು. ದಾರುಸ್ಸಲಾಂ ಮದ್ರಸ ಪ್ರಾದ್ಯಪಕರಾದ ಸಲೀಂ ಮಿಸ್ಬಾಹಿ ಹೂಡೆ ಕಾರ್ಯಕ್ರಮ ಉದ್ಘಾಟಿಸಿದರು.ನಂತರ ಸ್ಫರ್ಧಾ ಕಾರ್ಯಕ್ರಮದಲ್ಲಿ ಜೂನಿಯರ್, ಸೀನಿಯರ್, ಜನರಲ್,ದವ್’ವಾ ಜೂನಿಯರ್, ಸೀನಿಯರ್ ಕ್ಯಾಂಪಸ್ ಒಟ್ಟು 7 ವಿಭಾಗದಲ್ಲಿ ಸ್ಪರ್ದೆ ನಡೆಸಿ, ಚಾಂಪಿಯನ್ಸ್ ಆಗಿ ಕಟಪಾಡಿ ಸೆಕ್ಟರ್ ಪ್ರಥಮ, ಮಣಿಪಾಲ ಸೆಕ್ಟರ್ ದ್ವಿತೀಯ, ಬ್ರಹ್ಮಾವರ ಸೆಕ್ಟರ್ ತೃತೀಯ ಸ್ಥಾನ ಪಡೆದಿಕೊಂಡಿತು. ಉಡುಪಿ ಡಿವಿಷನ್ ಹಾಗು ಬ್ರಹ್ಮಾವರ ಸೆಕ್ಟರ್ ವತಿಯಿಂದ ಸುಬುಹಾನ್ ಅಹಮದ್ ಹೊನ್ನಾಳ ಇವರಿಗೆ ಮರ್ಹೂಂ ಸಪ್ವಾನ್ ರಂಗನಕೆರೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಎಸ್.ವೈ.ಎಸ್ ಕಾರ್ಯದರ್ಶಿ ಅಬ್ದುರ್ಹ್ಮಾನ್ ರಝ್ವಿ ಕಲ್ಕಟ್ಟ,ಪ್ರತಿಭೊತ್ಸವ ಸ್ವಾಗತ ಸಮಿತಿ ಚೇರ್ಮನ್ ಅಶ್ರಪ್ ಜಿ,ವೈಸ್ ಚೇರ್ಮೆನ್ ಜುನೈದ್ ಹೂಡೆ,ಕನ್ವೀನರ್ ಕಯ್ಯೂಮ್ ಹೂಡೆ,ಝುಲ್ಪಿಕರ್,ಕುದುರ್ ಉಮರ್ ಸಾಹೆಬ್,ಅಬ್ಬಾಸ್ ಸಾಹೆಬ್,ಉಡುಪಿ ಡಿವಿಷನ್ ಪ್ರ.ಕಾರ್ಯದರ್ಶಿ ನಝೀರ್ ಸಾಸ್ತಾನ,ಕೋಶಾಧಿಕಾರಿ ಇಬ್ರಾಹಿಂ ರಂಗನಕೆರೆ,ಕಾರ್ಯದರ್ಶಿಗಳಾದ ನವಾಝ್ ಮಣಿಪುರ,ಶಾಹುಲ್ ದೊಡ್ಡಣಗುಡ್ಡೆ, ಉಪಾಧ್ಯಕ್ಷ ರಶೀದ್ ಉಸ್ತಾದ್ ಕಟಪಾಡಿ, ಕಟಪಾಡಿ ಸೆಕ್ಟರ್ ಅಧ್ಯಕ್ಷ ಶರ್ವಾನಿ ಉಸ್ತಾದ್, ಬ್ರಹ್ಮಾವರ ಸೆಕ್ಟರ್ ಅಧ್ಯಕ್ಷ ಇಮ್ತಿಯಾಝ್ ಹೊನ್ನಾಳ, ಮಣಿಪಾಲ ಸೆಕ್ಟರ್ ಉಪಾದ್ಯಕ್ಷ ಸಿದ್ದೀಕ್ ಸಂತೋಷ್ ನಗರ,ಕಯ್ಯಮ್ ಮಲ್ಪೆ,ರಪೀಕ್ ಕಟಪಾಡಿ,ಉಪಸ್ಥಿತಿ ಇದ್ದರು.

ಪ್ರತೀಭೋತ್ಸವದ ವೀಕ್ಷಕರಾಗಿ ರಾಜ್ಯ ಸಮಿತಿ ಸದಸ್ಯ ರವೂಪ್ ಖಾನ್ ಮೂಡುಗೋಪಾಡಿ ಹಾಗು ತೀರ್ಪುಗಾರರಾಗಿ ಕುರ್ನಾಡು ಅಶ್ರಪ್ ಸಖಾಪಿ,ಉಮರುಲ್ ಪಾರುಕ್ ಅಹ್ಸನಿ ಕೋಡಿಕೆರೆ,ಮಜೀದ್ ಮಾಸ್ಟರ್ ಮಳಲಿ,ಉಮರುಲ್ ಪಾರುಖ್ ಸಂಕೇಶ ಆಗಮಿಸಿದರು.ಉಡುಪಿ ಜಿಲ್ಲಾ ಕಾರ್ಯದರ್ಶಿ ನಾಸೀರ್ ಭದ್ರಗಿರಿ ಕಾರ್ಯಕ್ರಮ ನಿರೂಪಿಸಿ,ಪ್ರತಿಭೋತ್ಸವ ಕನ್ವೀನರ್ ಯೂಸುಪ್ ಹೂಡೆ ಸ್ವಾಗತಿಸಿದರು. ಡಿವಿಷನ್ ಅಧ್ಯಕ್ಷ ಅಬ್ದುರ್ರಹ್ಮಾನ್ ಸಹದಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!