ಕೆ.ಸಿ.ಎಫ್ ಬಹರೈನ್ ಸಮಾಗಮ ಏಕದಿನ ತರಬೇತಿ ಶಿಬಿರ

ಮನಾಮ:ಕರ್ನಾಟಕ ಕಲ್ಚರಲ್ ಫೌಂಡೇಷನ್ ಕೆ.ಸಿ.ಎಫ್ ಬಹರೈನ್ ಆಯೋಜಿಸಿದ ಸಮಾಗಮ ಏಕದಿನ ತರಬೇತಿ ಶಿಬಿರ ವು ಇತ್ತೀಚೆಗೆ ಐಸಿಎಫ್ ಸುನ್ನಿ ಸೆಂಟರ್ ಮನಾಮದಲ್ಲಿ ನಡೆಯಿತು. ಕೆಸಿಎಫ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಫಾರೂಕ್ ಎಸ್ ಎಂ ರವರ ಅಧ್ಯಕ್ಷತೆಯಲ್ಲಿ ನಡೆದ ಸಮಾವೇಶಕ್ಕೆ ಮುಖ್ಯ ತರಬೇತುದಾರರಾಗಿ ಕೆ.ಸಿ.ಎಫ್ ಅಂತರ್ ರಾಷ್ಟ್ರೀಯ ಸಮಿತಿ ಸಂಘಟನಾ ಅಧ್ಯಕ್ಷರಾದ ಪಿ.ಎಂ.ಹೆಚ್ ಈಶ್ವರಮಂಗಳರವರು ಆಗಮಿಸಿದ್ದರು.ಕೆ.ಸಿ.ಎಫ್ ಮುಹರ್ರಕ್ ಸೆಕ್ಟರ್ ಅಧ್ಯಕ್ಷರಾದ ಬಹು| ಅಬೂಬಕ್ಕರ್ ಸಿದ್ದಿಕ್ ಉಸ್ತಾದ್ ರವರ ದುಃಅ ದೊಂದಿಗೆ ಶಿಬಿರವು ಆರಂಭಗೊಂಡಿತು.ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿ ಸಂಘಟನಾ ಕಾರ್ಯದರ್ಶಿ ಸಮದ್ ಉಜಿರೆಬೆಟ್ಟು ಸ್ವಾಗತ ಭಾಷಣವನ್ನು ಮಾಡಿದರು.
ಕಾರ್ಯಕ್ರಮದ ಉದ್ಘಾಟನಾ ಭಾಷಣದಲ್ಲಿ ಐ ಸಿ ಎಫ್ ಮನಾಮ ಸೆಂಟ್ರಲ್ ಇದರ ಅಧ್ಯಕ್ಷರಾದ ಶಾನವಾಝ್ ಮದನಿ ರವರು ಶೈಖ್ ಜೀಲಾನಿ (ಖ. ಸಿ.)ರವರ ಜೀವನ ಚರಿತ್ರೆ ಯನ್ನು ವಿವರಿಸುತ್ತಾ ,ತಮ್ಮ ಜೀವನವನ್ನೇ ದೀನೀ ಪ್ರಚಾರಕ್ಕಾಗಿ ಮುಡಿಪಾಗಿಟ್ಟ ಉಲಮಾ ಉಮರಾ ಮಹಾನುಭಾವರ ನಿಸ್ವಾರ್ಥ ಸೇವೆಯ ವ್ಯಕ್ತಿತ್ವ ಗಳನ್ನು ತಮ್ಮಲ್ಲಿ ಮೈ ಗೂಡಿಸಿಕೊಂಡು ಜೀವನವನ್ನು ಮುನ್ನಡೆಸುವಂತೆ ಕೆ ಸಿ ಎಫ್ ಕಾರ್ಯಕರ್ತರಿಗೆ ಕರೆಕೊಟ್ಟರು.ಪ್ರಾಸ್ತಾವಿಕ ಭಾಷಣವನ್ನು ಕೆ ಸಿ ಎಫ್ ಬಹರೈನ್ inc ಪ್ರತಿನಿಧಿ ಜಮಾಲ್ ವಿಟ್ಲ ರವರು ನೆರವೇರಿಸಿದರು.ಅಧ್ಯಕ್ಷೀಯ ಭಾಷಣದಲ್ಲಿ ಫಾರೂಕ್ ಎಸ್ ಎಂ ರವರು ಮಾತನಾಡುತ್ತಾ, ಸಂಘಟನಾ ತರಬೇತಿ ಶಿಬಿರದ ಅವಶ್ಯಕತೆಯ ಕುರಿತು ಸಂಕ್ಷಿಪ್ತ ವಾಗಿ ವಿವರಿಸಿದರು.
ಕೆ ಸಿ ಎಫ್ ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಅಝೀಜ್ ಸುಳ್ಯ ರವರು ಕೆ ಸಿ ಎಫ್ ಕಾರ್ಯಕಾರಿ ಸಮಿತಿ ಸದಸ್ಯರ ನ್ನು ಪರಸ್ಪರ ಪರಿಚಯಿಸಿದರು.ಸಂಘಟನಾ ತರಬೇತಿ ಕಾರ್ಯಕ್ರಮದಲ್ಲಿ ಪಿ.ಎಂ.ಹೆಚ್ ಅಬ್ದುಲ್ ಹಮೀದ್ ಈಶ್ವರಮಂಗಲ ರವರು ಸಂಘಟನೆಯ ಎಲ್ಲಾ ಇಲಾಖೆಗಳ ಮಾರ್ಗಸೂಚಿಗಳನ್ನು ಪ್ರತಿಯೊಬ್ಬ ಸದಸ್ಯನಿಗೂ ಮನದಟ್ಟು ಆಗುವ ರೀತಿಯಲ್ಲಿ ಸವಿ ಸ್ತಾರವಾಗಿ ವಿವರಿಸಿದರು.

ಆರ್ ಎಸ್ ಸಿ ಬಹರೈನ್ ನ್ಯಾಷನಲ್ ಚೇರ್ಮ್ಯಾನ್ ಅಬ್ದುಲ್ ರಹೀಮ್ ಸಖಾಫಿ ಉಸ್ತಾದ್ ರವರು ಮಾರ್ಗದರ್ಶಕ ನಾದ ಒಬ್ಬ ಕಾರ್ಯಕರ್ತನ ಜವಾಬ್ದಾರಿಗಳು ಏನೆಂಬುದನ್ನು ತನ್ನ ಸರಳ ಶೈಲಿಯಲ್ಲಿ ಮೂಲಕ ಕೆ ಸಿ ಎಫ್ ಕಾರ್ಯಕರ್ತ ರಿಗೆ ತರಬೇತಿ ನೀಡಿದರು.
ತರಬೇತಿ ಕಾರ್ಯಕ್ರಮದಲ್ಲಿ ಐಸಿಎಫ್ ಬಹರೈನ್ ಇದರ ರಾಷ್ಟ್ರೀಯ ಸಮಿತಿ ಯ ಪ್ರಧಾನ ಕಾರ್ಯದರ್ಶಿ ಎಂ ಸಿ ಕರೀಂ ರವರು ಪರಿಣಾಮಕಾರಿ ಸಭೆ ನಡೆಯಬೇಕಾದರೆ ಅವಶ್ಯಕತೆ ಇರುವ ಕೆಲವು ಮಹತ್ವಪೂರ್ಣ ಟಿಪ್ಸ್ ಗಳನ್ನು ಕೆಸಿಎಫ್ ಕಾರ್ಯಕರ್ತರಿಗೆ ತಿಳಿಸಿದರು.

ಕೆಸಿಎಫ್ ರಾಷ್ಟ್ರೀಯ ಸಮಿತಿ ಸಂಘಟನಾ ವಿಭಾಗದ ಎಕ್ಸಿಕ್ಯೂಟಿವ್ , ಅಸ್ಸುಫ್ಫಾ ಬೋಧಕರೂ ಆಗಿರುವ ಬಹು| ಅಬೂಬಕರ್ ಮದನಿ ಉಸ್ತಾದ್ ರವರು ಸಂಘಟನೆಯ ಎಲ್ಲಾ ಖಾತೆಗಳ ನೇತಾರರೊಂದಿಗೆ, ತಮ್ಮ ತಮ್ಮ ಜವಾಬ್ಧಾರಿ ಗಳ ಮಹತ್ವವನ್ನು ಅರಿತು ಕಾರ್ಯಾಚರಿಸಲು, ಸ್ವಹಾಭಿ ವರ್ಯ ರುಗಳ ನೇತೃತ್ವವನ್ನು ಮಾದರಿಯಾಗಿಸಿ ಕಾರ್ಯಪ್ರವೃತ ರಾಗಬೇಕೆಂದು ತಿಳಿಸಿದರು. ಶಿಬಿರದ ಕೊನೆಯಲ್ಲಿ ತರಬೇತಿ ಕಾರ್ಯಕ್ರಮದ ಅನುಭವವವನ್ನು ಸದಸ್ಯರು ಪರಸ್ಪರ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಕೆಸಿಎಫ್ ಬಹರೈನ್ ಐಎನ್ ಸಿ ನೇತಾರಾದ ಅಲಿ ಮುಸ್ಲಿಯಾರ್, ಜಮಾಲುದ್ದೀನ್ ವಿಟ್ಟಲ್,ಫಕ್ರುದ್ದೀನ್ ಹಾಜಿ , ಕೆಸಿಎಫ್ ಬಹರೈನ್ ರಾಷ್ಟ್ರೀಯ ,ಝೋನ್ , ಸೆಕ್ಟರ್ ಗಳ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದರು.ಕಾರ್ಯಕ್ರಮ ನಿರೂಪಣೆಯನ್ನು ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯ ನಿರ್ವಹಿಸಿ, ಬಹರೈನ್ ರಾಷ್ಟ್ರೀಯ ಸಮಿತಿ ಎಜುಕೇಶನ್ ವಿಭಾಗದ ಚೇರ್ಮ್ಯಾನ್ ಖಲಂದರ್ ಶರೀಫ್ ರವರು ಧನ್ಯವಾದ ಗೈದರು.

Leave a Reply

Your email address will not be published. Required fields are marked *

error: Content is protected !!