ರಷ್ಯಾದ ಕೋಳಿ-ಮೊಟ್ಟೆ-ಮಾಂಸ ಉತ್ಪನ್ನಗಳಿಗೆ ಯುಎಇ ಯಲ್ಲಿ ನಿಷೇಧ

ದುಬೈ: ರಷ್ಯಾದಿಂದ ಕೋಳಿ, ಮೊಟ್ಟೆ, ಮಾಂಸ ಅಮದು ಮಾಡುವುದಕ್ಕೆ ಯುಎಇಯ ಸಂಬಂದ ಪಟ್ಟ ಸಚಿವಾಲಯ ನಿಷೇದ ಹೇರಿದೆ. ರಷ್ಯಾದ ಮಧ್ಯ ಭಾಗದಲ್ಲಿ ವ್ಯಾಪಕವಾದ ಹಕ್ಕಿ ಜ್ವರದ ಕಾರಣದಿಂದಾಗಿ ಈ ನಿಷೇಧ ಹೇರಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ವಿಶ್ವಸಂಸ್ಥೆಯ ವರ್ಲ್ಡ್‌ ಆರ್ಗನೈಸೇಶನ್ ಫಾರ್ ಅನಿಮಲ್ ಹೆಲ್ತ್ ಸಂಘಟನೆಯ ಎಚ್ಚರಿಕೆಯನ್ನು ಮನಗಂಡು ಸಚಿವಾಲಯ ಈ ನಿಲುವನ್ನು ಸ್ವೀಕರಿಸಿದೆ. ಸುಮಾರು 600,000 ಹಕ್ಕಿಗಳು ಹಕ್ಕಿ ಜ್ವರದಿಂದ ಸತ್ತಿದೆ ಎಂದು ಸಂಘಟನೆ ವರದಿ ಮಾಡಿದೆ.

ಕಾಡು ಪ್ರಾಣಿ ವರ್ಗಕ್ಕೆ ಸೇರಿದ ಹಕ್ಕಿಗಳು, ಅಲಂಕಾರಿಕ ಹಕ್ಕಿಗಳು, ಕೋಳಿ, ಮೊಟ್ಟೆ, ಇತರ ಮಾಂಸಗಳು ಮುಂತಾದವುಗಳ ಅಮದು ಮಾಡುವುದನ್ನು ನಿಷೇಧಿಸಲಾಗಿದೆ. ರಿಪಬ್ಲಿಕ ಕಲ್ಮಿಕಿಯಾ, ಅಸ್ಟ್ರಖಾನ್ಸ್ ಕಾಯ  ಮುಂತಾದೆಡೆಗಳ ಅಮದನ್ನು ನಿಷೇಧಿಸಲಾಗಿದೆ.

ದೇಶಕ್ಕೆ ತಲುಪಿದ ಉತ್ಪನ್ನಗಳ ಸಾಕ್ಷ್ಯ ಪತ್ರಗಳ ಅಧಾರದಲ್ಲಿ ನಡೆಸುವ ತಪಾಸಣೆಯ ಬಳಿಕ ಮಾರ್ಕೆಟಿಂಗ್ ಗೆ ಅನುಮತಿ ನೀಡಲಾಗುತ್ತದೆ. ಉತ್ಪನ್ನಗಳ ಮೌಲ್ಯ, ಗುಣಮಟ್ಟವನ್ನು ಖಾತರಿಪಡಿಸಿದ ನಂತರ ಅದು ದೇಶದ ಮಾನದಂಡ ಗಳಿಗೆ ಒಪ್ಪುವಂತದ್ದಾಗಿದ್ದರೆ ಮಾತ್ರ ಅಮದಿಗೆ ಅನುಮತಿ ನೀಡಲಾಗುತ್ತದೆ ಎಂದು ಅಧಿಕೃತರು ತಿಳಿಸಿದ್ದಾರೆ.

ಇವುಗಳನ್ನೂ ಓದಿ

Leave a Reply

Your email address will not be published. Required fields are marked *

error: Content is protected !!