“ವ್ಯಾಟ್” ಗ್ರಾಹಕರಿಗೆ ಚಿಲ್ಲರೆ ನೀಡದ ವ್ಯಾಪಾರಿಗಳ ವಿರುದ್ಧ ಕ್ರಮ: ಸೌದಿ ಸಚಿವಾಲಯ ಎಚ್ಚರಿಕೆ

ರಿಯಾದ್: ಅಂಗಡಿಗಳಲ್ಲಿ ಗ್ರಾಹಕರಿಗೆ ನೀಡಲು ಚಿಲ್ಲರೆ ಅಭಾವ ಕಂಡು ಬಂದರೆ ಅಂತಹ ಅಂಗಡಿಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕೃತರು ಎಚ್ಚರಿಕೆ ನೀಡಿದ್ದಾರೆ. ವ್ಯಾಟ್ ಜಾರಿಗೆ ಬಂದಿರುವ ಕಾರಣದಿಂದ ಚಿಲ್ಲರೆ ನೀಡುವುದು ಅನಿವಾರ್ಯವಾಗಿರುವ ಕಾರಣ ಈ ಕ್ರಮ ಎನ್ನಲಾಗಿದೆ.

ಮೌಲ್ಯ ವರ್ಧಿತ ತೆರಿಗೆ ಜಾರಿಗೆ ಬಂದಿರುವ ಕಾರಣ ವ್ಯಾಪಾರ ವಲಯದವರು ಚಿಲ್ಲರೆ ತಮ್ಮ ಬಳಿ ಇದೆ ಎನ್ನುವುದನ್ನು ಖಾತರಿ ಪಡಿಸುವಂತೆ ಸಂಬಂದಪಟ್ಟ ಸಚಿವಾಲಯ ನಿರ್ದೇಶಿಸಿದೆ. ಉತ್ಪನ್ನಗಳಿಗೆ 5 ಶೇಕಡಾ ತೆರಿಗೆ ವಿಧಿಸಿರುವ ಕಾರಣ ಗ್ರಾಹಕರಿಗೆ ಬಾಕಿ ಉಳಿದಿರುವ ಚಿಲ್ಲರೆ ನೀಡಬೇಕು. ಅದಕ್ಕಾಗಿ ಸಣ್ಣ ನಾಣ್ಯಗಳು ಅಂಗಡಿಗಳಲ್ಲಿ ಆವಶ್ಯಕ ವಾಗಿದೆ. ಚಿಲ್ಲರೆಯ ಇರುವಿಕೆಯನ್ನು ಖಾತರಿಪಡಿಸಲು ತಪಾಸಣೆ ನಡೆಸಲಾಗುವುದು ಎಂದು ಸಚಿವಾಲಯ ತಿಳಿಸಿದೆ. ಚಿಲ್ಲರೆ ಇಲ್ಲದ ವ್ಯಾಪಾರಿಗಳಿಗೆ ಪ್ರಥಮ ಹಂತವಾಗಿ 100 ರಿಯಾಲ್ ದಂಡ ವಿಧಿಸಲಾಗುವುದು. ಎರಡನೇ ಬಾರಿಗೆ, ಮುಟ್ಟುಗೋಲು ಮುಂತಾದ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವಾಲಯ ಎಚ್ಚರಿಕೆಯನ್ನು ನೀಡಿದೆ. ಸಣ್ಣ ವ್ಯಾಪಾರಕ್ಕೆ 5 ಶೇಕಡಾ ತೆರಿಗೆ ಪಡೆಯುವುದು ಕಷ್ಟ ಎನ್ನುವುದು ಹಲವರ ದೂರಾಗಿತ್ತು. ಚಿಲ್ಲರೆ ಇಲ್ಲದ ಕಾರಣ ಬೆಲೆ ಏರಿಸಿ, ಇಲ್ಲವೇ ಇಳಿಸಿ ವ್ಯಾಪರವನ್ನು ನಡೆಸಲಾಗಿತ್ತು. ಎಲ್ಲಾ ವ್ಯಾಪಾರ ಕೇಂದ್ರಗಳಲ್ಲೂ ಅವಶ್ಯ ಚಿಲ್ಲರೆ ಇದ್ದಲ್ಲಿ ಈ ಅಭಾವವನ್ನು ಒಂದು ಹಂತದ ವರೆಗೆ ನಿಭಾಯಿಸಲು ಸಾಧ್ಯ ಎಂದು ನಿರೀಕ್ಷಿಸಲಾಗಿದೆ.

ಇವುಗಳನ್ನೂ ಓದಿ

Leave a Reply

Your email address will not be published. Required fields are marked *

error: Content is protected !!