janadhvani

Kannada Online News Paper

ಸಾಜ ಹಸಂತಡ್ಕ ರಸ್ತೆ ದುರವಸ್ಥೆಗೆ ಪರಿಹಾರವಿಲ್ಲವೇ?

ಪುತ್ತೂರು: ಬುಳೇರಿಕಟ್ಟೆಯಿಂದ ಸಾಜ ಮಾರ್ಗವಾಗಿ ತೋರಣಕಟ್ಟೆ ಮೂಲಕ ಕಾಸರಗೋಡು ತಲುಪುವ ಈ ಮಾರ್ಗವು ಸಾಜ ಕ್ರಾಸ್ ರಸ್ತೆ ಆರಂಭದಲ್ಲಿ 1ಕಿ.ಮೀ ಮತ್ತು ಹಸಂತಡ್ಕ ಸೇತುವೆಯ ಮುಂದೆ ಸಂಪೂರ್ಣ ಹದಗಟ್ಟಿದ್ದು ಸುಮಾರು 20 ವರ್ಷಗಳಿಂದ ದುರಸ್ಥಿ ಕಾಣದೆ ಪ್ರಯಾಣಿಕರು ಪರದಾಡುವಂತಾಗಿದೆ.
ಕಳೆದ ವರ್ಷ ಈ ರಸ್ತೆಯ ಮಧ್ಯ ಭಾಗದಲ್ಲಿ ಹಿಂದಿನ ಶಾಸಕಿಯಾಗಿದ್ದ ಶಕುಂತಲಾ ಶೆಟ್ಟಿಯವರು ಸುಮಾರು 2ಕೋಟಿ ವೆಚ್ಚದಲ್ಲಿ ಡಾಮರೀಕರಣ ಮಾಡಿಸಿದ್ದು ಇದಕ್ಕಾಗಿ ನಾವು ಅವರನ್ನು ಅಭಿನಂದಿಸುತ್ತೇವೆ. ಆದರೆ ಇನ್ನುಳಿದ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ಸಂಸದರು, ಜಿ.ಪಂ., ತಾ.ಪಂ, ಹಾಗೂ ಗ್ರಾ.ಪಂ. ನಾಯಕರು ಇದರ ಬಗ್ಗೆ ಗಮನ ಹರಿಸದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.


ಕಳೆದ 9 ವರ್ಷಗಳಿಂದ ಸಂಸದರಾಗಿರುವ ನಳಿನ್ ಕುಮಾರ್ ಕಟೀಲ್’ರವರು ಜನರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸದೆ ಕೇವಲ ಎಲೆಕ್ಷನ್ ಸಮಯದಲ್ಲಿ ಮಾತ್ರ ಈ ಕಡೆ ಬರುತ್ತಿದ್ದು , ಓಟ್ ಕೇಳುವುದು ಮಾತ್ರ ಸಂಸದರ ಕೆಲಸವೇ ಎಂದು ಗ್ರಾಮಸ್ಥರು ಕೇಳುವಂತಾಗಿದೆ.

ಸಾರ್ಯದಿಂದ ಪ್ರಾಥಮಿಕ ವಿಧ್ಯಾಭ್ಯಾಸ ಕಳೆದು ಹೈಸ್ಕೂಲು ವಿಧ್ಯಾಭ್ಯಾಸಕ್ಕಾಗಿ ಬಸ್ಸಿನ ಸೌಕರ್ಯವಿಲ್ಲದೆ 5ಕಿ.ಮೀ ನಡೆಯಬೇಕಾದ ಪರಿಸ್ಥಿತಿ ಇಲ್ಲಿನ ವಿಧ್ಯಾರ್ಥಿಗಳದ್ದು. ರಸ್ತೆಯ ದುರವಸ್ಥೆಯಿಂದಾಗಿ ವಾಹನ ಚಾಲಕರು ಈ ರಸ್ತೆಯ ಮೂಲಕ ಬರಲು ಹಿಂಜರಿಯುತ್ತಿದ್ದಾರೆ. ಇದರಿಂದಾಗಿ ಬಡವರ್ಗದವರು ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸಬೇಕಾದ ಪರಿಸ್ಥಿತಿ ಒದಗಿ ಬಂದಿದೆ. ಅತ್ಯಾವಶ್ಯಕವಾಗಿ ಆಸ್ಪತ್ರೆಗೆ ಹೋಗಬೇಕಾದ ರೋಗಿಗಳು ಬಹಳಷ್ಟು ತೊಂದರೆಗಳನ್ನು ಅನುಭವಿಸುವಂತಾಗಿದೆ. .
ಜನಪ್ರತಿನಿಧಿಗಳು, ಅಧಿಕಾರಿಗಳು ಇನ್ನಾದರು ಈ ಪ್ರದೇಶಕ್ಕೆ ಭೇಟಿಕೊಟ್ಟು ತಕ್ಷಣವೇ ಇಲ್ಲಿನ ರಸ್ತೆಯನ್ನು ದುರಸ್ಥಿಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ಆಗುಹೋಗುಗಳಿಗೆ ಅಧಿಕಾರಿಗಳೇ ನೇರಹೊಣೆಯಾಗಿದ್ದಾರೆ.

error: Content is protected !! Not allowed copy content from janadhvani.com