“ಮರ್ಕಝ್ ರೂಬಿ ಜುಬಿಲಿ” ಸುಳ್ಳು ಸುದ್ದಿಯೊಂದಿಗೆ ಮೌದೂದಿ ಚಾನೆಲ್; ಸಮ್ಮೇಳನವನ್ನು ಬಹಿಷ್ಕರಿಸಲು ಯುಡಿಎಫ್ ನಿರ್ಧರಿಸಿಲ್ಲ: ರಮೇಶ್ ಚೆನ್ನಿತ್ತಲ

ತಿರುವನಂತಪುರ: ಮರ್ಕಝ್ ರೂಬಿ ಜುಬಿಲಿ ಸಮ್ಮೇಳನವನ್ನು ಬಹಿಷ್ಕರಿಸಲು ಯುಡಿಎಫ್ ನಿರ್ಧರಿಸಿಲ್ಲ ಎಂದು ಪ್ರತಿಪಕ್ಷದ ನಾಯಕ ರಮೇಶ್ ಚೆನ್ನಿತ್ತಲ ಹೇಳಿದ್ದಾರೆ. ಯು.ಡಿ.ಎಫ್ ಅಂತಹ ಯಾವುದೇ ನಿರ್ಣಯವನ್ನು ಕೈಗೊಂಡಿಲ್ಲ ಎಂದು ಅವರು ಸಿರಾಜ್ ದೈನಿಕ ಕ್ಕೆ ತಿಳಿಸಿದರು.

ನಾನು ಸಮ್ಮೇಳನಕ್ಕೆ ಆಹ್ವಾನಿಸಿದಾಗ, ನನ್ನ ಅನಾನುಕೂಲತೆಯನ್ನು ಆಗಲೇ ತಿಳಿಸಿರುತ್ತೇನೆ, ಬೆಂಗಳೂರು ಮತ್ತು ಮುಂಬೈ ಯಲ್ಲಿ ನಡೆಯುವ ರಾಹುಲ್ ಗಾಂಧಿಯವರ ಕಾರ್ಯಕ್ರಮಕ್ಕೆ ಪಾಲ್ಗೊಳ್ಳುವ ಅವಶ್ಯಕತೆ ಇದೆ ಎಂದು ಮೊದಲೇ ತಿಳಿಸಿದ್ದೇನೆ.

ಸಮ್ಮೇಳನವನ್ನು ಬಹಿಷ್ಕರಿಸಲು ಯುಡಿಎಫ್  ನಿರ್ಧರಿಸಲಿಲ್ಲ,ಮಾತ್ರವಲ್ಲ  ಎಂ.ಕೆ.ರಾಘವನ್ ಸೇರಿದಂತೆ ಇತರ ಯುಡಿಎಫ್ ಮುಖಂಡರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಚೆನ್ನಿತ್ತಲ ತಿಳಿಸಿದ್ದಾರೆ.

“ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸದ ಕಾಂತಪುರಂ ಅಬೂಬಕರ್ ಮುಸ್ಲಿಯಾರ್ ನ್ನು ಬೆಂಬಲಿಸುವುದರಿಂದ ನಮ್ಮ ರಾಜಕೀಯ ಪಕ್ಷಕ್ಕೆ ಯಾವುದೇ ಪ್ರಯೋಜನವಿಲ್ಲವೆಂದೂ,ಆದ್ದರಿಂದ ಮರ್ಕಝ್ ಸಮ್ಮೇಳನವನ್ನು ಬಹಿಷ್ಕರಿಸಲು ಯುಡಿಎಫ್ ನಿರ್ಧರಿಸಿದೆ” ಎಂದು ಕೇರಳದ ಮೌದೂದಿ ಚಾನೆಲ್ ಮೀಡಿಯಾ ವನ್ ಪ್ರಕಟಿಸಿದ ಸುಳ್ಳು ವಾರ್ತೆಯನ್ನು ರಮೇಶ್ ಚೆನ್ನಿತ್ತಲ ತಳ್ಳಿ ಹಾಕಿದ್ದಾರೆ.

Leave a Reply

Your email address will not be published. Required fields are marked *

error: Content is protected !!