ಉತ್ತರ ಪ್ರದೇಶ ಮದ್ರಸಗಳಲ್ಲಿ ಮುಸ್ಲಿಮರ ಹಬ್ಬಗಳ ರಜೆ ಕಡಿತ, ಅನ್ಯ ಧರ್ಮೀಯ ಹಬ್ಬಗಳಿಗೆ ರಜೆ

ನವದೆಹಲಿ:ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದ ಉತ್ತರ ಪ್ರದೇಶ ಸರ್ಕಾರ 2018ರ ಮದರಸಾ ರಜೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಈ ಮೊದಲಿದ್ದ ಮುಸ್ಲಿಮರ ಹಬ್ಬಗಳ ರಜೆ  ಸಂಖ್ಯೆಯನ್ನು ಕಡಿತಗೊಳಿಸಿದೆ.

ರಜೆಗಳ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿದ ಉತ್ತರ ಪ್ರದೇಶದ ಮದರಸಾ ಸಮಿತಿಯ ರೆಜಿಸ್ಟ್ರಾರ್ ರಾಹುಲ್ ಗುಪ್ತಾ ಅವರು,  ‘ಅನ್ಯ ಧರ್ಮೀಯ ಹಬ್ಬಗಳಾದ ದೀಪಾವಳಿ, ಕ್ರಿಸ್‌ಮಸ್, ದಸರಾ, ಮಹಾವೀರ ಜಯಂತಿ, ಬುದ್ಧ ಪೂರ್ಣಿಮಾ ರಕ್ಷಾ ಬಂಧನ ಹಬ್ಬಗಳಿಗೆ ಹೆಚ್ಚುವರಿ ರಜೆಯನ್ನು ನೀಡಲಾಗಿದೆ’ ಎಂದಿದ್ದಾರೆ.

ಅಲ್ಲದೇ ಈ ಮೊದಲು ರಂಜಾನ್ ಹಬ್ಬಕ್ಕೆ  46 ದಿನಗಳ ಕಾಲ ರಜೆಗಳನ್ನು ನೀಡಲಾಗುತ್ತಿತ್ತು. ಇದೀಗ 42ಕ್ಕೆ ಕಡಿತಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಹೊಸ ಕ್ಯಾಲೆಂಡರ್ ಪ್ರಕಾರ, ಈ ಮೊದಲು ರಂಜಾನ್ ಆರಂಭವಾಗುವ ಎರಡು ದಿನ ಮುಂಚಿತವಾಗಿ ರಜೆಯನ್ನು ಕೊಡಲಾಗುತ್ತಿತ್ತು. ಇದರಿಂದ ಊರಿಗೆ ಹೋಗುವ ಗುರುಗಳು ಹಾಗೂ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ತಮ್ಮ ಊರುಗಳನ್ನು ತಲುಪುದು ಕಷ್ಟವಾಗುತ್ತಿತ್ತು. ಹಾಗಾಗಿ ಈ ಬಾರಿಯಿಂದ 10 ದಿನಗಳ ಮೊದಲೇ ರಜೆಯನ್ನು ನೀಡಲಾಗುತ್ತಿದೆ ಎಂದಿದ್ದಾರೆ.

ರಾಜ್ಯ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಚೌಧರಿ ಲಕ್ಷ್ಮೀ ನಾರಾಯಣ್ , ‘ಈ ಹೊಸ ಕ್ಯಾಲೆಂಡರ್‌ನ ನಿಯಮ ಎಲ್ಲಾ ಸಮಿತಿ, ವಿಶ್ವವಿದ್ಯಾನಿಲಯ, ಮದರಸಾಗಳಿಗೆ ಅನ್ವಯವಾಗಲಿದೆ. ಇದು ವಿದ್ಯಾರ್ಥಿಗಳ ಅಭಿಪ್ರಾಯ ಅನುಸಾರ ಮಾಡಲಾಗಿರುವ ಕ್ಯಾಲೆಂಡರ್’ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!