janadhvani

Kannada Online News Paper

ಮುಸ್ಲಿಂ ಜಮಾಅತ್. ಮಂಗಳೂರು ಝೋನ್ ಸದಸ್ಯತ್ವ ಫೋರಂ ವಿತರಣೆ ಜನವರಿ 1 ರಿಂದ ಸದಸ್ಯತನ ಪ್ರಾರಂಭ

ಮಂಗಳೂರು : ಕರ್ನಾಟಕ ಮುಸ್ಲಿಂ ಜಮಾಅತ್ ಮಂಗಳೂರು ಝೋನ್ ವ್ಯಾಪ್ತಿಯಲ್ಲಿ ಸದಸ್ಯತನ ಅಭಿಯಾನ‌ ಮಾಹಿತಿ ಕಾರ್ಯಾಗಾರ ಸುನ್ನಿ ಸೆಂಟರ್ ಕಣ್ಣೂರಲ್ಲಿ ನಡೆಯಿತು.


ಇಸ್ಹಾಕ್ ತಂಙಲ್ ಕಣ್ಣೂರು‌ ದುಆದೊಂದಿಗೆ ಪ್ರಾರಂಭವಾದ ಸಭೆಯನ್ನು ಝೋನ್ ಅಧ್ಯಕ್ಷ ವಿಎ ಮುಹಮ್ಮದ್ ಸಖಾಫಿ ವಳವೂರು ಅಧ್ಯಕ್ಷ ತೆ ವಹಿಸಿ ಉದ್ಘಾಟಿಸಿದರು. ಸದಸ್ಯತನ ಮಾಹಿತಿಯನ್ನು ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ನಾಯಕರು ಈಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ ಎಂ ಮುಹಮ್ಮದ್ ಕಾಮಿಲ್ ಸಖಾಫಿ ಯವರು ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಅಶ್ರಫ್ ಕಿನಾರ ಮಂಗಳೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಹೀಮ್ ಸ ಅದಿ ಕತ್ತರ್,ಝೋನ್ ಪ್ರಧಾನ ಕಾರ್ಯದರ್ಶಿ ಸಲೀಂ ಅಡ್ಯಾರ್ ಪದವು, ಝೋನ್ , ಸರ್ಕಲ್,ಯುನಿಟ್ ಹಲವು ನಾಯಕರು ಭಾಗವಹಿಸಿದ್ದರು.
ಝೋನ್ ವ್ಯಾಪ್ತಿಯ 4 ಸರ್ಕಲ್ ಗಳಿಗೆ ಫಾರಂ ವಿತರಿಸಲಾಯಿತು.