janadhvani

Kannada Online News Paper

ಅಬುಧಾಬಿ ನಗರಸಭೆಯಿಂದ ವ್ಯಾಪಕ ತಪಾಸಣೆ: ಉಪಯೋಗ ಶೂನ್ಯ ವಸ್ತುಗಳ ನಾಶ

ಅಬುಧಾಬಿ: ಅಬುಧಾಬಿ ನಗರಸಭೆಯು ನಗರಾದ್ಯಂತ ನಡೆಸಿದ ಭದ್ರತಾ ಪರಿಶೋಧನೆಯಲ್ಲಿ ಉಪಯೋಗ ಶೂನ್ಯ ವಾದ ಆಹಾರ ವಸ್ತುಗಳನ್ನು ಜಪ್ತಿಮಾಡಿ ನಾಶಪಡಿಸಿದ್ದಾರೆ. ಪರಿಶೋಧನಾ ಆಂದೋಲನವನ್ನು ವಿವಿಧ ಭಾಗಗಳಲ್ಲಿ ನಡೆಸಲಾಯಿತು.

ಅಬುಧಾಬಿಯ ನಗರಸಭೆಯು ಜನರ ಸುರಕ್ಷೆ ಮತ್ತು ಸಮಾಜದ ಭದ್ರತೆಯ ಭಾಗವಾಗಿ ಸತತವಾಗಿ ಈ ಕಾರ್ಯಾಚರಣೆ ನಡೆಸಿದೆ. ವಶಪಡಿಸಿಕೊಂಡ ಎರಡು ಟನ್ಗಳಷ್ಟು ಬಳಕೆಯಾಗದ ಆಹಾರ ಪದಾರ್ಥಗಳನ್ನು ನಾಶಪಡಿಸಿರುವುದಾಗಿ ಪುರಸಭೆ ತಿಳಿಸಿದೆ.

ಸಾರ್ವಜನಿಕ ಆರೋಗ್ಯದ ಭಾಗವಾಗಿ ಅಬುಧಾಬಿ ಮುನಿಸಿಪಾಲಿಟಿ (ಎಡಿಎಂ) ಅಬುಧಾಬಿ ವೇಸ್ಟ್ ಮ್ಯಾನೇಜ್ಮೆಂಟ್ ಸೆಂಟರ್‌ನ ಸಹಯೋಗದೊಂದಿಗೆ ಈ ಕಾರ್ಯಾಚರಣೆ ನಡೆಸಿದೆ.ಕಾಲಾವಧಿ ಮುಗಿದ ಕಾಸ್ಮೆಟಿಕ್ ಉತ್ಪನ್ನಗಳು ಮತ್ತು ವೈಯಕ್ತಿಕ ಆರೈಕೆ ಉತ್ಪನ್ನಗಳನ್ನು ಅದು ವಶಪಡಿಸಿಕೊಂಡಿದೆ ಎಂದು ಮುನಿಸಿಪಾಲಿಟಿ ಹೇಳಿದೆ.

ಮುನಿಸಿಪಾಲಿಟಿಗೆ ತಿಳಿಯದಂತೆ ಸಾರ್ವಜನಿಕ ಆರೋಗ್ಯ ಅನುಮೋದನೆ ಲಭಿಸದ ವಸ್ತುಗಳನ್ನು ಅಬುಧಾಬಿ ನಗರದಲ್ಲಿ ಕಾರ್ಯಾಚರಿಸುವ ಸಲೂನ್ ಗಳು ಬಳಸುವುದಾಗಿ ಅಬುಧಾಬಿ ಸಿಟಿ ಮುನಿಸಿಪಾಲಿಟಿಯ ಹೆಲ್ತ್ ಡಿವಿಜನಿನ ಇನ್ಸ್‌ಪೆಕ್ಟರ್ ಗಳು ಸ್ಪಷ್ಟಪಡಿಸಿದ್ದಾರೆ.

ಇಲಾಖೆಯ ಅನುಮತಿ ಇಲ್ಲದೆ ಅನಧಿಕೃತ ವಸ್ತುಗಳ ಬಳಕೆ ಕಂಡುಬಂದಲ್ಲಿ ಬೃಹತ್ ಮೊತ್ತ ದಂಡ ಪಾವತಿಸಬೇಕಾದೀತು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.ಅಭಿಯಾನದ ಭಾಗವಾಗಿ ಅವಧಿ ಮುಗಿದ, ಅಥವಾ ಹಿಂದಿನ ಮತ್ತು ವ್ಯವಸ್ಥೆಯನ್ನು ಉಲ್ಲಂಘಿಸಿರುವ 7681 ಉತ್ಪನ್ನಗಳನ್ನು ವಶಪಡಿಸಿರುವುದಾಗಿ ನಗರಸಭೆಯ ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !! Not allowed copy content from janadhvani.com