ಸೌದಿ ಅರೇಬಿಯಾ:ಅತಿ ವೇಗದ ಚಲಾವಣೆ ದಂಡಕ್ಕೆ ಆಹ್ವಾನವಾದೀತು ಜೋಕೆ!

ರಿಯಾದ್: ಸೌದಿಯಲ್ಲಿ ವಾಹನ ಚಲಾಯಿಸುವಾದ ವೇಗದ ಮಿತಿಯನ್ನು ಪಾಲಿಸದಿದ್ದಲ್ಲಿ 100 ರಿಂದ 150 ರಿಯಾಲ್ ವರೆಗೆ ದಂಡ ವಿಧಿಸಲಾಗುವುದು ಎಂದು ಟ್ರಾಫಿಕ್ ಡೈರೆಕ್ಟರೇಟ್ ತಿಳಿಸಿದೆ. ಇಂತಹ ಕಾನೂನು ಉಲ್ಲಂಘನೆಗಳನ್ನು ಸೂಕ್ಷ್ಮವಾಗಿ ನಿರೀಕ್ಷಿಸಲು ನವೀನ ಮಾದರಿಯ ಯಂತ್ರಗಳನ್ನು ಟ್ರಾಫಿಕ್ ವಿಭಾಗದ ವಾಹನಗಳಿಗೆ ಅಳವಡಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಿಗ್ನಲ್ ತಪ್ಪಿಸುವುದು, ಮಿತಿ ಮೀರಿದ ವೇಗಗಳನ್ನು ಸಲೀಸಾಗಿ ಕಂಡು ಹಿಡಿಯಬಲ್ಲ ಕ್ಯಾಮೆರಾಗಳು ಅಳವಡಿಸಲಾಗಿದೆ. ಅದೇ ರೀತಿ ಉಲ್ಲಂಘನೆ ಗಳನ್ನು ಪತ್ತೆ ಹಚ್ಚುವ ಸಲುವಾಗಿ ನಗರಗಳಲ್ಲೂ ಕ್ಯಾಮರಾಗಳನ್ನು ಸ್ಥಾಪಿಸಲಾಗಿದೆ. ಇನ್ನು ಮುಂದೆ ಡ್ರೈವಿಂಗ್ ಲೈಸೆನ್ಸ್ ಲಭಿಸಲು ಹಲವು ಹೊಸ ಕಾನೂನುಗಳನ್ನು ನಿರೀಕ್ಷಿಸಬಹುದು.
ಚಾಲ್ತಿಯಲ್ಲಿರುವ ಎಲ್ಲಾ ಟ್ರಾಫಿಕ್ ಉಲ್ಲಂಘನೆ ಸಹಿತ ದಂಡ, ಶಿಕ್ಷೆ ಎಲ್ಲವನ್ನೂ ಪರಿಷ್ಕರಿಸಲಾಗುವುದು ಎಂದು ಟ್ರಾಫಿಕ್ ವಿಭಾಗವು ಈ ಹಿಂದೆ ವ್ಯಕ್ತ ಪಡಿಸಿತ್ತು. ಅಲ್ಲದೆ, ದೇಶದ ಹಲವು ರಸ್ತೆಗಳ ವೇಗ ಮಿತಿಯನ್ನು ಪರಿಸ್ಕರಿಸಲಾಗುವುದು ಎಂದು ಕೂಡ ತಿಳಿಸಲಾಗಿತ್ತು.

Leave a Reply

Your email address will not be published. Required fields are marked *

error: Content is protected !!