ಖತ್ತರಿನಲ್ಲಿ ಹೆಚ್ಚುತ್ತಿದೆ ಮರೆವು ರೋಗ:2030 ರ ಒಳಗೆ ಮಧ್ಯ ಏಷ್ಯಾ ದಲ್ಲಿ 44 ದಶಲಕ್ಷ ಮರೆವು ರೋಗಿಗಳು!

ದೋಹ: ಮರೆವು ರೋಗ ವ್ಯಾಪಕವಾಗಿಗುತ್ತಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ವಿವರಗಳನ್ನು ಶೇಖರಿಸಲು ಪ್ರಾರಂಭಿಸಲಾಗಿದೆ. ರೋಗವನ್ನು ಮುಂಗಡವಾಗಿ ಪತ್ತೆ ಹಚ್ಚಲು ಸಹರಿಸುವ ಉದ್ದೇಶದಿಂದ ಆರೋಗ್ಯ ಇಲಾಖೆಯು ಈ ಶೇಖರಣೆಗೆ ಇಳಿದಿದೆ. ಜರಿಯಾಟ್ರಿಕ್ಸ್ ಆಂಡ್ ಲಾಂಗ್ ಟೈಮ್ ಕೇರ್ ಇಲಾಖೆ, ಪ್ರೈಮರಿ ಹೆಲ್ತ್ ಕೇರ್ ಕಾರ್ಪೋರೇಷನ್ ಮುಂತಾದವುಗಳ ಸಹಕಾರದೊಂದಿಗೆ ಈ ಸರ್ವೇ ಸಡಸಲಾಗುತ್ತಿದೆ.ಗ್ಲೋಬಲ್ ಡಿಮನ್ಷ್ಯಾ ಅಬ್ಸರ್ವರ್ವೇಟರಿ ಗಾಗಿ ವಿಶ್ವ ಆರೋಗ್ಯ ಸಂಘಟನೆಯು ಖತ್ತರ್ ನ್ನು ಗೊತ್ತು ಪಡಿಸಿದೆ.

ಈಗ ನಡೆಯುತ್ತಿರುವ ಸರ್ವೇ ಪ್ರಕಾರ 65 ದಾಟಿತ ಎಲ್ಲರೂ ನೆನಪು ಪರೀಕ್ಷೆಗೆ ಒಳಗಾಗ ಬೇಕು. ಈ ಪರೀಕ್ಷೆಗಾಗಿ ದೇಶಾದ್ಯಂತ 6 ಕೇಂದ್ರಗಳನ್ನು ತೆರೆಯಲಾಗಿದೆ.ಪ್ರಾಯವಾದವರಲ್ಲಿ ಕಂಡು ಬರುವ ಒಂದು ರೀತಿಯ ರೋಗವಾಗಿದೆ ಮರೆಗುಳಿ ಅತವಾ ಡಿಮನ್ಷ್ಯಾ. ಅಲ್ಷಿಮೇರ್ಸ್ ಡಿಸೀಸ್ ಇಂಟರ್ನ್ಯಾಷನಲ್ ಮತ್ತು ವಿಶ್ವ ಆರೋಗ್ಯ ಸಂಘಟನೆಯ ವರದಿ ಪ್ರಕಾರ ವಿಶ್ವದಾದ್ಯಂತ 47 ದಶಲಕ್ಷ ಜನರು ಈ ರೋಗಕ್ಕೆ ತುತ್ತಾಗಿದ್ದಾರೆ.

2050 ಆಗುವಾಗ 130 ದಶಲಕ್ಷ ಜನರು ಈ ರೋಗಕ್ಕೆ ತುತ್ತಾಗಲಿದ್ದಾರೆ. ಖತ್ತರಿನಲ್ಲಿ ವೃದ್ಧರು ಹೆಚ್ಚಾಗುತ್ತಿದ್ದಾರೆ. ಆ ಕಾರಣಕ್ಕಾಗಿಯೇ ಅಲ್ಲಿ ಮರೆಗುಳಿ ರೋಗದ ಲಕ್ಷಣಗಳು ಕೂಡ ಜಾಸ್ತಿಯಾಗಿ ಕಂಡುಬರುತ್ತದೆ. ಮರೆವು ರೋಗಕ್ಕೆ ತುತ್ತಾಗಿ ಕೊನೆಯ ಗಳಿಗೆಯಲ್ಲಿ  ಹೆಚ್ಚಿನವರು ಸಹಾಯ ಮತ್ತು ಚಿಕಿತ್ಸೆಗೆ ಮುಂದಾಗುತ್ತಾರೆ.ಈ ಪರಿಪಾಠವನ್ನು ಬದಲಾಯಿಸಿ ಪ್ರಥಮ ಹಂತದಲ್ಲೇ ಚಿಕಿತ್ಸೆ ನೀಡುವ ಸಲುವಾಗಿ ಹಮದ್ ಮೆಡಿಕಲ್ ಕಾರ್ಪೊರೇಷನ್ ನ ಜೆರಿಯಾಟ್ರಿಕ್ ವಿಭಾಗವು ಮುಂದಾಗಿದೆ ಎಂದು ಜೆರಿಯಾಟ್ರಿಕ್ ಸೈಕ್ಯಾಟ್ರಿಸ್ಟ್ ಡಾ. ಮಣಿ ಚಂದ್ರನ್ ಹೇಳಿದರು.
ಪ್ರಥಮ ಹಂತದಲ್ಲಿ 1000 ಮಂದಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಉಮರ್ ಬಿನ್ ಖತ್ತಾಬ್, ರೌದತ್ ಅಲ್ ಖೈಲ್, ಲಬೈಬ್, ಉಂಸಲಾಲ್, ಅಬೂ ನಖ್ಲ, ಮಿಸೈಮೀರ್ ಹೆಲ್ತ್ ಸೆಂಟರ್ ಗಳಲ್ಲಿ ಉಚಿತ ನೆನಪಿನ ಶಕ್ತಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ರೋಗ ಕಂಡು ಬಂದವರನ್ನು ಉನ್ನತ ಪರೀಕ್ಷೆಗಾಗಿ ಎಚ್ ಎಂ ಸಿಯ ರುಮೈಲ ಆಸ್ಪತ್ರೆಯ ಮೆಮ್ಮರಿ ಕ್ಲಿನಿಕ್ ಗೆ ವರ್ಗಾಯಿಸಲಾಗುವುದು.

ವಿಶ್ವ ಆರೋಗ್ಯ ಸಂಘಟನೆಯ ವರದಿಯಂತೆ 2030ರಲ್ಲಿ ಮಧ್ಯ ಏಷ್ಯಾದ ಮರೆವು ರೋಗ ಪೀಡಿತರ ಸಂಖ್ಯೆಯು 44 ದಶಲಕ್ಷ ದಾಟಲಿದೆ. ಖತ್ತರ್ ಫೌಂಡೇಶನ್ ವಿಶ್ವ ಆರೋಗ್ಯ ಸಂಸತ್ತು (ವಿಷ್) ಹೊರಡಿಸಿದ ಇತ್ತೀಚಿನ ವರದಿಯಲ್ಲಿ ಈ ಬಗ್ಗೆ ವಿವರಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!