ಕಾಟಿಪಳ್ಳ: ಯುವಕನ ಕೊಚ್ಚಿ ಕೊಲೆ

ಸುರತ್ಕಲ್,ಜ.3: ಯುವಕನೊಬ್ಬನನ್ನು ಬರ್ಬರವಾಗಿ ಕೊಲೆಗೈದ ಘಟನೆ ಕಾಟಿಪಳ್ಳದಲ್ಲಿ ಇಂದು ಮಧ್ಯಾಹ್ನ 2:30ರ ವೇಳೆ ನಡೆದಿದೆ. ಕಾಟಿಪಳ್ಳ ಕೈಕಂಬ ನಿವಾಸಿ ದೀಪಕ್ ಯಾನೆ ದೀಪು ಹತ್ಯೆಗೀಡಾದ ವ್ಯಕ್ತಿ. ದೀಪಕ್ ಸಿಮ್ ಕಂಪೆನಿಯ ಡಿಸ್ಟ್ರಿಬ್ಯೂಟರ್ ಆಗಿದ್ದು ಇಂದು ಮಧ್ಯಾಹ್ನ ವೇಳೆಯೂ ಮೊಬೈಲ್ ಅಂಗಡಿಗಳಿಗೆ ತೆರಳಿದ್ದರು. ಇದೇ ಸಮಯ ಏಕಾಏಕಿ ಅಡ್ಡಗಟ್ಟಿ ದಾಳಿ ಮಾಡಿದ ದುಷ್ಕರ್ಮಿಗಳು ದೀಪಕ್ ಮೇಲೆ ಯದ್ವತದ್ವಾ ತಲವಾರು ಬೀಸಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆಂದು ತಿಳಿದು ಬಂದಿದೆ. ಕೊಲೆ ಯಾಕೆ ನಡೆಯಿತು, ಯಾರಿಂದ ನಡೆಯಿತು ಎಂಬ ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ. ಸುರತ್ಕಲ್ ಠಾಣಾ ಪೋಲಿಸ್ ಪ್ರಕರಣ ದಾಖಲಾಗಿದೆ. ಉನ್ನತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆಂದು ತಿಳಿದು ಬಂದಿದೆ.

ಇವುಗಳನ್ನೂ ಓದಿ

Leave a Reply

Your email address will not be published. Required fields are marked *

error: Content is protected !!