ತೆರಿಗೆ ಮುಕ್ತ ಕೊಲ್ಲಿ ರಾಷ್ಟ್ರಗಳಲ್ಲಿ ಮೊದಲ ಬಾರಿಗೆ ವ್ಯಾಟ್‌ ಜಾರಿ

ದುಬೈ: ತೆರಿಗೆ ಮುಕ್ತ ಕೊಲ್ಲಿ ರಾಷ್ಟ್ರಗಳಲ್ಲಿ ಮೊದಲ ಬಾರಿಗೆ ವ್ಯಾಟ್‌ ಜಾರಿಗೆ ಬರುತ್ತಿದೆ. ಸೌದಿ ಅರೇಬಿಯಾ ಮತ್ತು ಯುಎಇ ಯಲ್ಲಿ ಮೌಲ್ಯವರ್ಧಿತ ತೆರಿಗೆಯನ್ನು(ವ್ಯಾಟ್‌) ಸೋಮವಾರದಿಂದ ಜಾರಿಗೆ ತಂದಿದೆ.ಸೌದಿ ಅರೇಬಿಯಾವು ಪೆಟ್ರೋಲ್‌ ದರದಲ್ಲಿ ಶೇ127ರಷ್ಟು ಏರಿಕೆ ಮಾಡುವ ಮೂಲಕ ಗ್ರಾಹಕರಿಗೆ ಹೊಸ ವರ್ಷದಲ್ಲೆ ಹೊಡೆತ ನೀಡಿದೆ.

ಕಳೆದ ಎರಡು ವರ್ಷಗಳಿಂದ ಕೊಲ್ಲಿ ರಾಷ್ಟ್ರಗಳ ತೈಲ ಉತ್ಪಾದಕರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವರ ಆದಾಯ ಹೆಚ್ಚಿಸುವ ಸಲುವಾಗಿ  ದರ ಏರಿಕೆ ಮಾಡಿದೆ. ಬಹರೈನ್‌, ಕುವೈತ್‌,ಒಮಾನ್‌ ಮತ್ತು ಕತ್ತರ್‌ ಕೂಡ ವ್ಯಾಟ್‌ ಜಾರಿಗೆ ಚಿಂತನೆ ನಡೆಸಿದ್ದು, ಅದನ್ನು 2019ರ ವರೆಗೆ ಮುಂದೂಡಿದೆ.

ಯಾವುದೇ ಕೊಲ್ಲಿ ರಾಷ್ಟ್ರಗಳು ಇದುವರೆಗೂ ವೈಯಕ್ತಿಕ ಆದಾಯ ತೆರಿಗೆಯನ್ನು ವಿಧಿಸಿಲ್ಲ. ಈ ಕುರಿತು ಚಿಂತನೆ ಕೂಡ ನಡೆದಿಲ್ಲ ಎಂದು ಮೂಲಗಳು ತಿಳಿಸಿವೆ. ಸೌದಿ ಅರೇಬಿಯಾದಲ್ಲಿ ತೈಲದ ಮೇಲಿನ ಸುಂಕವನ್ನು ಎರಡು ವರ್ಷದಲ್ಲಿ ಎರಡನೇ ಬಾರಿ ಏರಿಕೆ ಮಾಡಿದ್ದರೂ ಜಗತ್ತಿನಲ್ಲೇ ಅತಿ ಕಡಿಮೆ ತೈಲ ಬೆಲೆ ಇಲ್ಲಿದೆ.

ಇವುಗಳನ್ನೂ ಓದಿ

Leave a Reply

Your email address will not be published. Required fields are marked *

error: Content is protected !!