janadhvani

Kannada Online News Paper

ದುಬೈ: ದಂಡ ಪಾವತಿಸದೆ ಉದ್ಯಮದ ಲೈಸೆನ್ಸ್ ನವೀಕರಿಸಲು ಸುವರ್ಣಾವಕಾಶ

ದುಬೈ: ಉದ್ಯಮದ ಲೈಸೆನ್ಸ್ ನವೀಕರಿಸದವರಿಗೆ ದುಬೈ ಆರ್ಥಿಕ ಇಲಾಖೆಯು ಕಂಪೆನಿಗಳಿಗೆ ವಿಧಿಸಿದ ದಂಡ ಪಾವತಿಯಲ್ಲಿ ವಿನಾಯಿತಿ ನೀಡಿದೆ.ಡಿಸೆಂಬರ್‌ಗೆ ಮುಂಚಿತವಾಗಿ ದಂಡ ಪಾವತಿಸದೆ ಲೈಸೆನ್ಸ್ ನವೀಕರಿಸಬಹುದು.

ಕಂಪನಿ ಲೈಸೆನ್ಸ್ ನವೀಕರಿಸದ ಕಾರಣ ಪರದಾಡುಡುವ ವ್ಯಾಪಾರಿಗಳಿಗೆ ದುಬೈ ಆಡಳಿತಗಾರ ಶೈಖ್ ಮುಹಮ್ಮದ್ ಬಿನ್ ರಾಷೀದ್ ಆಲ್ ಮಖ್ತೂಂ ಅವರ ಆದೇಶವು ತುಂಬಾ ಆಶಾದಾಯಕವಾಗಿದೆ.

ರಾಷ್ಟ್ರಪಿತ ಶೈಖ್ ಝಾಯಿದ್ ಆಲ್ ನಹ್ಯಾನ್ ಅವರ ವರ್ಷಾಚರಣೆಯ ಭಾಗವಾಗಿ ಈ ವಿನಾಯತಿಯನ್ನು ನೀಡಿದ್ದಾರೆ.

ಎಲ್ಲರೂ ಈ ಸೌಲಭ್ಯವನ್ನು ಬಳಸಬೇಕು ಮತ್ತು ಅತ್ಯಂತ ಸುಗಮವಾಗಿ ಕೈಗಾರಿಕೆಯನ್ನು ನಡೆಸುವ ಸ್ಥಳ ಎನ್ನುವ ಖ್ಯಾತಿಯನ್ನು ದೃಢಪಡಿಸುವ ಕ್ರಮವಾಗಿ ಇದು ಮಾರ್ಪಡಲಿದೆ ಎಂದು ದುಬೈ ಆರ್ಥಿಕ ನಿರ್ದೇಶಕ ಜನರಲ್ ಸಾಮಿ ಅಲ್ ಖಮ್ಸಿ ಸ್ಪಷ್ಟಪಡಿಸಿದ್ದಾರೆ.

ಆರ್ಥಿಕ ಉದ್ಯಮ ಬೆಳವಣಿಗೆಗೆ ಶಕ್ತಿಯುತವಾದ ತೀರ್ಮಾನ ಇದಾಗಿದೆ ಎಂದು  ಡಿಇಡಿ ಲೈಸೆನ್ಸಿಂಗ್ ವಿಭಾಗದ ಸಿ.ಇ.ಓ ಉಮರ್ ಬುಷಾ ಅವರು  ಪ್ರತಿಕ್ರಿಯಿಸಿದ್ದಾರೆ.

24 ತಿಂಗಳುಗಳಿಗಿಂತಲೂ ಪರವಾನಗಿಗಳ ಅವಧಿ ಮುಗಿದು, ನವೀಕರಿಸಲು, ಹಿಂಪಡೆಯಲು ಅರ್ಜಿ ಸಲ್ಲಿಸುವ ಸ್ಥಾಪನೆಗಳ ದಂಡ ರದ್ದುಪಡಿಸಲು ಅಬುಧಾಬಿ ಕೂಡ ನಿರ್ಧರಿಸಿದೆ.ಎಮಿರೇಟಿನಲ್ಲಿನ ಉದ್ಯಮದ ವಾತಾವರಣವು ಹೆಚ್ಚು ಪ್ರೋತ್ಸಾಹಕಕರವಾಗಲು ಇದು ಸಹಾಯ ಮಾಡಲಿದೆ ಎಂದು ಅಬುಧಾಬಿ ಡಿಇಡಿ ಆಕ್ಟಿಂಗ್ ಅಂಡರ್ ಕಾರ್ಯದರ್ಶಿ ಹೇಳಿದ್ದಾರೆ.

ಅಜ್ಮಾನ್, ಫುಜೈರಾ ಮುಂತಾದ ಎಮಿರೇಟ್ಸ್ ಈ ಹಿಂದೆಯೇ ಪರವಾನಗಿ ಶುಲ್ಕ ರಿಯಾಯಿತಿಯನ್ನು ಘೋಷಿಸಿದೆ.ಶೈಖ್ ಮುಹಮ್ಮದ್ ರ ಘೋಷಣೆಯು ಸುವರ್ಣಾವಸರವೆಂದು ದೇಶಾದ್ಯಂತ ಉದ್ಯಮಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

error: Content is protected !! Not allowed copy content from janadhvani.com