ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಪ್ರತಿಭೋತ್ಸವ -ಕೊಣಾಜೆ ಸೆಕ್ಟರ್ ಚಾಂಪಿಯನ್

ಉಳ್ಳಾಲ: ಎಸ್ಸೆಸ್ಸೆಫ್ ಉಳ್ಳಾಲ್ ಡಿವಿಷನ್ ವತಿಯಿಂದ ಡಿವಿಷನ್ ಮಟ್ಟದ ಪ್ರತಿಭೋತ್ಸವ ಉಳ್ಳಾಲ ಡಿವಿಷನ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ ಅಲ್-ಮದೀನಾ ವಿದ್ಯಾಸಂಸ್ಥೆಯಲ್ಲಿ ನಡೆಯಿತು.ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭವನ್ನು ಅಲ್- ಮದೀನಾ ಸಂಸ್ಥೆಯ ಜನರಲ್ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಉಸ್ತಾದರು ಉದ್ಘಾಟಿಸಿದರು.ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಎಂ ಅಬೂಬಕ್ಕರ್ ಸಿದ್ದೀಕ್ ಮೊಂಟುಗೋಳಿ ,ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಇಸ್ಮಾಯಿಲ್ ಮೊಂಟೆಪದವು ಶುಭ ಹಾರೈಸಿ ಮಾತನಾಡಿದರು.

ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಅಲ್ -ಮದೀನಾ ಸಂಸ್ಥೆಯ ಸಾರಥಿ ಶರಫುಲ್ ಉಲಮಾ ಶೈಖುನಾ ಅಬ್ಬಾಸ್ ಉಸ್ತಾದ್ ಅಧ್ಯಕ್ಷತೆಯನ್ನು ವಹಿಸಿದ್ದರು. ಎಸ್.ವೈ.ಎಸ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಎಂ ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಯು.ಕೆ ಕಣಚೂರು ಮೋನು ಹಾಜಿ ,ಉಪಾಧ್ಯಕ್ಷ ಬಾವು ನೆಕ್ಕರೆ ,ಸದಸ್ಯರಾದ ಸುಲೈಮಾನ್ ಹಾಜಿ ಸಾಮಾಣಿಗೆ, ಅಲ್ತಾಫ್ ಕುಂಪಲ ರವರನ್ನು ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ವತಿಯಿಂದ ಸನ್ಮಾನಿಸಲಾಯಿತು.ಕರ್ನಾಟಕ ರಾಜ್ಯ ಸರ್ಕಾರದ ಸಚಿವರಾದ ಯು. ಟಿ ಖಾದರ್ ಬಹುಮಾನ ವಿತರಿಸಿ,ಹಾರೈಸಿದರು.ಡಿವಿಷನ್ ವ್ಯಾಪ್ತಿಯ ಹನ್ನೊಂದು ಸೆಕ್ಟರ್ ಗಳ ಮಧ್ಯೆ ನಡೆದ ಸುಮಾರು ತೊಂಬತ್ತಾರು ಸ್ಪರ್ಧೆಗಳಲ್ಲಿ ಎಸ್ಸೆಸ್ಸೆಫ್ ಕೊಣಾಜೆ ಸೆಕ್ಟರ್ ಚಾಂಪಿಯನ್ ಆಗಿಯೂ,ಎಸ್ಸೆಸ್ಸೆಫ್ ದೇರಳಕಟ್ಟೆ ಸೆಕ್ಟರ್ ದ್ವಿತೀಯ ಸ್ಥಾನವನ್ನೂ, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ತೃತೀಯ ಸ್ಥಾನವನ್ನೂ ತಮ್ಮದಾಗಿಸಿತು.ಕ್ಯಾಂಪಸ್ ವಿಭಾಗದಲ್ಲಿ ವಿಶ್ವ ಮಂಗಳ ಕಾಲೇಜು ಕೋಣಾಜೆ ಪ್ರಥಮ ಸ್ಥಾನವನ್ನು,ಪಿ.ಎ.ಇಂಜಿನಿಯರಿಂಗ್ ಕಾಲೇಜು ದ್ವಿತೀಯ ಸ್ಥಾನವನ್ನು,ಸರಕಾರಿ ಪದವಿ ಪೂರ್ವ ಕಾಲೇಜು ಮೊಂಟೆಪದವು ತೃತೀಯ ಸ್ಥಾನವನ್ನು ಪಡೆಯಿತು.

ವೇದಿಕೆಯಲ್ಲಿ ಎಸ್.ವೈ.ಎಸ್ ಕರ್ನಾಟಕ ರಾಜ್ಯ ಸದಸ್ಯ ಉಮ್ಮರ್ ಸಖಾಪಿ ಎಡಪ್ಪಾಲ, ಉಳ್ಳಾಲ ಕಾರ್ಪೊರೇಟರ್ ಉಸ್ಮಾನ್ ಕಲ್ಲಾಪು, ಎನ್.ಎಸ್.ಕರೀಂ ಹಾಜಿ ನೆಕ್ಕರೆ, ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸದಸ್ಯರುಗಳಾದ ಸುಫಿಯಾನ್ ಸಖಾಫಿ ಕಾವಲ್ ಕಟ್ಟೆ, ಮುಸ್ತಫಾ ನಯೀಮಿ ಮೋಂಟುಗೋಳಿ, ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು, ಸಯ್ಯದ್ ಖುಬೈಬ್ ತಂಙಳ್, ಯುಎಸ್ ಹಂಝ ಉಳ್ಳಾಲ, ಬಾವ ಹಾಜಿ ಪಂಜಳ, ಫಾರೂಕ್ ತಲಪಾಡಿ, ಡಿವಿಷನ್ ಪ್ರಧಾನ ಕಾರ್ಯದರ್ಶಿ ಶರೀಫ್ ಮುಡಿಪು, ಡಿವಿಷನ್ ಪ್ರತಿಭೋತ್ಸವ ಸಮಿತಿ ಚೈರ್ಮ್ಯಾನ್ ಫಾರೂಕ್ ಸಖಾಫಿ ಮದನಿ ನಗರ,ಕನ್ವೀನರ್ ತೌಸಿಫ್ ಸ ಅದಿ ಹರೇಕಳ ,ಮಜೀದ್ ಫರೀದ್ ನಗರ ,ಮುಸ್ತಫಾ ಝುಹ್ರಿ ತಲಪಾಡಿ, ಜಮಾಲುದ್ದೀನ್ ಸಖಾಫಿ ಮುದುಂಗಾರು ಕಟ್ಟೆ, ಹಮೀದ್ ನಾಟೆಕಲ್, ಶಿಹಾಬ್ ತೊಕ್ಕೊಟ್ಟು ,ಶಮೀರ್ ಸೇವಂತಿ ಗುಡ್ಡೆ , ನರಿಂಗಾನ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ರಹಿಮಾನ್ ಜಂದ ಹಿತ್ತಿಲು ಉಪಸ್ಥಿತರಿದ್ದರು, ತೌಸೀಫ್ ಸಅದಿ ಸ್ವಾಗತಿಸಿ,ಇಲ್ಯಾಸ್ ಪೊಟ್ಟೊಳಿಕೆ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!