ಬ್ರೆಝಿಲ್‍: ಜೈಲಿನಲ್ಲಿ ಭೀಕರ ಹಿಂಸಾಚಾರ-9 ಕೈದಿಗಳು ಸಾವು

ಬ್ರೆಝಿಲ್‍,ಸವೊ ಪೌಲೊ:-ಇಲ್ಲಿನ ಜೈಲಿನಲ್ಲಿ ಭುಗಿಲೆದ್ದ ಭೀಕರ ಹಿಂಸಾಚಾರದಲ್ಲಿ 9 ಕೈದಿಗಳು ಮೃತಪಟ್ಟು ಅನೇಕರು ತೀವ್ರ ಗಾಯಗೊಂಡಿದ್ದಾರೆ. ಸವೊ ಪೌಲೊದ ಅಪರೆಸಿ ಡಿ ಗೊಯಾನಿಯಾ ಕಾಂಪ್ಲೆಕ್ಸ್‍ನಲ್ಲಿರುವ ಕಲೊನಿಯಾ ಆಗ್ರೋ ಇಂಡಸ್ಟ್ರಿಯಲ್ ಕಾರಾಗೃಹದಲ್ಲಿ ನಿನ್ನೆ ಮಧ್ಯರಾತ್ರಿ ಸೆರೆಯಾಳುಗಳ ನಡುವೆ ತಲೆದೋರಿದ ಜಗಳಕ್ಕೆ 9 ಮಂದಿ ಬಲಿಯಾಗಿದ್ದಾರೆ. ಈ ಘರ್ಷಣೆಯಲ್ಲಿ 14 ಮಂದಿ ತೀವ್ರ ಗಾಯಗೊಂಡಿದ್ದಾರೆ ಎಂದು ಬ್ರೆಜಿಲ್ ಸುದ್ದಿತಾಣವೊಂದು ವರದಿ ಮಾಡಿದೆ.

ಕೈದಿಯೊಬ್ಬ ವೈರಿ ಗುಂಪಿನ ಇತರ ಮೂವರು ಬಂದಿಯಾಳುಗಳ ಮೇಲೆ ಹಲ್ಲೆ ನಡೆಸಿದ್ದೇ ಈ ಜಗಳಕ್ಕೆ ಕಾರಣ ಎನ್ನಲಾಗಿದೆ. ಘರ್ಷಣೆ ಭುಗಿಲೆದ್ದ ಸಂದರ್ಭದಲ್ಲಿ ಅಲ್ಲಿನ ಹಾಸಿಗೆಗಳು ಮತ್ತು ಪೀಠೋಪಕರಣಗಳಿಗೆ ಅಗ್ನಿಸ್ಪರ್ಶ ಮಾಡಲಾಗಿದ್ದು, ಬೆಂಕಿ ಅಕ್ಕಪಕ್ಕದ ಕೊಠಡಿಗಳಿಗೂ ವ್ಯಾಪಿಸಿತು. ಅದರಲ್ಲಿದ್ದ ಇತರ ಸೆರೆಯಾಳುಗಳು ಸುಟ್ಟು ಕರಕಲಾಗಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು.

Leave a Reply

Your email address will not be published. Required fields are marked *

error: Content is protected !!