ಪ್ರತಿದಿನ 3.5 ಜಿಬಿ 4ಜಿ ಡೇಟಾ- Airtel ನಿಂದ ಹೊಸ ಆಫರ್

ಬೆಂಗಳೂರು :ಪ್ರತಿದಿನ 3.5 ಜಿಬಿ 4ಜಿ ಡೇಟಾ ಸಿಗುವಂತೆ ಏರ್ ಟೆಲ್ ತನ್ನ ಗ್ರಾಹಕರಿಗಾಗಿ ಒಂದು ಹೊಸ ಪ್ರಿಪೇಡ್ ರಿಚಾರ್ಜ್ ಆಫರ್ ವೊಂದನ್ನು ಬಿಡುಗಡೆ ಮಾಡಿದೆ. ಗ್ರಾಹಕರು 799 ರೂ. ರಿಚಾರ್ಜ್ ಮಾಡಿದರೆ ಈ ಆಫರ್ ಸಿಗಲಿದೆ. ಜೊತೆಗೆ ಅನಿಯಮಿತ ಸ್ಥಳೀಯ ರೋಮಿಂಗ್, ಎಸ್.ಟಿ.ಡಿ. ಕರೆ ಹಾಗು ಅನಿಯಮಿತ ಎಸ್.ಎಂ.ಎಸ್ ಸೌಲಭ್ಯವು ಲಭ್ಯವಿದೆ.  ಹಾಗೆ ಈ ಪ್ಲಾನ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

ಏರ್ಟೆಲ್ 28 ದಿನಗಳಿಗೆ 98 ಜಿಬಿ 4ಜಿ ಡೇಟಾವನ್ನು ನೀಡುತ್ತಿದ್ದು, ಇದನ್ನು ದೆಹಲಿ,ಅಸ್ಸಾಂ, ಚೆನ್ನೈ, ಮುಂಬೈ, ಯುಪಿ ಮತ್ತು ಈಸ್ಟ್ ವೆಸ್ಟ್ ಹಾಗು ಉತ್ತರಾಖಂಡ್ ನಲ್ಲಿ ಈ ಆಫರ್ ಅನ್ನು ನವೆಂಬರ್ ತಿಂಗಳಿನಲ್ಲಿಯೇಯೇ ಬಿಡುಗಡೆ ಮಾಡಿತ್ತು. ಈ ಮೊದಲು  799 ರೂ ಗೆ ದಿನಕ್ಕೆ 3 ಜಿಬಿ ಡೇಟಾ ನೀಡಿದ್ದು ಈಗ ಅದನ್ನು 3.5 ಜಿಬಿಗೆ ಹೆಚ್ಚಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!