‘ಮಹಿಳೆಯರ ಹಜ್’ ಸೌದಿಯ ತೀರ್ಮಾನವನ್ನು ತನ್ನ ಬಗಲಿಗೆ ಹಾಕಿದ ಮೋದಿ

ಹೊಸದಿಲ್ಲಿ: ಮೂರು ವರ್ಷಗಳ ಹಿಂದೆ ಸೌದಿ ಅರೇಬಿಯಾ ಸರಕಾರ ಮಾಡಿದ ತೀರ್ಮಾನವನ್ನು ತಮ್ಮ ಸರಕಾರ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಎಲ್ಲ ಕ್ರೆಡಿಟನ್ನು ತಮ್ಮ ಬಗಲಿಗೆ ಹಾಕಿಕೊಳ್ಳುತ್ತಿದ್ದಾರೆ. ಇದರ ಅಗತ್ಯವಿದೆಯೇ? ಎಂದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಪ್ರಶ್ನಿಸಿದ್ದಾರೆ.

ನಾಲ್ವರು ಮಹಿಳೆಯರು ಗುಂಪಾಗಿ ಅಥವಾ ಪುರುಷ ಸಂಬಂಧಿಯ ಸಹಾಯದೊಂದಿಗೆ 45 ವರ್ಷಕ್ಕಿಂತ ಮೇಲ್ಪಟ್ಟ ಮುಸ್ಲಿಂ ಮಹಿಳೆ ಹಜ್‌ ಯಾತ್ರೆ ಕೈಗೊಳ್ಳುವ ಅವಕಾಶವನ್ನು 3 ವರ್ಷಗಳ ಹಿಂದೆ ಸೌದಿ ಅರೇಬಿಯಾ ಸರಕಾರ ನೀಡಿದೆ. ಯಾವುದೇ ರಾಷ್ಟ್ರದ 45 ವರ್ಷ ಮೇಲ್ಪಟ್ಟ ಮುಸ್ಲಿಂ ಮಹಿಳೆಯರು ಸ್ವತಂತ್ರವಾಗಿ ಹಜ್‌ ಯಾತ್ರೆ ಕೈಗೊಳ್ಳಬಹುದು. ಮತ್ತೊಂದು ಸರಕಾರ ಮಾಡಿದ ಕಾರ್ಯವನ್ನೇ ತಾನು ಮಾಡಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೊಂಡಿದ್ದಾರೆ. ಈ ನಿರ್ಣಯ ಕೈಗೊಳ್ಳಲು ಅಧಿಕಾರಕ್ಕೆ ಬಂದ ಮೇಲೆ ಇಷ್ಟು ವರ್ಷಗಳನ್ನು ತೆಗೆದುಕೊಂಡಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರಧಾನಿ ಮೋದಿ ಅವರು ಹಜ್‌ ಯಾತ್ರೆಗೆ ಮುಸ್ಲಿಂ ಮಹಿಳೆಯರ ಮೇಲಿನ ನಿಷೇಧವನ್ನು ತೆರವುಗೊಳಿಸಿರುವ ವಿಷಯವನ್ನು ತಿಳಿಸಿದ್ದರು. ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಓವೈಸಿ, ಇದೇನು ಮೋದಿ ಅವರ ಮಹಾನ್‌ ಕಾರ್ಯವಲ್ಲ, ಸೌದಿ ಅರೆಬಿಯಾ ಮಾಡಿದ ಘನಕಾರ್ಯದ ಕೀರ್ತಿಯನ್ನು ಮೋದಿ ತಮ್ಮ ಬಗಲಿಗೆ ಹಾಕಿಕೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ.

ಆದರೆ ಜತೆಗಾರನಿಲ್ಲದೆ ಒಂಟಿ ಮಹಿಳೆಗೆ ಹಜ್‌ ಯಾತ್ರೆಯಲ್ಲಿ ಪಾಲ್ಗೊಳ್ಳಲು ಸೌದಿ ಅರೆಬಿಯಾ ಸರಕಾರ ಅವಕಾಶ ನೀಡುತ್ತಿಲ್ಲ.

ಇವುಗಳನ್ನೂ ಓದಿ

Leave a Reply

Your email address will not be published. Required fields are marked *

error: Content is protected !!