ಸೌದಿ : ಚಿನ್ನ ಖರೀದಿದಾರರು ಗುರುತು ಚೀಟಿ ನೀಡುವುದು ಕಡ್ಡಾಯ

ರಿಯಾದ್: ಸೌದಿ ಅರೇಬಿಯಾದಲ್ಲಿ ಇನ್ನು ಮುಂದೆ ಚಿನ್ನ ಖರೀಸುವವರು ಗುರುತಿನ ಚೀಟಿ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ಅದೇ ರೀತಿ ಖರೀದಿಸಿದ ಅಂಗಡಿಯ ಸಂಪೂರ್ಣ ಮಾಹಿತಿ, ಚಿನ್ನದ ತೂಕ ಇತ್ಯಾದಿಗಳನ್ನು ಕ್ರಮವಾಗಿ ನಮೂದಿಸಿ ಗ್ರಾಹಕರಿಗೆ ನೀಡಬೇಕು ಎಂದು ಸಂಬಂಧಿಸಿದ  ಸಚಿವಾಲಯ ತಿಳಿಸಿದೆ.

ಚಿನ್ನ ಖರೀದಿದಾರರಿಗೆ ತಮ್ಮ ಮಾಹಿತಿಯನ್ನೊಳಗೊಂಡ ಬಿಲ್ ನೀಡುವ ಬಾಧ್ಯತೆಯಿದೆ ಎಂದು ಸಚಿವಾಲಯ ಹೇಳಿದೆ.ಅಂಗಡಿ ಹೆಸರು, ಪರವಾನಗಿ ಸಂಖ್ಯೆ, ಪ್ರತಿ ಗ್ರಾಮಿಗೆ ಇಂತಿಷ್ಟು ಬೆಲೆ ಎನ್ನುವುದನ್ನು ಸೂಚಿಸುವ ಮಾಹಿತಿ, ಖರೀದಿಸುವ ಗ್ರಾಹಕನ ಇಖಾಮ ಸಂಖ್ಯೆ ಮುಂತಾದ ಬಗ್ಗೆ ಸ್ಪಷ್ಟವಾಗಿ ಬಿಲ್ ನಲ್ಲಿ ನಮೂದಿಸಿರ ಬೇಕು.

ಅದೇ ವೇಳೆ, ರತ್ನ ಖರೀದಿಸುವವರಿಗೆ ಅದರ ಮೌಲ್ಯ, ತೂಕ, ತಾರೀಖು ಮತ್ತು ಬೆಲೆಯನ್ನು ನಮೂದಿಸಿದ ಚೀಟಿ ನೀಡಬೇಕೆಂದು ಚೇಂಬರ್ ಆಫ್ ಕಾಮರ್ಸ್ ಉಪ ಕಾರ್ಯದರ್ಶಿ ಹಮೂದ್ ಅಲ್ ರಾಬಿಯ ವ್ಯಕ್ತಪಡಿಸಿದ್ದಾರೆ. ದೊಡ್ಡ ಮೊತ್ತದ ಖರೀದಿದಾರರಿಗೆ ಅನ್ಯಾಯವಾಗಬಾರದು ಎನ್ನುವ ಉದ್ದೇಶದಿಂದ ಈ ನಿಬಂಧನೆಗಳನ್ನು ಜಾರಿಗೆ ತರಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!