janadhvani

Kannada Online News Paper

ಖತಾರ್: ಫ್ಯಾಮಿಲಿ ಸಂದರ್ಶಕ ವೀಸಾ ಪಡೆಯಲು ಆನ್ ಲೈನ್ ಸೇವೆ

ದೊಹಾ: ಕುಟುಂಬ ಸದಸ್ಯರನ್ನು ಖತರ್‌ಗೆ ತರಲು ವೀಸಾ (ಫ್ಯಾಮಿಲಿ ವಿಸಿಟ್ ವೀಸಾ)ಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಸಾರ್ವಜನಿಕರಿಗೆ ಹೆಚ್ಚಿನ ಇ-ಸೇವೆಗಳನ್ನು ಒದಗಿಸಲು ಗೃಹ ಸಚಿವಾಲಯ ಹೊಸ ಯೋಜನೆಯನ್ನು ಪ್ರಾರಂಭಿಸಿದೆ.

ಗೃಹ ವ್ಯವಹಾರಗಳ ಸಚಿವಾಲಯದ ವೆಬ್ಸೈಟ್ ಮೂಲಕ ಅಥವಾ ಮೆಟ್ರಾಸ್ -2 ಅಪ್ಲಿಕೇಶನ್ ಮೂಲಕ ಆನ್ಲೈನ್ ​​ಅರ್ಜಿಯನ್ನು ಸಲ್ಲಿಸಬಹುದು.

ಅಸ್ತಿತ್ವದಲ್ಲಿರುವ ಕಾಗದ ವ್ಯವಸ್ಥೆಯನ್ನು ಹೊಸ ಇಲೆಕ್ಟ್ರಾನಿಕ್ ಸಿಸ್ಟಮ್‌ಗೆ ಬದಲಾಯಿಸುವ ಸಲುವಾಗಿ ಈ ಕ್ರಮ ಜಾರಿಗೊಳಿಸಲಾಗುತ್ತಿದೆ ಎಂದು ವಿದೇಶಾಂಗ ಇಲಾಖೆಯ ಪಾಸ್‌ಪೋರ್ಟ್ ವಿಭಾಗದ ನಿರ್ದೇಶಕ ಜನರಲ್ ಬ್ರಿಗೇಡಿಯರ್ ಮುಹಮ್ಮದ್ ಅಹ್ಮದ್ ಅಲ್ ಅಥೀಕ್ ತಿಳಿಸಿದ್ದಾರೆ.ಎಲೆಕ್ಟ್ರಾನಿಕ್ ಸೇವೆಯ ಮೌಲ್ಯಮಾಪನ ಎರಡು ತಿಂಗಳುಗಳಲ್ಲಿ 100% ಯಶಸ್ವಿಯಾಗಿದೆ ಎಂದು ಅವರು ಹೇಳಿದರು.

ವೀಸಾ ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳನ್ನು ಆನ್ ಲೈನ್ ನಲ್ಲಿ ನಿರ್ದಿಷ್ಟವಾದ ಬಾಕ್ಸ್ ಗಳಲ್ಲಿ ಅಪ್ಲೋಡ್ ಮಾಡಬೇಕು.ನಿಮ್ಮ ಅರ್ಜಿಯ ಪ್ರಗತಿಯನ್ನು ಆನ್ ಲೈನ್ ನಲ್ಲಿ ಪರಿಶೀಲಿಸಬಹುದು. ವೀಸಾ ಶುಲ್ಕವನ್ನೂ ಪಾವತಿಸ ಬಹುದಾಗಿದೆ.

ಯಾವುದೇ ಸಂದರ್ಭದಲ್ಲಿ, ಅಪ್ಲಿಕೇಶನ್ ಅಥವಾ ಸಲ್ಲಿಸಿದ ದಾಖಲೆಗಳಲ್ಲಿ ದೋಷ ಕಂಡುಬಂದರೆ ಅರ್ಜಿದಾರರಿಗೆ ತಿಳಿಸಲಾಗುತ್ತದೆ.ಅದನ್ನು ಸರಿಪಡಿಸಲು ಅವಕಾಶವಿದೆ. ಅಪ್ಲಿಕೇಶನ್ನೊಂದಿಗೆ ಸಲ್ಲಿಸಿದ ದಾಖಲೆಗಳು ಸ್ಪಷ್ಟವಾಗಿರುವಂತೆ ಗಮನಿಸ ಬೇಕಾಗಿದೆ.ಸ್ಕ್ಯಾನ್ ಮಾಡಲಾದ ದಾಖಲೆಯು ಸ್ಪಷ್ಟವಲ್ಲದೇ ಇದ್ದಲ್ಲಿ ಪುನಃ ಸ್ಪಷ್ಟವಾದ ರೀತಿಯಲ್ಲಿ  ಅಪ್ಲೋಡ್ ಮಾಡಬೇಕಾಗುತ್ತದೆ.

ಪ್ರಸ್ತುತ,ವಿಸಾ ಕೇಂದ್ರಗಳಲ್ಲಿ ದಾಖಲೆಗಳನ್ನು ಸಲ್ಲಿಸುವ ಮೂಲಕ ವೀಸಾಗಾಗಿ ಅರ್ಜಿ ಸಲ್ಲಿಸಲಾಗುತ್ತಿದೆ.ಇದರ ಬದಲಿಗೆ, ಸ್ವತಂತ್ರವಾಗಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನವು ಕಾರ್ಮಿಕರಿಗೆ ಪ್ರಯೋಜನವಾಗಬಹುದು.ಕುಟುಂಬ ಭೇಟಿ ವೀಸಾದಲ್ಲಿ ತಂದೆ, ತಾಯಿ, ಹೆಂಡತಿ, ಮಕ್ಕಳು ಮತ್ತು ಇತರ ಸಂಬಂಧಿಗಳನ್ನು ತರಬಹುದು.

ಅರ್ಜಿಯೊಂದಿಗೆ ಸಂಬಂಧವನ್ನು ಸ್ಪಷ್ಟಪಡಿಸುವ ದಾಖಲೆಯನ್ನು ಸಲ್ಲಿಸಬೇಕು. ಒಂದು ತಿಂಗಳಿಗೆ ವೀಸಾವನ್ನು ಅನುಮತಿಸಲಾಗುತ್ತದೆ ನಂತರ, ವೈದ್ಯಕೀಯ ಪರೀಕ್ಷೆಯನ್ನು ಪೂರ್ಣಗೊಳಿಸಿದ ಬಳಿಕ ಮತ್ತೆ ಆರು ತಿಂಗಳವರೆಗೆ ವಿಸಾವನ್ನು ವಿಸ್ತರಿಸಬಹುದು.

error: Content is protected !! Not allowed copy content from janadhvani.com