janadhvani

Kannada Online News Paper

ರಮಝಾನಿನಲ್ಲಿ ಹೆಚ್ಚು ಸಮಯ ಕೆಲಸ ಮಾಡಿಸಬಾರದು-ಸೌದಿ ಕಾರ್ಮಿಕ ಸಚಿವಾಲಯ

ರಿಯಾದ್: ಸೌದಿ ಅರೇಬಿಯಾದ ಖಾಸಗಿ ವಲಯಕ್ಕೆ ಕೆಲಸ ಮಾಡುವ ಸಮಯವು ರಮಝಾನಿನಲ್ಲಿ ದಿನಕ್ಕೆ ಆರು ಗಂಟೆಗಳಾಗಿದೆ ಎಂದು ಕಾರ್ಮಿಕ ಮತ್ತು ಸಾಮಾಜಿಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ನೌಕರರನ್ನು ಹೆಚ್ಚು ಸಮಯ ಕೆಲಸ ಮಾಡಲು ಬಲವಂತ ಪಡಿಸಬಾರದು ಎಂದು ಸಚಿವಾಲಯ ನಿರ್ದೇಶನ ನೀಡಿದೆ.

ಖಾಸಗಿ ವಲಯದಲ್ಲಿ 6 ಗಂಟೆಗಳು ಮತ್ತು ಸರ್ಕಾರಿ ನೌಕರರಿಗೆ 5 ಗಂಟೆಗಳು ರಮಝಾನಿನಲ್ಲಿ ಕೆಲಸದ ಸಮಯವಾಗಿದೆ.ಅದನ್ನು ಉಲ್ಲಂಘಿಸಲು ಯಾರನ್ನೂ ಅನುಮತಿಸುವುದಿಲ್ಲ ಎಂದು ಸಚಿವಾಲಯ ತಿಳಿಸಿದೆ.

ಸರ್ಕಾರಿ ಸಂಸ್ಥೆಗಳಲ್ಲಿ ಬೆಳಗ್ಗೆ 10 ರಿಂದ 3 ರವರೆಗೆ ಕೆಲಸದ ಸಮಯವಾಗಿದೆ.ಖಾಸಗಿ ವಲಯದಲ್ಲಿನ ಸಂಸ್ಥೆಗಳು ಸಚಿವಾಲಯದ ನಿರ್ದೇಶನದಂತೆ ಕೆಲಸದ ಸಮಯವನ್ನು ಕಠಿಣವಾಗಿ ಪಾಲಿಸಬೇಕು.

ಖಾಸಗಿ ವಲಯದಲ್ಲಿ ನಿಗಧಿತ ಸಮಯಕ್ಕಿಂತ ಹೆಚ್ಚು ಸಮಯ ಕೆಲಸ ಮಾಡುವಂತೆ  ಒತ್ತಾಯಿಸುವ ಮಾಲೀಕರ ವಿರುದ್ಧ ಕಾರ್ಮಿಕರು ಲೇಬರ್ ಕಚೇರಿಗೆ ದೂರು ಸಲ್ಲಿಸಬೇಕು.ಕಾರ್ಮಿಕ ಸಚಿವಾಲಯದ ಟೋಲ್ ಫ್ರೀ ಸಂಖ್ಯೆ ಸಹ ಲಭ್ಯವಿದೆ.

ಸರಕಾರಿ ಕಚೇರಿಗಳಿಗೆ ಮುಂದಿನ ತಿಂಗಳು 7ರಿಂದ ಈದ್ ಅಲ್-ಫಿತರ್ ರಜೆ ಪ್ರಾರಂಭಿಸಲಿದೆ ಎಂದು ಕಾರ್ಮಿಕ ಸಚಿವಾಲಯ ಘೋಷಿಸಿದೆ.

error: Content is protected !! Not allowed copy content from janadhvani.com