ಯುಎಇ ಯಲ್ಲಿ skype ಸ್ಥಿಗಿತ: ಬದಲಿಗೆ ನೂತನ ಆ್ಯಪ್

ದುಬೈ: ಹಬ್ಬಗಳ ಸಡಗರ, ಸಂಭ್ರಮಗಳ ಮಧ್ಯೆ ದೂರದಲ್ಲಿ ಇರುವ ತಮ್ಮವರೊಂದಿಗೆ ಉಚಿತ ಸೇವೆಯಾದ ಸ್ಲೈಪ್ ಮೂಲಕ ಸಂಧಿಸಲು ಮತ್ತು ಶುಭಾಶಯ ಕೋರಲು ಸಾಧ್ಯವಾಗುತ್ತಿಲ್ಲ ಎನ್ನುವುದು ಅನಿವಾಸಿಗಳ ದೂರಾಗಿದೆ.

ದೇಶದ ಟೆಲಿಫೋನ್ ರೆಗುಲೇಟರಿ ಅಥಾರಿಟಿಯ ನಿಯಂತ್ರಣ ದಿಂದಾಗಿ ಸ್ಕೈಪ್ಗೆ ಅಡಚಣೆಯುಂಟಾಗಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ತಿಳಿಸಿದ್ದಾರೆ. ವಾಯ್ಸ್ ಓವರ್ ಇಂಟರ್ನೆಟ್ ಪ್ರೋಟೋಕಾಲ್ (ವಾಯ್ಪ್) ಸೇವೆಗೆ ದೇಶದಲ್ಲಿ ಸ್ಕೈಪ್ ಅನುಮತಿಯನ್ನು ಪಡೆದಿಲ್ಲ ಎನ್ನುವ ಕಾರಣಕ್ಕಾಗಿ ಸ್ಕೈಪ್  ನಿಯಂತ್ರಣಕ್ಕೆ ತುತ್ತಾಗಿದೆ ಎಂದಿದ್ದಾರೆ.

ಅದೇ ಸಮಯ ಡೂ- ಇತ್ತಿಸಾಲಾತ್ ಚಂದಾದಾರರಿಗೆ ಪ್ರತೀ ತಿಂಗಳು 50 ದಿರ್‌ಹಂ ಪಾವತಿಸಿದರೆ ಬೋಟಿಂ, ಸಿ’ಮಿ ಮುಂತಾದ ಆ್ಯಪ್ಗಳನ್ನು ಮೊಬೈಲ್ ಗೆ ಡೌನ್‌ಲೋಡ್ ಮಾಡಿ, ಸ್ಕೈಪ್ ನಂತೆ ಉಪಯೋಗಿಸಬಹುದಾಗಿದೆ. ಬಳಕೆದಾರರು ಇಂಟರ್ನೆಟ್ ನೊಂದಿಗೆ ಕಾಲಿಂಗ್ ಗೆ ಸಂಬಂಧ ಕಲ್ಪಿಸಿದಾಗ ಆ್ಯಪ್ ಕಾರ್ಯಕ್ಷಮತೆ ಗೆ ಬರುತ್ತದೆ. ವಿಶ್ವದ ಎಲ್ಲಾಕಡೆ ಈ ಆ್ಯಪ್ಗಳ ಮುಖಾಂತರ ವೀಡಿಯೋ ಕಾಲ್ ಮಾಡಬಹುದು ಎನ್ನುವುದು ಈ ಆ್ಯಪ್ ಗಳ ವಿಷೇಶತೆಯಾಗಿದೆ.

ಇವುಗಳನ್ನೂ ಓದಿ

Leave a Reply

Your email address will not be published. Required fields are marked *

error: Content is protected !!