janadhvani

Kannada Online News Paper

ರಮಝಾನಿನಲ್ಲಿ ಕೆಲಸದ ಸಮಯ ಹಾಗೂ ಪೇ ಪಾರ್ಕಿಂಗ್ ವೆಳಾಪಟ್ಟಿ

ಅಬುಧಾಬಿ: ರಮಝಾನಿನಲ್ಲಿ ಖಾಸಗಿ ವಲಯದ ಕೆಲಸದ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.ಸರ್ಕಾರಿ ಮಾನವ ಸಂಪನ್ಮೂಲಗಳ ಫೆಡರಲ್ ಪ್ರಾಧಿಕಾರವು ರಮಝಾನಿನ ಕೆಲಸದ ಸಮಯವು ಸಾಮಾನ್ಯ ಕೆಲಸದ ಸಮಯಕ್ಕಿಂತ ಎರಡು ಗಂಟೆ ಕಡಿಮೆ ಎಂದು ತಿಳಿಸಿದೆ.

ಮಾನವ ಸಂಪನ್ಮೂಲ ಮತ್ತು ವಲಸೆ ಸಚಿವಾಲಯದ ನೌಕರರು ಬೆಳಿಗ್ಗೆ 9 ರಿಂದ ಮಧ್ಯಾಹ್ನ  2 ರ ತನಕ ಕೆಲಸ ಮಾಡಲಿದ್ದಾರೆ ಎಂದು ಸಚಿವ ನಾಸರ್ ಬಿನ್ ಥಾನಿ ಅಲ್ ಹಮ್ಲಿ ಹೇಳಿದರು
ಶಾಲೆಗಳು 5 ಗಂಟೆಗಳು ಕಾರ್ಯಾಚರಿಸಲಿದೆ.

ಪಾರ್ಕಿಂಗ್ ಸಮಯದಲ್ಲಿ ಬದಲಾವಣೆ: 

ರಂಝಾನಿನ ಪಾರ್ಕಿಂಗ್ ಸಮಯವನ್ನು ಘೋಷಿಸಲಾಗಿದ್ದು,ಎರಡು ಹಂತಗಳಲ್ಲಿ ಪಾರ್ಕಿಂಗ್ ಶುಲ್ಕವನ್ನು ಏರ್ಪಡಿಸಲಾಗಿದೆ.ದುಬೈಯಲ್ಲಿ ಪಾರ್ಕಿಂಗ್ ಶುಲ್ಕ ಬೆಳಿಗ್ಗೆ 8 ರಿಂದ ಸಂಜೆ 6 ರ  ವರೆಗೆ ಮತ್ತು ರಾತ್ರಿ 8 ರಿಂದ 12 ರವರೆಗೆ ಇರುತ್ತದೆ.
ಸಂಜೆ 6ರಿಂದ ರಾತ್ರಿ 8ರ ನಡುವೆ 2 ಗಂಟೆ ಉಚಿತ ಪಾರ್ಕಿಂಗ್ ಇರುತ್ತದೆ.

ಟೀಕೊಂ ಪ್ರದೇಶದಲ್ಲಿ ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಪಾರ್ಕಿಂಗ್ ಶುಲ್ಕ ನೀಡಬೇಕು.ಮಲ್ಟಿ ಲೆವೆಲ್ ಪಾರ್ಕಿಂಗ್ ಕೇಂದ್ರಗಳಲ್ಲಿ ಸಾಮಾನ್ಯವಾಗಿ ಇರುವಂತೆ ಪಾರ್ಕಿಂಗ್ ಶುಲ್ಕವನ್ನು ವಿಧಿಸಲಾಗುತ್ತದೆ ಎಂದು ರೋಡ್ಸ್ ಮತ್ತು ಟ್ರಾನ್ಸ್ ಪೋರ್ಟ್ಸ್ ಅಥಾರಿಟಿ ಹೇಳಿದೆ.

error: Content is protected !! Not allowed copy content from janadhvani.com