ಕೆಸಿಎಫ್ ರಿಯಾದ್ ಝೋನಲ್ ಅಧೀನದಲ್ಲಿ ಮುರುಸಲಾತ್ ನೂತನ ಘಟಕ ಅಸ್ತಿತ್ವಕ್ಕೆ

ರಿಯಾದ್: ಕೆ.ಸಿ.ಎಫ್ ರಿಯಾದ್ ಝೋನಲ್ ಅಧೀನದಲ್ಲಿ ಹೊಸ  ಮುರುಸಲಾತ್ ಘಟಕದ ರೂಪೀಕರಣವು ತಾ: 29-12-2017 ರಂದು ಬೆಳಿಗ್ಗೆ ಮುರುಸಲಾತ್ ವಸತಿಗೃಹವೊಂದರಲ್ಲಿ ಕೆ.ಸಿ.ಎಫ್ ಸೌದಿ ರಾಷ್ಟೀಯ ಸಮಿತಿ ಉಪಾಧ್ಯಕ್ಷ ನಝೀರ್ ಹಾಜಿ ಕಾಶಿಪಟ್ನ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯನ್ನು ಕೆ.ಸಿ.ಎಫ್ ರಾಷ್ಟ್ರೀಯ ಶಿಕ್ಷಣ ವಿಭಾಗದ ಅಧ್ಯಕ್ಷರಾದ ಅಬ್ದುಲ್ಲಾ ಸಖಾಫಿ ಉದ್ಘಾಟಿಸಿದರು.ಅಧ್ಯಕ್ಷತೆ ಭಾಷಣ ಮಾಡಿದ ನಝೀರ್ ಹಾಜಿ ಕಾಶಿಪಟ್ನ ಕೆ.ಸಿ.ಎಫ್ ಗಲ್ಫ್ ನಲ್ಲಿ ತಂದಿರುವ ಕ್ರಾಂತಿಕಾರಿ ಬದಲಾವಣೆಗಳ ಕುರಿತು ಮಾತನಾಡುತ್ತಾ, ಸಂಘಟನೆಯು ಹೊರ ತಂದಿರುವ ಗಲ್ಫ್ ಇಶಾರ, ಮೆಂಬರ್ ರಿಲೀಫ್ ಫಂಡ್ (MRF), ಅಸ್ಸುಫ್ಫಃ ತರಗತಿಯ ಬಗ್ಗೆ ಸವಿವರವಾಗಿ ನೂತನ ಸಮಿತಿ ಸದಸ್ಯರಿಗೆ ಮಾಹಿತಿ ನೀಡಿದರು.

ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿ ಆರ್ಗನೈಝಿಂಗ್ ಚೆರ್ಮಾನ್ ಸಿದ್ದೀಕ್ ಸಖಾಫಿ ಹಾಗೂ ಕೆ.ಸಿ.ಎಫ್. ರಿಯಾದ್ ಝೋನ್ ಪ್ರಧಾನ ಕಾರ್ಯದರ್ಶಿ ಬಶೀರ್ ತಲಪಾಡಿ ನೂತನ ಸಮಿತಿಗೆ ಶುಭಹಾರೈಸಿದರು. ನಂತರ ನಡೆದ ನೂತನ ಸಮಿತಿ ರಚನೆಯ ನೇತೃತ್ವವನ್ನು ಕೆ.ಸಿ.ಎಫ್.ರಿಯಾದ್ ಝೋನ್ ಆರ್ಗನೈಝಿಂಗ್‌ ವಿಂಗ್ ಕನ್ವೀನರ್ ನವಾಝ್ ಚಿಕ್ಕಮಗಳೂರು ವಹಿಸಿದ್ದರು.

ಸಭೆಯ ಆರಂಭದಲ್ಲಿ  ಸಿದ್ದೀಕ್ ಸಖಾಫಿ ಪೆರುವಾಯಿಯವರು ದುಆ ನೆರವೇರಿಸಿದರೆ, ದಾವೂದ್ ಸಅದಿಯವರು ಸ್ವಾಗತ ಮಾಡಿದರು. ಕೊನೆಯಲ್ಲಿ ನೂತನ ಪ್ರ.ಕಾರ್ಯದರ್ಶಿ ನುಮಾನ್ ಸರಳಿಕಟ್ಟೆ ವಂದಿಸಿದರು.ವೇದಿಕೆಯಲ್ಲಿ ವಲಯ ಸೆಕ್ಟರ್ ಅಧ್ಯಕ್ಷ ಮುಸ್ತಫಾ ಝೈನಿ ಕಂಬಿಮಣೆ, ರಿಯಾದ್ ಝೋನ್ ರಿಲೀಫ್ ವಿಂಗ್ ಕನ್ವೀನರ್ ಇಸ್ಮಾಯಿಲ್ ಜೋಗಿಬೆಟ್ಟು ಹಾಗೂ ಬದಿಯಾ ಸೆಕ್ಟರ್ ಆಧ್ಯಕ್ಷ ಉಮರ್ ಅಳಕೆಮಜಲು ಉಪಸ್ಥಿತರಿದ್ದರು.ಕೆ.ಸಿ.ಎಫ್ ಮುರುಸಲಾತ್ ಘಟಕದ ನೂತನ ಸಮಿತಿ :ಲ್ ರಝಾಕ್ ಉಜಿರೆ. ಪ್ರ.ಕಾರ್ಯದರ್ಶಿ: ನುಮಾನ್ ಸರಳಿಕಟ್ಟೆ, ಜೊತೆ ಕಾರ್ಯದರ್ಶಿ:ಮಸೂದ್‌ ಪಟ್ರಕೋಡಿ, ಫಯಾಝ್ ಮಣಿಪಾಲ, ಕೋಶಾದಿಕಾರಿ: ಸುಲೈಮಾನ್ ನೆಲ್ಯಾಡಿ.

ಕಾರ್ಯಕಾರಿ‌ಸಮಿತಿ‌ ಸದಸ್ಯರು:ರಝಾಕ್ ಹಾಜಿ ಉಜಿರೆ, ಅಬ್ದುಲ್‌ ಲತೀಫ್ ಮಿಸ್ಬಾಹಿ,  ಬಶೀರ್ B.M, P.K. ದಾವೂದ್‌ ಸಅದಿ, ಇಬ್ರಾಹಿಂ‌ ಕುಕ್ಕಾಜೆ, ಇಸ್ಹಾಕ್ ಉಜಿರೆ, ಇರ್ಫಾನ್‌‌ ಕಾರ್ಕಳ.

Leave a Reply

Your email address will not be published. Required fields are marked *

error: Content is protected !!